Advertisement
ಈ ಕಥೆಯಲ್ಲಿ ಸತ್ಯಾಸತ್ಯತೆ ಇದೆಯೋ ಇಲ್ಲವೋ ಎನ್ನುವುದನ್ನೂ ನೋಡದೇ ಅನೇಕ ಮಾಧ್ಯಮಗಳು ಈ ಕಥೆಯನ್ನು ಪುನರು ಚ್ಚರಿಸುತ್ತಲೇ ಇರುತ್ತವೆ. ನೆಹರೂರವರ ಜನ್ಮವಾರ್ಷಿಕೋತ್ಸವ ಮತ್ತು “ಮಕ್ಕಳ ದಿನಾಚರಣೆ’ಯಂದು, ಅನೇಕ ಮಾಧ್ಯಮ ಮನೆಗಳು ಕಿರಿಕಿರಿಯಾಗುವ ಮಟ್ಟಕ್ಕೆ ಈ ಸುಳ್ಳನ್ನು ಪುನರಾವರ್ತಿಸುತ್ತಲೇ ಇರುತ್ತವೆ.
ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಮಕ್ಕಳ ದಿನಾಚರಣೆಯ ಕುರಿತ ಲೇಖನದಲ್ಲೂ ಕೂಡ “ವಿಶ್ವಸಂಸ್ಥೆ ಮಕ್ಕಳ ದಿನಾಚರಣೆಯನ್ನು ನವೆಂಬರ್ 20ರಂದು ಘೋಷಿಸಿತ್ತು. ಆದರೆ ಪಂಡಿತ್ ನೆಹರೂರ ನಿಧನಾನಂತರ ಅವರ ಹುಟ್ಟುಹಬ್ಬದ ದಿನವನ್ನೇ ಮಕ್ಕಳ ದಿನಾಚರಣೆಯೆಂದು ಘೋಷಿಸಲಾಯಿತು’ ಎಂದು ಹೇಳಲಾಗಿದೆ. ಈ ವರ್ಷವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಟೈಮ್ಸ್‌ನೌ ಚಾನೆಲ್ ತನ್ನ ಜಾಲತಾಣದಲ್ಲಿ ಪ್ರಕಟಿಸಿದ ಲೇಖನ ಕೂಡ ಇದೇ ಸುಳ್ಳನ್ನೇ ಪುನರಾವರ್ತಿಸುತ್ತದೆ. ಇದೇ ಕಥೆಯನ್ನೇ ಒತ್ತಿ ಹೇಳುವ ಲೇಖನವನ್ನು ಇಂಡಿಯನ್ ಎಕ್ಸ್‌ಪ್ರೆಸ್ ಕೂಡ ಪ್ರಕಟಿಸಿದೆ.
Related Articles
Advertisement
ಆದರೆ, ನೆಹರೂರ ನಿಧನಾ ನಂತರ ಸರ್ವಾನುಮತದಿಂದ ನವೆಂಬರ್ 14ನ್ನು ಮಕ್ಕಳ ದಿನವೆಂದು ನಿರ್ಧರಿಸಲಾಯಿತು ಎನ್ನುವ ವಾದವೇ ಅಕ್ಷರಶಃ ಸುಳ್ಳು. ಮಕ್ಕಳ ದಿನಾಚರಣೆಯ ನಿಜ ಕಥೆಯೇ ಬೇರೆಯಿದೆ. ಈ ಕಥೆ ಹೋಗಿ ನಿಲ್ಲುವುದು 1951ಕ್ಕೆ. ಆಗ, ವಿಎಂ ಕುಲಕರ್ಣಿ ಎನ್ನುವವರು ವಿಶ್ವಸಂಸ್ಥೆಯ ಸಾಮಾಜಕಲ್ಯಾಣ ವಿಭಾಗದ ಸದಸ್ಯರಾಗಿದ್ದರು. ಯುನೈಟೆಡ್ ಕಿಂಗ್ಡಂನಲ್ಲಿ ಅಪರಾಧದಿಂದ ಸಂತ್ರಸ್ತರಾಗಿರುವ ಮಕ್ಕಳ ಪುನರ್ವಸತಿಯ ಕುರಿತು ಅವರು ಅಧ್ಯಯನ ನಡೆಸಿದ್ದರು. ಭಾರತದಲ್ಲಿನ ಬಡಮಕ್ಕಳ ವಿಷಯದಲ್ಲಿ ಇಂಥ ಯಾವುದೇ ವ್ಯವಸ್ಥೆಯೂ ಇಲ್ಲ ಎನ್ನುವುದು ಅವರಿಗೆ ಅರಿವಾಯಿತು.
