ಹೈದರಾಬಾದ್: ರೋಗಿಗಳನ್ನು ವಂಚಿಸುತ್ತಿದ್ದ ನಕಲಿ ವೈದ್ಯ ಹಾಗೂ ಆತನ ಸಹಾಯಕನನ್ನು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ನಕಲಿ ಸರ್ಟಿಫಿಕೇಟ್, ನಗದು ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಹೈದರಾಬಾದ್ ನ ಬೋಡುಪ್ಪಾಲ್ ನ ಬಾಲಾಜಿ ಹಿಲ್ಸ್ ನ ನಿವಾಸಿ, ನಕಲಿ ವೈದ್ಯ ವೈಎಸ್ ತೇಜಾ ಹಾಗೂ ಆತನ ಸಹಾಯಕರಾದ ಬೋಕುಡಿ ಶ್ರೀನಿವಾಸ್ ರಾವ್ ಮತ್ತು, ವೀರಗಂಧಂ ವೆಂಕಟ್ ರಾವ್ (ವೈಎಸ್ ತೇಜಾ ತಂದೆ)ಅವರು ನಕಲಿ ದಾಖಲೆ ಹೊಂದಿರುವುದದು ಪತ್ತೆಯಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ನಶೆ ನಂಟು: ರಾಗಿಣಿ ಜಾಮೀನು ಅರ್ಜಿ ಮುಂದೂಡಿದ ಕೋರ್ಟ್
ವಿಶೇಷ ಕಾರ್ಯಾಚರಣೆ ಪಡೆ ಮತ್ತು ಮೆದಿಪಲ್ಲಿ ಪೊಲೀಸ್ ಜಂಟಿಯಾಗಿ. ಆರೋಪಿ ವೈಎಸ್ ತೇಜಾ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಎಸ್ಸೆಸ್ಸೆಲ್ಸಿ, ಇಂಟರ್ ಮೀಡಿಯೇಟ್, ಎಂಬಿಬಿಎಸ್, ಬಿಬಿಎ ಮತ್ತು ಎಂಬಿಎ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ನಕಲಿ ಪದವಿ ಪ್ರಮಾಣ ಪತ್ರ ದೊರಕಿರುವುದಾಗಿ ಪ್ರಕಟಣೆಯಲ್ಲಿ ಹೇಳಿದೆ.
ಈ ಎಲ್ಲಾ ಸರ್ಟಿಫಿಕೇಟ್ ಗಳು ನಕಲಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಕಲಿ ವೈದ್ಯನ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.