ವಿಜಯಪುರ: ಪ್ರೇಮಿಗಳಿಬ್ಬರು ಖಾಸಗಿಯಾಗಿ ಮನೆಯಲ್ಲಿದ್ದಾಗ ಮನೆಗೆ ನುಗ್ಗಿದ ನಾಲ್ವರ ತಂಡ ವಿಡಿಯೋ ಮಾಡಿ 1 ಲಕ್ಷ ರೂ.ಗೆ ಬೇಡಿಕೆ ಇಟ್ಡು, 60 ಸಾವಿರ ರೂ. ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ.
ಬಂಧಿತ ನಕಲಿ ಪತ್ರಕರ್ತರನ್ನು ಪ್ರಕಾಶ ಕೋಳಿ, ಝಾಕೀರ್ ಅಮೀನಗಡ, ದಶರಥ ಸೊನ್ನ ಎಂಬ ಮೂವರನ್ನು ಬಂಧಿಸಿದ್ದಾಗಿ ಎಸ್ಪಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.
ಬಂಧಿತರು ಹೊಂದಿದ್ದ ಮಹೇಂದ್ರ ಕಾರಿನ ಮೇಲೆ ಪ್ರೆಸ್, ವಕೀಲ, ವೈದ್ಯರ ಲೋಗೋ ಹಾಗೂ ಕನ್ನಡ ಸಂಘಟನೆಯೊಂದರ ರಾಜ್ಯಾಧ್ಯಕ್ಷ ಎಂದು ಬೋರ್ಡ ಬರೆಸಿದ್ದಾರೆ.
ಆರೋಪಿಗಳ ಕಿರುಕುಳ ತಾಳದೆ ದೂರುದಾರ ನಗರದ ಜಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಂಧಿತರ ವಿರುದ್ದ ಸುಲಗೆ, ದರೋಡೆ, ಬ್ಲಾಕ್‌ಮೇಲ್ ದೂರು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
ಬಂಧಿತರಿಂದ 8 ಮೊಬೈಲ್, 24 ಸಾವಿರ ರೂ. ನಗದು, MH-13, AZ-5867 XUV500 ಕಾರು, ಒಂದು ಕೆಮೆರಾ, ವಿವಿಧ ಸುದ್ದಿ ವಾಹಿನಿಗಳ ಲೋಗೋ, ಕಂಪ್ಯೂಟರ್, ಲ್ಯಾಪ್ ಟಾಪ್, ಆರ್‌ಟಿ ಐ ಮೂಲಕ ಪಡೆದಿರುವ ವಿವಿಧ ಇಲಾಖೆಗಳ ದಾಖಲೆ ಸೇರಿದಂತೆ ಇತರೆ ವಸ್ತುಗಳನ್ಬು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಆರ್ ಟಿಐ ಕಾರ್ಯಕರ್ತರು ಎಂದೂ ಹೇಳಿಕೊಂಡು ಹಲವರನ್ನು ಬೆದರಿಸಿ ಹಣ ಸುಲಿಗೆ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಆರೋಪಿಗಳನ್ನು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ತನಿಖೆಯ ಬಳಿಕ ಈ ಜಾಲದ ಸಮಗ್ರ ಮಾಹಿತಿ ಲಭ್ಯವಾಗಲಿದೆ ಎಂದರು.