Advertisement

ನಕಲಿ ಖಾತೆಗಳ ವಿರುದ್ಧ ಟ್ವಿಟರ್ ಸಮರ : ಸೆಲೆಬ್ರಿಟಿಗಳಿಗೆ ಶುರುವಾದ ಆತಂಕ

02:33 PM Jun 16, 2021 | Team Udayavani |

ಅತೀ ದೊಡ್ಡ ಹಾಗೂ ಪರಿಣಾಮಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟ್ಟರ್ ದಿನದಿಂದ ದಿನಕ್ಕೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿದೆ.

Advertisement

ಟ್ವಿಟರ್ ನಲ್ಲಿ ಫೇಕ್ ಅಕೌಂಟ್ ಗಳ ಹಾವಳಿ ಜಾಸ್ತಿ. ಇದು ಅನೇಕ ಆವಾಂತರಗಳಿಗೆ ಎಡೆ ಮಾಡಿಕೊಡುತ್ತವೆ. ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ವಿಟರ್ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ನಕಲಿ ಖಾತೆಗಳನ್ನು ಮುಲಾಜಿಲ್ಲದೆ ಕಿತ್ತು ಬೀಸಾಕುತ್ತಿದೆ.

ನಕಲಿ ಖಾತೆಗಳನ್ನು ಒಕ್ಕಲೆಬ್ಬಿಸುತ್ತಿರುವ ಟ್ವಿಟರ್ ಕಟ್ಟು ನಿಟ್ಟಿನ ಕ್ರಮದಿಂದಾಗಿ ರಾಜಕಾರಣಿಗಳು ಸೇರಿದಂತೆ  ಸೆಲೆಬ್ರಿಟಿಗಳ ಬೆಂಬಲಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ.

ಜನಪ್ರಿಯ ತಾಣಗಳಲ್ಲಿ ಟ್ವಿಟ್ಟರ್​ ಕೂಡ ಒಂದು.ಅನೇಕ ಬಳಕೆದಾರರನ್ನು ಹೊಂದಿರುವ ಮತ್ತು ಸೆಲೆಬ್ರಿಟಿ, ಸಿನಿಮಾ ತಾರೆಯರು, ರಾಜಕಾರಣಿ ಹೀಗೆ ನಾನಾ ದೇಶದ ಜನಸಾಮಾನ್ಯರು ಟ್ವಿಟ್ಟರ್​ ಅನ್ನು ಬಳಸುತ್ತಾರೆ.

ಕೆಲವು ದಿನಗಳಿಂದ ಟ್ವಿಟ್ಟರ್​ನಲ್ಲಿರುವ ಕೆಲವು ಖಾತೆಗಳ ಅನುಯಾಯಿ ಸಂಖ್ಯೆಯಲ್ಲಿ ಏರಿಳಿತ ಕಂಡುಬಂದಿದೆ. ಇತ್ತೀಚೆಗೆ ಟ್ವಿಟ್ಟರ್​ನಲ್ಲಿ ಸ್ಪಾಮ್​ ಪ್ರೊಫೈಲ್​ಗಳು ಹೆಚ್ಚಾಗಿ ಕಂಡುಬಂದವು. ಅದನ್ನು ಗಮನಿಸಿದ ಟ್ವಿಟ್ಟರ್​ ತೆಗೆದುಹಾಕಿದೆ. ಇದರಿಂದಾಗಿ ಕೆಲವು ಖಾತೆ ಅನುಯಾಯಿಗಳ ಸಂಖ್ಯೆಯಲ್ಲಿ ಏರಿಳಿತ ಕಾಣಲು ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ಬಾಲಿವುಡ್​ ನಟರನ್ನು ಒಳಗೊಂಡು, ಅನುಪಮ್​ ಖೇರ್​ ಮತ್ತು ಟಿವಿ ಪತ್ರಕರ್ತ ರಿಚರ್​ ಖೇರ್​ ಅವರು ಒಂದು ದಿನದಲ್ಲಿ ನೂರಾರು ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ದೂರು ನೀಡಿದ್ದಾರೆ.

Advertisement

ಟ್ವಿಟ್ಟರ್ ತನ್ನ​​ ಖಾತೆದಾರರ ಪಾಸ್​ವರ್ಡ್​ ಪರಿಶೀಲನೆ ಮತ್ತು ಫೋನ್​ ನಂಬರ್ ಪರಿಶೀಲಿಸುತ್ತಿದೆ. ಸ್ಪಾಮ್​ ಅನ್ನು ತಡೆಗಟ್ಟಲು ಮತ್ತು ಖಾತೆದಾರರನ್ನು ಸುರಕ್ಷಿತವಾಗಿಡಲು ನಿಯಮಿತವನ್ನಾಗಿ ಮಾಡುತ್ತೇವೆ ಎಂದು ಹೇಳಿದೆ.

ಕೆಲವು ಖಾತೆಗಳು ತಾತ್ಕಾಲಿಕ ಐಡಿಗಳೊಂದಿಗೆ ಮತ್ತು ಟ್ರೋಲ್​ ಖಾತೆಗಳಿಗಾಗಿ ನಿರ್ವಹಿಸುತ್ತಾರೆ. ಇದನ್ನರಿತು ಟ್ವಿಟ್ಟರ್​ ಪರಿಶೀಲಿಸುತ್ತಿದೆ. ಜೊತೆಗೆ ಸ್ಪಾಮ್ ಖಾತೆಗಳನ್ನು ಕಿತ್ತೆಸೆಯುತ್ತಿದೆ.
ಕಂಪನಿ ಬಳಕೆದಾರರಿಗೆ ತಮ್ಮ ವೈಯ್ಯಕ್ತಿಕ ವಿವರವನ್ನು ಸರಿಯಾಗಿ ನಮೂದಿಸಲು ಸವಾಲು ಹಾಕಿದೆ. ಸ್ಪಂದಿಸದ ಖಾತೆಗಳಿನ್ನು ಲಾಕ್​ ಮಾಡುತ್ತದೆ. ಈ ಸಮಯದಲ್ಲಿ ಪ್ರಪಫೈಲ್​ ಒಳಗೊಂಡ ಫಾಲೋವರ್ಸ್​ಗ ಳ ಬಗ್ಗೆ ಟ್ವಿಟ್ಟರ್​ ಚಿಂತಿಸುವುದಿಲ್ಲ.

ಒಟ್ಟಿನಲ್ಲಿ ಟ್ವಿಟರ್ ಕ್ರಮದಿಂದ ಸಾಕಷ್ಟು ಫೇಕ್ ಅಕೌಂಟ್ ಗಳಿಗೆ ಬೀಗ ಬಿದ್ದಿದೆ. ಇದರಿಂದ ಸೆಲೆಬ್ರಿಟಿಗಳ ಫಾಲೋವರ್ಸ ಸಂಖ್ಯೆಗಳು ಕಡಿಮೆ ಯಾಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next