Advertisement

ರಂಜಾನ್‌ ಮಾರ್ಗಸೂಚಿ ಪಾಲಿಸಿ

03:46 PM Apr 22, 2020 | Suhan S |

ಮಹಾಲಿಂಗಪುರ: ಮೇ 3ರವರೆಗೂ ಲಾಕ್‌ಡೌನ್‌ ಇರುವ ಕಾರಣದಿಂದಾಗಿ ರಾಜ್ಯ ಸರಕಾರ ರಂಜಾನ್‌ ಹಬ್ಬದ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಹೇಳಿದರು.

Advertisement

ಪಟ್ಟಣದ ಚೆಕ್‌ಪೋಸ್ಟ್‌ ಮತ್ತು ಪುರಸಭೆಗೆ ಭೇಟಿ ನೀಡಿ ಲಾಕ್‌ಡೌನ್‌ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು. ರಂಜಾನ್‌ ರೋಜಾ ಮತ್ತ ಹಬ್ಬ ಆಚರಿಸುವವರು ಯಾರಿಗೂ ಮಸೀದಿ ಅಥವಾ ದರ್ಗಾಗಳಲ್ಲಿ ಐದು ಬಾರಿ ಮಾಡುವ ಸಾಮೂಹಿಕ ಪ್ರಾರ್ಥನೆಗಳಿಗೆ ಮತ್ತು ಜುಮ್ಮಾ ಅಥವಾ ತಾರವೀಹ್‌ ಪ್ರಾರ್ಥನೆಗಳಿಗೂ ಅನುಮತಿ ಇಲ್ಲ. ಜುಮ್ಮಾ ಮತ್ತು ತಾರವೀಹ್‌ ಸೇರಿದಂತೆ ಮಸೀದಿ, ದರ್ಗಾಗಳ ಸಿಬ್ಬಂದಿ ಸಾಮೂಹಿಕ ನಮಾಜ್‌ ಅಥವಾ ಪ್ರಾರ್ಥನೆ ಹಾಗೂ ಭಾಷಣ ಸಭೆ ನಡೆಸುವಂತಿಲ್ಲ. ಶಹರಿ ಮತ್ತು ಇಫ್ತಾರ್‌ ಕೂಟ ಆಯೋಜಿಸಲು ಅನುಮತಿ ಇಲ್ಲ ಎಂದು ಹೇಳಿದರು.

ಮಸೀದಿಗಳ ಎದುರು ಹಾಗೂ ಮೊಹಲ್ಲಾಗಳಲ್ಲಿ ಗಂಜಿ, ಶರಬತ್ತು ಇತ್ಯಾದಿಗಳನ್ನು ವಿತರಿಸುವಂತಿಲ್ಲ. ಯಾವುದೇ ತರಹದ ಆಹಾರ ಪದಾರ್ಥಗಳನ್ನು ವಿತರಿಸುವ ಅಂಗಡಿಗಳನ್ನು ಮಸೀದಿ, ದರ್ಗಾಗಳ ಸುತ್ತಮುತ್ತಲೂ ತೆರೆಯಲು ಅನುಮತಿ ಇರುವದಿಲ್ಲ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದುಪ್ರತಿಯೊಬ್ಬರಿಗೂ ಕಡ್ಡಾಯವಾಗಿದೆ. ರಮಜಾನ್‌ ಹಬ್ಬವನ್ನು ಆಚರಿಸುವವರು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗದಂತೆ ತಮ್ಮ ಮನೆಗಳಲ್ಲಿ ಪ್ರಾರ್ಥನೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ರಬಕವಿ-ಬನಹಟ್ಟಿ ಗ್ರೇಡ್‌ 2 ತಹಶೀಲ್ದಾರ್‌, ಉಪ ತಹಶೀಲ್ದಾರ ಎಸ್‌.ಎಲ್‌. ಕಾಗಿಯವರ, ಕಂದಾಯನಿರೀಕ್ಷಕ ಬಸವರಾಜ ತಾಳಿಕೋಟಿ, ಮುಖ್ಯಾಧಿಕಾರಿ ಬಿ.ಆರ್‌. ಕಮತಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next