ಬೆಂಗಳೂರು: ನಕಲಿ ಛಾಪಾ ಕಾಗದ ಮುದ್ರಣ ಮತ್ತು ಮಾರಾಟ ಆರೋಪದಡಿ ಬೆಂಗಳೂರಿನಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಕೇಂದ್ರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ನಾಲ್ವರನ್ನು ಹೆಡೆಮುರಿ ಕಟ್ಟಿದ್ದಾರೆ.
ವಿವೇಕನಗರದ ಹಸೈನ್ ಮೋದಿ ಬಾಬು, ಹರೀಶ್, ಶವರ್ ಅಲಿಯಾಸ್ ಸೀಮಾ ಮತ್ತು ನಜ್ಮಾ ಫಾತೀಮಾ ರನ್ನು ಪೊಲೀಸರು ಬಂಧಿಸಿದ್ದಾರೆ.
ಅರೋಪಿಗಳಿಂದ ಖಾಲಿ ಎ4 ಸೈಜ್ ಪೇಪರ್ ಗಳಿಗೆ ವಾಟರ್ ಮಾರ್ಕಿಂಗ್ ಮಾಡಿ ನಕಲಿ ಬಾಂಡ್ ಪೇಪರನ್ನಾಗಿ ಪರಿವರ್ತಿಸುತ್ತಿದ್ದ 10 ಡಿಟಿಪಿ, ಛಾಪಾ ಕಾಗದ ಇಮೇಜ್ ಸೇವ್ ಮಾಡಿ ಇಟ್ಟಿದ್ದ ಕಂಪ್ಯೂಟರ್, ಫ್ರಿಂಟ್ ತೆಗೆಯಲು ಉಪಯೋಗಿಸುತ್ತಿದ್ದ ಕಲರ್ ಪ್ರಿಂಟರ್ ಹಾಗೂ ಒಟ್ಟು 2 ಕೋಟಿ 71 ಲಕ್ಷ 81 ಸಾವಿರ ರೂಪಾಯಿ 25 ಸಾವಿರದ ನಕಲಿ ಛಾಪಾ ಕಾಗದವನ್ನು ವಶಪಡಿಸಿಕೊಳ್ಳಾಗಿದೆ.
ಇದನ್ನೂ ಓದಿ:ಸಮಾಧಿಯಲ್ಲಿ ಕುಳಿತು ಕಬ್ಬಿನ ಬಾಕಿ ಬಿಲ್ ಗೆ ಆಗ್ರಹಿಸಿ ರೈತನ ಪ್ರತಿಭಟನೆ!
ಈ ಹಿಂದೆ ನಕಲಿ ಛಾಪಾ ಕಾಗದ ಹಗರಣ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಪ್ರಕರಣದಲ್ಲಿ ತೆಲಗಿ ಸೇರಿ ಹಲವರ ಬಂಧನವಾಗಿತ್ತು.