Advertisement

ಡ್ರಗ್ಸ್‌ ಕೊಟ್ಟು, ಸಂಸದೆಗೇ ಲೈಂಗಿಕ ಕಿರುಕುಳ ಆರೋಪ; ಆಸ್ಟ್ರೇಲಿಯಾ ಎಂಪಿ

10:27 AM May 06, 2024 | Team Udayavani |

ಕ್ಯಾನ್ಬೆರಾ: ಆಸ್ಟ್ರೇಲಿಯಾದ ಕ್ವೀನ್ಸ್‌ ಲ್ಯಾಂಡ್‌ ಸಂಸದೆ ಬ್ರಿಟಾನಿ ಲೌಗಾ ಅವರಿಗೆ ಕೆಲವು ಅಪರಿಚಿತರು ಮಾದಕ  ದ್ರವ್ಯ ನೀಡಿ, ಲೈಂಗಿಕ ಕಿರುಕುಳ ನೀಡಿರುವ ವಿಚಾರ ಬಹಿರಂಗಗೊಂಡಿದೆ. ಈ ಕುರಿತು ಖುದ್ದು ಲೌಗಾ ಅವರೇ ಮಾಹಿತಿ ನೀಡಿದ್ದು, ಆಸ್ಟ್ರೇಲಿಯಾದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗಿದೆ.

Advertisement

ಇದನ್ನೂ ಓದಿ:ED Raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ

ಇನ್‌ಸ್ಟಾಗ್ರಾಂನಲ್ಲಿ ಈ ಕುರಿತಂತೆ ಲೌಗಾ ಪೋಸ್ಟ್‌ ಹಾಕಿದ್ದಾರೆ. ಅದರಲ್ಲಿ “ಯೆಪೂನ್‌ ನಗರದಲ್ಲಿ ನೈಟ್‌ಔಟ್‌ಗೆ ತೆರಳಿದ್ದಾಗ ಯಾರೋ ನನಗೆ ಮಾದಕ ದ್ರವ್ಯ ನೀಡಿ, ಲೈಂಗಿಕ ಹಿಂಸಾಚಾರ ಎಸಗಿದ್ದಾರೆ. ಮಾದಕದ್ರವ್ಯದ ಮತ್ತಿನಿಂದ ಹೊರಬರುತ್ತಿದ್ದಂತೆಯೇ ಎ.28ರಂದು ನಾನು ಮೊದಲು ಪೊಲೀಸ್‌ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದೆ.

ಬಳಿಕ ಆಸ್ಪತ್ರೆಗೆ ತೆರಳಿದೆ. ವೈದ್ಯರು ಪರೀಕ್ಷಿಸಿದಾಗ ನಾನು ಸೇವಿಸದೇ ಇದ್ದರೂ, ನನ್ನ ದೇಹ ದಲ್ಲಿ ಡ್ರಗ್‌ ಅಂಶ ಪತ್ತೆಯಾಗಿದೆ. ಸಮಾಜದೊಂದಿಗೆ ಬೆರೆಯುವ ಉದ್ದೇಶದಿಂದ ತೆರಳಿದವರ ವೇಲೆ ಇಂಥ ಕೃತ್ಯ ಎಸಗುವುದು ಅಕ್ಷಮ್ಯ. ಓರ್ವ ಸಂಸದೆಗೆ ಹೀಗಾದರೆ ಇದು ಇತರೆ ಸಾಮಾನ್ಯರಿಗೂ ಆಗಬಹುದು’ ಎಂದಿದ್ದಾರೆ. ಲೌಗಾ ದೂರಿನ ಬಳಿಕ ಹಲವು ಮಹಿಳೆಯರು ಕೂಡ ಇಂಥದ್ದೇ ಆರೋಪ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next