ಆಗ ಇಂಗ್ಲೆಂಡಿನಲ್ಲಿ ಬ್ರಿಟನ್ ರಾಣಿ ಎರಡನೇ ಎಲಿಜಬತ್‌ರ ಜನ್ಮದಿನವಾದ ಜೂನ್ 19ನ್ನು “ಧ್ವಜ ದಿನಾಚರಣೆ’ ಎಂದು ಆಚರಿಸಿ, “ಸೇವ್ ದಿ ಚೈಲ್ಡ್’ ಎಂಬ ಫಂಡ್‌ಗೆ ಹಣ ಸಂಗ್ರಹಿಸಲಾಗುತ್ತಿತ್ತು. ಇದರಿಂದ ಪ್ರೇರಣೆ ಪಡೆದ ಕುಲಕರ್ಣಿಯವರು ಭಾರತದಲ್ಲಿ ಜವಾಹರ್‌ಲಾಲ್ ನೆಹರೂ ಅವರ ಜನ್ಮದಿನವನ್ನೂ ಧ್ವಜ ದಿನವನ್ನಾಗಿ ಆಚರಿಸಿ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ ಹಣ ಸಂಗ್ರಹಿಸಲು ಅನುವು ಮಾಡಬೇಕು ಎಂದು ವಿಶ್ವಸಂಸ್ಥೆಗೆ ವರದಿ ನೀಡಿದರು. ವಿಶ್ವಸಂಸ್ಥೆಯಲ್ಲಿ ಅವರ ಪ್ರಸ್ತಾಪಕ್ಕೆ ಅನುಮತಿ ದೊರಕಿತು ಎಂದು ಟ್ರಿಬ್ಯೂನ್‌ನಲ್ಲಿ ಪ್ರಕಟವಾದ ಈ ವರದಿ (ಜಟಟ.ಜl/8ಒಟಿಅಜu) ಹೇಳುತ್ತದೆ. ಈ ಕುರಿತು ಜವಾಹರ್‌ಲಾಲ್ ನೆಹರೂ ಅವರ ಅನುಮತಿ ಕೇಳಲು ಮುಂದಾದಾಗ ನೆಹರು ಮೊದಲಿಗೆ ಮುಜುಗರಪಟ್ಟುಕೊಂಡರು, ಆಮೇಲೆ ಒಪ್ಪಿಕೊಂಡರಂತೆ. 1951ರಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್‌ಫೇರ್(ಐಸಿಸಿಡಬ್ಲೂé) ವತಿಯಿಂದ ಅಂತಾರಾಷ್ಟ್ರೀಯ ಮೇಳವೊಂದನ್ನು ಆಯೋಜಿಸಲಾಯಿತು. ಆ ವರ್ಷದಿಂದಲೇ ನೆಹರೂರ ಜನ್ಮದಿನಾಚರಣೆ ಮಕ್ಕಳ ದಿನಾಚರಣೆಯಾಗಿ ಬದಲಾಯಿತು!
ಅಂದರೆ, ಪಂಡಿತ್ ನೆಹರೂ ಜೀವಂತವಿದ್ದಾಗಲೇ ಅವರ ಜನ್ಮದಿನದಂದು ಮಕ್ಕಳ ದಿನಾಚರಣೆ ಆರಂಭವಾಗಿದ್ದಷ್ಟೇ ಅಲ್ಲದೆ, ಈ ಪರಿಕಲ್ಪನೆಗೆ ನೆಹರೂರ ಒಪ್ಪಿಗೆಯೂ ಇತ್ತು. ಆದರೆ ಎಲ್ಲರೂ ಭಾವಿಸುವಂತೆ ಈ ಐಸಿಸಿಡಬ್ಲೂé ಏನೂ ಒಂದು ಸ್ವತಂತ್ರ ಸಂಸ್ಥೆಯಾಗಿರಲಿಲ್ಲ! ಅದಕ್ಕೆ ರಾಜಕೀಯದೊಂದಿಗೆ ಮತ್ತು ನೆಹರೂ-ಗಾಂಧಿ ಕುಟುಂಬದೊಂದಿಗೆ ಬಿಡಿಸಲಾರದ ನಂಟಿತ್ತು.
1952-58ರವರೆಗೆ ಐಸಿಸಿಡಬ್ಲೂéನ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು ರಾಜಕುಮಾರಿ ಅಮೃತ್ ಕೌರ್. ಈ ಅಮೃತ್ ಕೌರ್ ಜವಾಹರ್‌ಲಾಲ್ ನೆಹರೂ ಅವರ ಮೊದಲ ಕ್ಯಾಬಿನೆಟ್‌ನ ಸದಸ್ಯರಾದವರು ಮತ್ತು ಕ್ಯಾಬಿನೆಟ್ ದರ್ಜೆ ಹೊಂದಿದ ಮೊದಲ ಮಹಿಳೆಯೆಂದೂ ಗುರುತಿಸಿಕೊಂಡರು. ನವ ದೆಹಲಿಯಲ್ಲಿನ ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಿಂದಿನ ಸ್ಥಾಪಕ ಶಕ್ತಿಯಾಗಿದ್ದ ಅಮೃತ್ ಕೌರ್, ಆ ಸಂಸ್ಥೆಯ ಮೊದಲ ಅಧ್ಯಕ್ಷರೂ ಆದರು. ಇನ್ನು 1958ರಿಂದ 1964ರವರೆಗೆ ಐಸಿಸಿಡಬ್ಲೂéನ ಮುಂದಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು ಬೇರಾರೂ ಅಲ್ಲ, ಮಾಜಿ ಪ್ರಧಾನಿ, ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ.ನೆಹರೂ ಜೀವಂತವಿದ್ದಾಗಲೇ ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿತ್ತು ಎನ್ನುವುದಕ್ಕೆ ಐತಿಹಾಸಿಕ ಘಟನಾವಳಿಗಳಷ್ಟೇ ಅಲ್ಲ, ಮಕ್ಕಳ ದಿನಾಚರಣೆಯಂದು ಬಿಡುಗಡೆಯಾದ “ಸ್ಟಾಂಪ್’ ಗಳು ಕೂಡ ರುಜುವಾತು ಮಾಡುತ್ತವೆ.
