Advertisement

ನಕಲಿ ದಾಖಲೆ ಸೃಷ್ಟಿ: ಪ್ರತಿಭಟನೆ

05:02 AM Jul 11, 2020 | Lakshmi GovindaRaj |

ಶ್ರೀರಂಗಪಟ್ಟಣ: ಸರ್ಕಾರಿ ಗೋಮಾಳ ಮತ್ತು ಅರಣ್ಯ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ, ಅಧಿಕಾರಿಗಳು ಶ್ರೀಮಂತರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ  ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿ ಮುಖ್ಯ ದ್ವಾರವನ್ನು ಬಂದ್‌ ಮಾಡಿ, ಕಂದಾಯ, ಅರಣ್ಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳ ವಿರುದ ಆಕೊಶ ವ್ಯಕ್ತಪಡಿಸಿದರು.

Advertisement

ತಾಲೂಕಿನ ಸಿದ್ದಾಪುರ, ತರೀಪುರ,  ಕಾಳೇನಹಳ್ಳಿ ಇತರೆಡೆ ಸರ್ಕಾರಿ ಗೋಮಾಳ ಮತ್ತು ಅರಣ್ಯ ಭೂಮಿ ಯನ್ನು ಅಧಿಕಾರಿಗಳು ಪ್ರಭಾವಿಗಳ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. 3 ಎಕರೆಗೆ ಸಾಗುವಳಿ ಚೀಟಿ ಪಡೆದಿರುವ ಜನ  ಪ್ರತಿನಿಧಿಗಳು 10 ರಿಂದ 15 ಎಕರೆ ಜಮೀನು ಅತಿಕ್ರಮಿಸಿದ್ದಾರೆ. ಈ ಅಕ್ರಮಗಳಿಗೆ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಬೆಂಬಲವಾಗಿದ್ದಾರೆ.

ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ  ಕಾರ್ಯ ದರ್ಶಿ ಮಂಜೇಶ್‌ಗೌಡ ಆಗ್ರಹಿಸಿದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬೋರಾಪುರ ಶಂಕರೇಗೌಡ, ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ನಾಗೇಂದ್ರಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಶ್ರೀಕಂಠ ಯ್ಯ, ದಲಿತ  ಸಂಘರ್ಷ ಸಮಿತಿಯ ತೂಬಿನ ಕೆರೆ ಪ್ರಸನ್ನ, ಗಂಜಾಂ ರವಿಚಂದ್ರ, ಕುಬೇರಪ್ಪ, ಮೋಹನಕುಮಾರ, ಡಿ.ಎಸ್‌ ಚಂದ್ರಶೇಖರ್‌, ತಮ್ಮಣ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next