ಲಕ್ನೋ: ದರೋಡೆಕೋರ ರಾಜಕಾರಣಿ ಅತೀಕ್ ಅಹ್ಮದ್ ಅವರ ಪುತ್ರ ಮತ್ತು ಆತನ ಸಹಚರನನ್ನು ಹತ್ಯೆ ಮಾಡಲು ಉತ್ತರ ಪ್ರದೇಶದ ಬಿಜೆಪಿ ಸರಕಾರವು “ನಕಲಿ ಎನ್‌ಕೌಂಟರ್” ನಡೆಸಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಗುರುವಾರ ಆರೋಪಿಸಿದ್ದಾರೆ.
”ರಾಜ್ಯವನ್ನು ಕಾಡುತ್ತಿರುವ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಆಡಳಿತ ಪಕ್ಷ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಸರಕಾರಕ್ಕೆ ನ್ಯಾಯಾಲಯಗಳಲ್ಲಿ ನಂಬಿಕೆಯಿಲ್ಲ ಮತ್ತು ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಿದೆ. ಅಧಿಕಾರದಲ್ಲಿರುವವರು ಯಾರು ಸರಿ ಅಥವಾ ತಪ್ಪು ಎಂದು ತೀರ್ಪು ನೀಡುವುದು ಮತ್ತು ಯಾರು ಬದುಕಬೇಕು ಅಥವಾ ಸಾಯಬೇಕು ಎಂದು ನಿರ್ಧರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : UP encounter ಬಳಿಕ ಕಾನೂನು ಸುವ್ಯವಸ್ಥೆ ಕುರಿತು ಸಭೆ; ಸಿಎಂ ಯೋಗಿ ಶ್ಲಾಘನೆ
“ನಕಲಿ ಎನ್‌ಕೌಂಟರ್‌ಗಳ ಮೂಲಕ ಬಿಜೆಪಿ ಸರಕಾರವು ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಬಿಜೆಪಿಗೆ ನ್ಯಾಯಾಲಯಗಳ ಮೇಲೆ ನಂಬಿಕೆ ಇಲ್ಲ. ಇಂದಿನ ಮತ್ತು ಇತ್ತೀಚಿನ ಎನ್‌ಕೌಂಟರ್‌ಗಳ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಮತ್ತು ಅಪರಾಧಿಗಳನ್ನು ಬಿಡಬಾರದು. ಅಧಿಕಾರದಲ್ಲಿರುವವರು ಹಾಗೆ ಮಾಡುವುದಿಲ್ಲ. ಯಾವುದು ಸರಿ ಅಥವಾ ತಪ್ಪು ಎಂದು ನಿರ್ಧರಿಸುವ ಹಕ್ಕಿದೆ. ಬಿಜೆಪಿ ಸಾಮರಸ್ಯಕ್ಕೆ ವಿರುದ್ಧವಾಗಿದೆ ಎಂದು ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಅತೀಕ್ ಅಹ್ಮದ್ ಪುತ್ರ ಅಸದ್ ಮತ್ತು ಅವರ ಆಪ್ತ ಶೂಟರ್ ಗುಲಾಮ್ ರನ್ನು ಯುಪಿ ಎಸ್‌ಟಿಎಫ್ ಎನ್‌ಕೌಂಟರ್ ಮಾಡಿತ್ತು.