Advertisement

ಲಾಕ್‌ಡೌನ್‌ ನಿಯಮ ಕಡ್ಡಾಯ ಪಾಲಿಸಿ

05:51 PM May 08, 2020 | Team Udayavani |

ಮದ್ದೂರು: ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ 19 ಸೋಂಕಿನಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳ ಬೇಕು ಎಂದು ಅಭಿಷೇಕ್‌ ಅಂಬರೀಶ್‌ ಹೇಳಿದರು.

Advertisement

ತಾಲೂಕಿನ ಗೆಜ್ಜಲಗೆರೆ ಅಂಬರೀಶ್‌ ಅಭಿಮಾನಿಗಳ ಸಂಘ ಹಾಗೂ ಸ್ವಾಭಿಮಾನಿ ಪಡೆಯಿಂದ ಬಡವರು, ಕೂಲಿ ಕಾರ್ಮಿಕರು, ಹಿಂದುಳಿದ ವರ್ಗದವರಿಗೆ ತರಕಾರಿ, ಆಹಾರದ ಕಿಟ್‌ ಹಾಗೂ ಕುಡಿಯುವ ನೀರಿನ ಕ್ಯಾನ್‌ಗಳನ್ನು ವಿತರಿಸಿ ಮಾತನಾಡಿದರು. ಮದ್ದೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಅಪ್ಪಾಜಿ ಅಭಿಮಾನಿಗಳು ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ಕಡು ಬಡವರಿಗೆ ಆಹಾರ ವಿತರಿಸುತ್ತಿರುವ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.

ಅಂಬರೀಶ್‌ ಹೆಸರು ಶಾಶ್ವತವಾಗಿ ಉಳಿಯಲು ಅಭಿಮಾನಿಗಳೇ ಕಾರಣವಾಗಿದ್ದು, ಜಿಲ್ಲೆ ಯಲ್ಲಿ ಸಂಸದರು ಮತ್ತಷ್ಟು ಕೆಲಸ ಕಾರ್ಯ ಹಮ್ಮಿಕೊಳ್ಳಲು ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ರಾಸು ವಿತರಣೆ: ಇದೇ ವೇಳೆ ಎರಡು ತಿಂಗಳಿಂದೀಚೆಗೆ ಗೆಜ್ಜಲಗೆರೆ ಹಾಗೂ ಕುದರಗುಂಡಿ ಗ್ರಾಮದಲ್ಲಿ ಹಸುಗಳು ಸಾವನಪ್ಪಿದ್ದ ಹಿನ್ನೆಲೆಯಲ್ಲಿ ಸಂತ್ರಸ್ತ ರೈತರಾದ ಜಯಲಕ್ಷ್ಮಮ್ಮ, ಶೇಖರ್‌, ಚನ್ನವೀರಯ್ಯ ಅವರಿಗೆ 1.20 ಲಕ್ಷ ರೂ. ಮೌಲ್ಯದ ಹಸುಗಳನ್ನು ವಿತರಿಸಲಾಯಿತು. ತಾಲೂಕಿನ ಗೆಜ್ಜಲಗೆರೆ, ಕುದರಗುಂಡಿ ಕಾಲೋನಿ, ಮಲ್ಲಯ್ಯನಗರ, ಕುದರ ಗುಂಡಿ ಇನ್ನಿತರೆ ಗ್ರಾಮಗಳ ಮನೆ ಮನೆಗೆ ತೆರಳಿದ ಅಂಬರೀಶ್‌ ಅಭಿಮಾನಿಗಳು ಸಂಗ್ರಹಿಸಿಟ್ಟಿದ್ದ ತರಕಾರಿ ಹಾಗೂ ದಿನಸಿ ಪದಾರ್ಥಗಳನ್ನು ವಿತರಿಸಿದರು. ಈ ವೇಳೆ ಅಂಬರೀಶ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಅಭಿಷೇಕ್‌, ಮುಖಂಡರಾದ ಹಿತೇಶ್‌ಗೌಡ, ಪುನೀತ್‌, ಹರೀಶ್‌, ಶಿವಕುಮಾರ್‌, ಇಂದು, ಪ್ರಕಾಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ನಾಗೇಶ್‌, ಮಹೇಂದ್ರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next