Advertisement

ಮದಗಜನತ್ತ ಫ್ಯಾಮಿಲಿ ಆಡಿಯನ್ಸ್‌

08:32 AM Dec 07, 2021 | Team Udayavani |

ಕಳೆದ ಶುಕ್ರವಾರ ಬಿಡುಗಡೆಯಾಗಿರುವ ಶ್ರೀಮುರಳಿ ನಟನೆಯ “ಮದಗಜ’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರ ಭರ್ಜರಿ ಪ್ರದರ್ಶನ ದೊಂದಿಗೆ ಮುಂದೆ ಸಾಗುತ್ತಿದೆ. ಮಾಸ್‌ ಸಿನಿಮಾವಾದರೂ ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್‌ ಅಂಶಗಳಿರುವುದರಿಂದ ಚಿತ್ರಕ್ಕೆ ಫ್ಯಾಮಿಲಿ ಆಡಿಯನ್ಸ್‌ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

Advertisement

ಈ ಮೂಲಕ ಚಿತ್ರದ ಕಲೆಕ್ಷನ್‌ ಕೂಡಾ ಹೆಚ್ಚಾಗಿದೆ. ಕಳೆದ ಮೂರು ದಿನಗಳಲ್ಲಿ ಚಿತ್ರ 20ಕೋಟಿಗೂ ಹೆಚ್ಚಿನ ಕಲೆಕ್ಷನ್‌ ಮಾಡಿದೆ ಎನ್ನುವುದು ಚಿತ್ರತಂಡದ ಮಾಹಿತಿ. ಅಂದಹಾಗೆ, “ಮದಗಜ’ ಚಿತ್ರ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾ. ಜೊತೆಗೆ ಒಂದಷ್ಟು ಸೆಂಟಿಮೆಂಟ್‌ ಅಂಶಗಳನ್ನು ಈ ಚಿತ್ರದಲ್ಲಿ ಸೇರಿಸಲಾಗಿದೆ.

ಈ ಮೂಲಕ ಚಿತ್ರವನ್ನು ಮಾಸ್‌-ಕ್ಲಾಸ್‌ ಇಷ್ಟವಾಗುವಂತೆ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಉಮಾಪತಿ ನಿರ್ಮಿಸಿರುವ ಈ ಚಿತ್ರವನ್ನು ಮಹೇಶ್‌ ಕುಮಾರ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್‌ ನಟಿಸಿದ್ದಾರೆ. ಉಳಿದಂತೆ ಜಗಪತಿ ಬಾಬು, ಚಿಕ್ಕಣ್ಣ, ರಂಗಾಯಣ ರಘು ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next