Advertisement

ನಕಲಿ ವೈದ್ಯನ ಚುಚ್ಚುಮದ್ದು: ಸಾವು

10:49 PM Dec 17, 2019 | Team Udayavani |

ಲಿಂಗಸುಗೂರು (ರಾಯಚೂರು): ನಕಲಿ ವೈದ್ಯರಿಂದ ಇಂಜೆಕ್ಷನ್‌ ಮಾಡಿಸಿಕೊಂಡ ಪರಿಣಾಮ ಕ್ಷಣಾರ್ಧದಲ್ಲೇ ರಿಯಾಕ್ಷನ್‌ ಆಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಸಬಾ ಲಿಂಗಸುಗೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಕಸಬಾ ಲಿಂಗಸುಗೂರು ಗ್ರಾಮದ ನಿವಾಸಿ ಸುವರ್ಣ(48) ಮೃತ ಮಹಿಳೆ.

Advertisement

ಸೋಮವಾರ ರಾತ್ರಿ ಹಲ್ಲು ನೋವಿನಿಂದ ಬಳಲಿದ್ದ ಸುವರ್ಣ, ಮಂಗಳವಾರ ಬೆಳಗ್ಗೆ ಕಳ್ಳಿ ಲಿಂಗಸುಗೂರು ಗ್ರಾಮದ ನಕಲಿ ವೈದ್ಯ ಶಿವಪ್ಪ ಶರಣಪ್ಪ ಎಂಬವರು ಮನೆ ಮುಂದೆ ಹೊರಟಾಗ ತಮಗಾದ ಹಲ್ಲು ನೋವಿನ ವಿಷಯ ತಿಳಿಸಿದ್ದಾರೆ. ನಕಲಿ ವೈದ್ಯ ಶಿವಪ್ಪ, ಸುವರ್ಣ ಅವರ ಬಲಗೈ ಮೇಲಿನ ನರಕ್ಕೆ ಇಂಜೆಕ್ಷನ್‌ ಮಾಡಿದ್ದು, ಕ್ಷಣಾರ್ಧದಲ್ಲೇ ರಿಯಾಕ್ಷನ್‌ ಆಗಿ ಬಾಯಲ್ಲಿ ಬುರುಗು ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಕೂಡಲೇ ಅವರನ್ನು ಪಟ್ಟಣದ ತಾಲೂಕು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ನಕಲಿ ವೈದ್ಯ ಪರಾರಿಯಾಗಿದ್ದಾನೆ. ಈ ಕುರಿತು ಮೃತ ಮಹಿಳೆ ಪುತ್ರಿ ಸುಷ್ಮಿತಾ ನೀಡಿದ ದೂರಿನನ್ವಯ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next