Advertisement

ನಕಲಿ ವೀಸಾ: ನೈಜೀರಿಯ ಫ‌ುಟ್‌ಬಾಲಿಗ ಬಂಧನ

12:35 AM Mar 08, 2019 | |

ಕೋಲ್ಕತ: ನಕಲಿ ವೀಸಾ ಇಟ್ಟುಕೊಂಡು ಅವಧಿ ಮುಗಿದ ಮೇಲೂ ಭಾರತದಲ್ಲೇ ಉಳಿದುಕೊಂಡಿದ್ದ, ನೈಜೀರಿಯ ಮೂಲದ ಖ್ಯಾತ ಫ‌ುಟ್‌ಬಾಲಿಗ ಡೇನಿಯೆಲ್‌ ಬಿಡೆಮಿಯನ್ನು ಭದ್ರತಾ ದಳ ಬಂಧಿಸಿದೆ. 

Advertisement

ಕೋಲ್ಕತದಲ್ಲಿ ಹಲವು ಫ‌ುಟ್‌ಬಾಲ್‌ ಲೀಗ್‌ಗಳಲ್ಲಿ ಆಡಿರುವ ಬಿಡೆಮಿ,ಅಲ್ಲಿ ಖ್ಯಾತ ಆಟಗಾರರಾಗಿದ್ದಾರೆ. ಭಾರತದ ಪ್ರತಿಷ್ಠಿತ ಫ‌ುಟ್‌ಬಾಲ್‌ ಕೂಟ ಐಲೀಗ್‌ನಲ್ಲೂ ಆಡಿದ್ದಾರೆ. ಭಾರತದಲ್ಲಿ ಖ್ಯಾತವಾಗಿರುವ ಮೋಹನ್‌ ಬಗಾನ್‌,ಮೊಹಮ್ಮಡನ್‌ ನ್ಪೋರ್ಟಿಂಗ್‌ ಕ್ಲಬ್‌ ಪರವಾಗಿ ಆಡಿದ್ದಾರೆ. 2015ರಿಂದ ಅವರು ನಕಲಿ ಪಾಸ್‌ಪೋರ್ಟ್‌ ಮತ್ತು ವೀಸಾವನ್ನೇ ಬಳಸಿಕೊಂಡು ಓಡಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next