Advertisement

ನಕಲಿ ನಂದಿನಿ ತುಪ್ಪ ತಯಾರಿಕೆ: ನಾಲ್ವರ ಸೆರೆ

03:19 PM Dec 29, 2021 | Team Udayavani |

ಮೈಸೂರು: ಇತ್ತೀಚೆಗೆ ಬೆಳಕಿಗೆ ಬಂದ ನಕಲಿ ನಂದಿನಿ ತುಪ್ಪ ತಯಾರಿಕೆ ಮತ್ತು ಮಾರಾಟ ಜಾಲ ಪ್ರಕರಣ ಸಂಬಂಧ ಮೈಸೂರು ದಕ್ಷಿಣ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ತಿಳಿಸಿದರು.

Advertisement

ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಕಲಿ ತುಪ್ಪ ತಯಾರಿಕೆ ಮತ್ತು ಮಾರಾಟ ಪ್ರಕರಣ ಬೆಳಕಿಗೆಬರುತ್ತಿದ್ದಂತೆ ಡಿವೈಎಸ್ಪಿ ಸುಮಿತ್‌ ನೇತೃತ್ವದಲ್ಲಿತನಿಖಾ ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮಂಗಳವಾರ ನಡೆದ ಕಾರ್ಯಚರಣೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ದೂರಿನಂತೆ ಎಫ್ಐಆರ್‌ನಲ್ಲಿ ದಾಖಲಾಗಿದ್ದ ಇಬ್ಬರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಬಂಧಿತ ನಾಲ್ವರು ಹಲವು ವರ್ಷಗಳಿಂದ ಮೈಸೂರಿನಲ್ಲಿಯೇ ನೆಲೆಸಿರುವ ಬಗ್ಗೆ ತಿಳಿದು ಬಂದಿದ್ದು, ಇನ್ನೂ ಹಲವು ಮಂದಿ ಈ ಜಾಲದಲ್ಲಿಸಕ್ರಿಯವಾಗಿರುವ ಮಾಹಿತಿ ಲಭ್ಯವಾಗಿದೆ ಎಂದರು.

ತೋಟ ಬೋಗ್ಯಕ್ಕೆ ಪಡೆದಿದ್ದರು: ಹೊಸಹುಂಡಿ ಗ್ರಾಮ ಹೊರ ವಲಯದಲ್ಲಿನ ತೋಟವನ್ನು ಬೋಗ್ಯಕ್ಕೆ ಪಡೆದಿದ್ದ ಜಾಲದ ರೂವಾರಿಗಳು, ಕಟ್ಟಡವನ್ನು ನಿರ್ಮಿಸಿ ಘಟಕವನ್ನು ವಿಜಯದಶಮಿ ದಿನದಂದು ಆರಂಭಿಸಿದ್ದಾರೆ. ನಂದಿನಿ ತುಪ್ಪದಿಂದ ಬೇರೆ ಬ್ರ್ಯಾಂಡ್‌ ನ ತುಪ್ಪಗಳನ್ನು ಸಹ ನಕಲು ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಜಾಲದಲ್ಲಿದ್ದ ತಯಾರಕ ರೊಂದಿಗೆ ಮಾರಾಟ ಗಾರನ್ನು ಸಹ ಪತ್ತೆ ಹಚ್ಚುವ ಕೆಲಸವಾಗುತ್ತಿದ್ದು, ಶೀಘ್ರದಲ್ಲಿಯೇ ಉಳಿದ ಆರೋಪಿ ಗಳನ್ನು ಬಂಧಿಸಲಾಗುವುದು ಎಂದು ಹೇಳಿದರು.

ಆರೋಪಿಗಳು ತೋಟದಲ್ಲಿ ಕಟ್ಟಡ ನಿರ್ಮಿಸಿರುವ ಬಗ್ಗೆ ಸ್ಥಳೀಯ ಪಟ್ಣಣ ಪಂಚಾಯಿತಿ ಅಧಿಕಾರಿಗಳಿಗೆಯಾವುದೇ ಮಾಹಿತಿ ಇಲ್ಲ. ಜತೆಗೆ ಸ್ಥಳೀಯಪೊಲೀಸ್‌ ಠಾಣೆಯ ಪೊಲೀಸ್‌ ಅಧಿಕಾರಿಗಳುಮತ್ತು ಸಿಬ್ಬಂದಿಯ ಗಮನಕ್ಕೆ ಬಂದಿಲ್ಲ. ಜಮೀನು ನೀಡಿರುವ ಮಾಲಿಕನಿಗೆ ನಕಲಿ ನಂದಿನಿ ತುಪ್ಪ ತಯಾರಿಕೆಯ ಬಗ್ಗೆ ಮಾಹಿತಿ ಇತ್ತೇ ಎಂಬುದರ ಬಗ್ಗೆತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ನಕಲಿ ನಂದಿನಿ ತುಪ್ಪ ತಯಾರಿಸುವ ಘಟಕದಲ್ಲಿ ನಕಲಿ ಲೇಬಲ್‌, ಯಂತ್ರೋಪಕರಣದೊಂದಿಗೆ 10 ಟನ್‌ ತುಪ್ಪ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ್‌ ಆರ್‌.ದಂಡಿನ, ಡಿವೈಎಸ್ಪಿ ಸುಮಿತ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next