ಹೀಗಾಗಿ, ಪಂಡಿತ್ ನೆಹರೂ ನಿಧನಾ ನಂತರ ಮಕ್ಕಳ ದಿನಾಚರಣೆಯನ್ನು ನವೆಂಬರ್ 14ರಂದು ಆಚರಿಸಲಾಯಿತು ಎನ್ನುವುದು ಮಾಧ್ಯಮಗಳು ನುಡಿಯುತ್ತಿರುವ ಸುಳ್ಳು. ಸ್ವತಃ ಬಡ ಕುಟುಂಬದಿಂದ ಬಂದ ವಿ ಎಂ ಕುಲಕರ್ಣಿಯವರು ಬಡ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಆರಂಭಿಸಿದ ಈ ಆಂದೋಲನವನ್ನು ಮುಂದೆ ರಾಜಕೀಯ ಭಟ್ಟಂಗಿತನವಾಗಿ ಬದಲಿಸಲಾಯಿತು ಮತ್ತು ಪಂಡಿತ್ ನೆಹರೂ ಈ ಸಂಗತಿಯನ್ನು ಸ್ವ-ವೈಭವೀಕರಣಕ್ಕಾಗಿ ಬಳಸಿಕೊಂಡರು (ಪ್ರಧಾನಿಯಾಗಿದ್ದಾಗಲೇ ಸ್ವತಃ ಭಾರತ ರತ್ನ ಸ್ವೀಕರಿಸುವ ವಿಚಾರದಲ್ಲೂ ಅವರಿಗೆ ಯಾವ ತೊಂದರೆಯೂ ಆಗಲಿಲ್ಲವಲ್ಲ, ಇದೂ ಹಾಗೆಯೇ)
1954ರಲ್ಲಿ ಮಕ್ಕಳ ದಿನದ ಆಚರಣೆಯ ವೇಳೆ “ನೆಹರೂ ಚಾಚಾ ಕೀ ಜೈ’ ಎಂದು ಕೂಗುವಂತೆ ಮಕ್ಕಳಿಗೆ ಹೇಳಲಾಯಿತಂತೆ. ನೆಹರೂರ ವಂದಿ ಮಾಗಧರು ಮತ್ತು ನೆಹರೂ ವಂಶಸ್ಥರು ಮಕ್ಕಳ ದಿನಾಚರಣೆಯನ್ನು ಪಂಡಿತ್ ನೆಹರೂರ ವೈಭವೀಕರಣಕ್ಕೆ ಬಳಸಿಕೊಳ್ಳಲಾರಂಭಿಸಿದರು. ವಿಎಂ ಕುಲಕರ್ಣಿ ಅವರು ನೆಹರೂ ಜನ್ಮದಿನವನ್ನು “ಧ್ವಜ ದಿನ’ವನ್ನಾಗಿ ಆಚರಿಸಿ, ಬಡಮಕ್ಕಳಿಗೆ ಹಣ ಸಂಗ್ರಹಿಸಬೇಕೆಂದು ಬಯಸಿದ್ದರು. ಆದರೆ, ಆ ದಿನವನ್ನು “ನೆಹರೂ ಮಕ್ಕಳನ್ನು ಎಷ್ಟು ಪ್ರೀತಿಸುತ್ತಿದ್ದರು, ನೆಹರೂ ಹೇಗೆ ಭಾರತೀಯ ರಾಜಕೀಯದಲ್ಲಿ ತಂದೆಯ ಪಾತ್ರ ವಹಿಸಿದರು’ ಎಂದು ಹಾಡುಹಾಡಿ ಗುಣಗಾನ ಮಾಡುವ “ಮಕ್ಕಳ ದಿನಾಚರಣೆ’ ಮಾಡಲಾಯಿತು. ಹೀಗೆ ಮಕ್ಕಳ ದಿನಾಚರಣೆಯ ಮೂಲಕ ಒಂದು ಕುಟುಂಬವನ್ನು ವೈಭವೀಕರಿಸುವ ಭರದಲ್ಲಿ, ವಿಎಂ ಕುಲಕರ್ಣಿ ಅವರ ಉದ್ದೇಶವೇ ಕಣ್ಮರೆಯಾಯಿತು. (ಲೇಖಕರು ಒಪಿ ಇಂಡಿಯಾದ ಸಂಪಾದಕರು) – ನೂಪುರ್ ಶರ್ಮಾ, ಪತ್ರಕರ್ತೆ