Advertisement

ಸಿಗಲಿದೆ ಫ್ಯಾಮಿಲಿ ಐಡಿ ಕಾರ್ಡ್‌!

12:31 AM Jun 04, 2021 | Team Udayavani |

ಹೊಸದಿಲ್ಲಿ: ಆಧಾರ್‌ ಕಾರ್ಡ್‌ ಮಾದರಿ ಯಲ್ಲೇ ದೇಶದ ಪ್ರತೀ ಕುಟುಂಬಕ್ಕೂ ಕುಟುಂಬ ಕಾರ್ಡೊಂದನ್ನು ನೀಡುವ ಹೊಸ ಚಿಂತನೆಗೆ ಮೋದಿ ಸರಕಾರ ಕೈ ಹಾಕಿದೆ. ಈ ಕಾರ್ಡ್‌ನಲ್ಲಿಯೂ ಆಧಾರ್‌ ಕಾರ್ಡ್‌ನಲ್ಲಿರುವಂತೆಯೇ ಒಂದು ವಿಶಿಷ್ಟ ಸಂಖ್ಯೆಯಿರಲಿದ್ದು, ಆ ಸಂಖ್ಯೆಯ ಮೂಲಕ ಆ ಕುಟುಂಬವನ್ನು ಗುರುತಿಸಬಹುದಾಗಿದೆ.

Advertisement

ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೈ) ಅಧಿಕಾರಿಗಳು, ನ್ಯಾಶನಲ್‌  ಇನ್ಫೊರ್ಮ್ಯಾಟಿಕ್‌ ಸೆಂಟರ್‌ (ಎನ್‌ಐಸಿ) ಹಾಗೂ ನ್ಯಾಶನಲ್‌ ಇನ್ಫೊರ್ಮ್ಯಾಟಿಕ್‌ ಸೆಂಟರ್‌ ಸರ್ವೀಸಸ್‌ ಇಂಕ್‌ (ಎನ್‌ಐಸಿಎಸ್‌ಐ) ಅಧಿಕಾರಿಗಳು ಸೇರಿಕೊಂಡು ಈ ಯೋಜನೆ ಜಾರಿಗೊಳಿ ಸಲು ವಿವಿಧ ಸಚಿವಾಲಯಗಳಿಗೆ ಪತ್ರ ಬರೆದು ಸಲಹೆ ಕೇಳಿದ್ದಾರೆ. ಇದರ ಜತೆಗೆ ಎಪ್ರಿಲ್‌ನಲ್ಲಿ ಒಂದು ಹಂತದ ಚರ್ಚೆ ನಡೆದಿತ್ತು. ಮಾಹಿತಿ ಹಂಚಿಕೆ ಮತ್ತು ಇತರ ಅಂಶಗಳಿಗಾಗಿ ಶೀಘ್ರವೇ ನೋಡಲ್‌ ಅಧಿಕಾರಿ ನೇಮಕಗೊಳಿ ಸುವಂತೆ ಸಚಿವಾಲಯಗಳಿಗೆ ಮನವಿ ಮಾಡಲಾಗಿದೆ. ಜತೆಗೆ ಶೀಘ್ರದಲ್ಲಿಯೇ ಸಲಹಾ ಸಭೆಗಳನ್ನು ನಡೆಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು “ದ ಪ್ರಿಂಟ್‌’ಗೆ ತಿಳಿಸಿದ್ದಾರೆ.

ಉದ್ದೇಶವೇನು?: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಲಾಭ ವನ್ನು ಪ್ರತೀ ಕುಟುಂಬಕ್ಕೂ ಸಿಗುವಂತೆ ಮಾಡುವ ಉದ್ದೇಶದಿಂದ ಈ ಕುಟುಂಬ ಕಾರ್ಡ್‌ ಪರಿಕಲ್ಪನೆಗೆ ಮೂಲ ಕಾರಣ ಎಂದು ಕೇಂದ್ರದ ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.

ಹರಿಯಾಣ ಮಾದರಿ: 2019ರ ಜುಲೈಯಲ್ಲಿ ಇಂಥ ಕಾರ್ಡ್‌ ಹರಿಯಾಣ ದಲ್ಲಿ ಜಾರಿಯಾಗಿದೆ. ಅದಕ್ಕೆ “ಪರಿವಾರ್‌ ಪೆಹಚಾನ್‌ ಪತ್ರ’ ಎಂದು ಹೆಸರು ಇರಿಸಲಾಗಿದೆ. ಕುಟುಂಬದಲ್ಲಿನ ಎಲ್ಲ ಸದಸ್ಯರನ್ನು ಒಳಗೊಂಡಂತೆ ಇರುವ ಒಂದು ಕಾರ್ಡ್‌. ಅದಕ್ಕಾಗಿ ರಾಜ್ಯ ಸರಕಾರದ ಯಾವುದಾದರೂ ಒಂದು ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವುದು ಅಗತ್ಯ. ಕುಟುಂಬ ಸದಸ್ಯರ ಅನುಮತಿ ಪಡೆದುಕೊಂಡೇ ಅವರ ಪ್ರಾಥಮಿಕ ವಿವರಗಳನ್ನು ಅಲ್ಲಿ ಸಂಗ್ರಹಿಸಲಾಗುತ್ತಿದೆ.

ಕಾರ್ಡ್‌ಪ್ರಯೋಜನ :

Advertisement

ಪ್ರತಿಯೊಂದು ಕುಟುಂಬಕ್ಕೂ ಕಾರ್ಡ್‌ ವಿತರಣೆ.

ಪ್ರತೀ ಕಾರ್ಡ್‌ನಲ್ಲಿಯೂ ಒಂದು ವಿಶಿಷ್ಟ ಗುರುತಿನ ಸಂಖ್ಯೆ.

ಕುಟುಂಬದ ಎಲ್ಲ ಸದಸ್ಯ ರಿಗೂ ಇದೇ ಸಂಖ್ಯೆ ಅನ್ವಯ.

ಈ ಮೂಲಕ ಪ್ರತೀ ಕುಟುಂಬವನ್ನೂ ರಾಷ್ಟ್ರೀಯ ಕುಟುಂಬ ಯೋಜನೆಗಳ ಜಾಲದಲ್ಲಿ ನೋಂದಣಿ.

ಇದರಿಂದ ಕುಟುಂಬ ಆಧಾರಿತ ಯೋಜನೆಗಳ ಫ‌ಲಾನುಭವಿಗಳನ್ನು ಗುರು ತಿಸಲು ನೆರವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next