ಲಕ್ನೋ: ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಜಾಲದ ಪ್ರಮುಖ ಆರೋಪಿಯನ್ನು ಮಥುರಾ ರೈಲ್ವೇ ಪೊಲೀಸರು ಬಂಧಿಸಿರುವ ಘಟನೆ ಭಾನುವಾರ (ಡಿ.11 ರಂದು) ನಡೆದಿದೆ.
ಡಿ.10 (ಶನಿವಾರ) ಆಗ್ರಾ ರೈಲ್ವೇ ಪೊಲೀಸರು ಮಥುರಾದ ರೈಲು ನಿಲ್ದಾಣದ ಜಂಕ್ಷನ್ ಬಳಿ ತಪಾಸಣೆ ನಡೆಸುವ ವೇಳೆ ಗಮನಾರ್ಹ ಸಂಖ್ಯೆಯ ನಕಲಿ 500 ರೂಪಾಯಿ ನೋಟುಗಳು, ಭಾಗಶಃ ಮುದ್ರಿತ ನೋಟುಗಳು ಮತ್ತು ಕರೆನ್ಸಿ ಮುದ್ರಿಸಲು ಬಳಸಲಾಗುತ್ತಿದ್ದ ಅಸಲಿ ನೋಟಿನ ಸೆಕ್ಯೂರಿಟಿ ಪೇಪರ್‌ಗಳನ್ನು ಹೊಂದಿದ್ದ ಮೂವರನ್ನು ಅನುಮಾನಗೊಂಡು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜಸ್ಥಾನ ಮೂಲದ ಕಲೀಮುಲ್ಲಾ ಖಾಜಿ, ಮೊಹಮ್ಮದ್ ತಕೀಮ್ ಹಾಗೂ ಬಿಹಾರದ ಧರ್ಮೇಂದ್ರ ಅವರನ್ನು ವಶಕ್ಕೆ ಪಡೆದುಕೊಂಡು, ಪೊಲೀಸರು ವಿಚಾರಣೆ ನಡೆಸಿದಾಗ ನಕಲಿ ನೋಟು ವ್ಯವಹಾರ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಆರೋಪಿಗಳು ಪ್ರಕರಣದ ಪ್ರಮುಖ ಆರೋಪಿ ರಣನಕ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಆರೋಪಿಗಳು ನಕಲಿ ನೋಟುಗಳನ್ನು ಮುದ್ರಿಸಲು ಬೇಕಾಗುವ ಭದ್ರತಾ ಕಾಗದವನ್ನು ಚೀನ ಮೂಲದ ಗ್ವಾಂಗ್‌ಝೌ ಬೊನೆಡ್ರಿ ಕೋ ಲಿಮಿಟೆಡ್ ಎಂಬ ಕಂಪನಿಯಿಂದ ತರಿಸಿಕೊಳ್ಳುತ್ತಿದ್ದರು. ಆ ಕಂಪೆನಿಯಲ್ಲಿ ಇದು ಯಾರಿಗಾದರೂಕೊಳ್ಳಲು ಅವಕಾಶವಿತ್ತು ಎಂದು ಪೊಲೀಸರು ಹೇಳಿದ್ದಾರೆ.
Related Articles
ಭದ್ರತಾ ಕಾಗದದ ಒಂದು ಹಾಳೆಯಲ್ಲಿ 200 ರೂ ಮೌಲ್ಯದ 4 ನೋಟುಗಳನ್ನು ಮುದ್ರಿಸುತ್ತಿದ್ದರು. ಆರೋಪಿಗಳ ಬಳಿ ಒಟ್ಟು 550 ಭದ್ರತಾ ಕಾಗದಗಳಿದ್ದವು. ಕಲೀಮುಲ್ಲಾ ಖಾಜಿ ನಕಲಿ ನೋಟುಗಳನ್ನು ಮುದ್ರಿಸಲು ಪಶ್ಚಿಮ ಬಂಗಾಳ ಮಾಲ್ಡಾ ಜಿಲ್ಲೆಯಲ್ಲಿ ತರಬೇತಿ ಪಡೆದುಕೊಂಡಿದ್ದಾನೆ. ನೋಟುಗಳನ್ನು ಪ್ರಿಂಟ್ ಮಾಡಿದ ಬಳಿಕ ವಾರಾಣಸಿಯಲ್ಲಿರುವ ಪ್ರಕರಣದ ಕಿಂಗ್ ಪಿನ್ ರೌನಕ್ ನಿಗೆ ಕಳುಹಿಸುತ್ತಿದ್ದ ಅಲ್ಲಿ ಆತ ಆ ನೋಟುಗಳನ್ನು ಕೆಲ ರೈಲ್ವೇ ಸಿಬ್ಬಂದಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಚಲಾಯಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
500 ರೂಪಾಯಿ ನೋಟುಗಳ ಮುದ್ರಣಕ್ಕೆ ಬಳಸಲಾದ ಹಸಿರು ಶಾಯಿಯನ್ನು ಚೀನಾ ಕಂಪನಿಯು ಸರಬರಾಜು ಮಾಡುತ್ತಿದೆ. ಆರೋಪಿಗಳಿಂದ 1.5 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು, ಪ್ರಿಂಟಿಂಗ್ ಯಂತ್ರವನ್ನು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಕಲಿ ನೋಟಿನಲ್ಲಿ ಆರ್ ಬಿಐಯ ವಾಟರ್ ಮಾರ್ಕ್, ಮಹಾತ್ಮ ಗಾಂಧಿಯ ವಾಟರ್ ಮಾರ್ಕ್ ಕೂಡ ಇರುತ್ತಿತ್ತು. ಪ್ರಕರಣದ ಕುರಿತು ಪೊಲೀಸರು ಎನ್ ಐಎ ಹಾಗೂ ಭಯೋತ್ಪಾದನಾ ನಿಗ್ರಹ ದಳಕ್ಕೆ ಮಾಹಿತಿ ನೀಡಲಾಗಿದೆ.