Advertisement

ನಕಲಿ ನೋಟುಗಳನ್ನು ಹರಿಯ ಬಿಡಲು ಐಎಸ್‌ಐ , ಡಿ-ಕಂಪೆನಿ ಹುನ್ನಾರ

09:27 AM Jun 03, 2019 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಉನ್ನತ ಗುಣಮಟ್ಟದ ನಕಲಿ ನೋಟುಗಳನ್ನು ಹರಿಯಬಿಡಲು ಪಾಕಿಸ್ಥಾನದ ಐಎಸ್‌ಐ ಮತ್ತು ದಾವುದ್‌ ಕಂಪೆನಿ ಸಿದ್ಧತೆ ನಡೆಸಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳದ ತನಿಖೆಯಿಂದ ತಿಳಿದು ಬಂದಿದೆ.

Advertisement

ಬಹಳ ಕಾಲದ ನಂತರ ಭಾರತದ ಪೂರ್ವಗಡಿಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ದೇಶದೊಳಗೆ ಚಲಾವಣೆಗೆ ತರಲು ಹುನ್ನಾರ ನಡೆಸಿರುವುದು ಗಮಕ್ಕೆಬಂದಿದೆ.

ನೇಪಾಳ ಪೊಲೀಸರಿಂದ ಬಂಧನಕ್ಕೊಳಗಾದ ನಕಲಿ ನೋಟುಗಳಜಾಲದ ಕಿಂಗ್‌ಪಿನ್‌ ಯೂನಸ್‌ ಅನ್ಸಾರಿ ವಿಚಾರಣೆ ವೇಳೆ ಈ ವಿಚಾರಗಳು ಬಯಲಾಗಿವೆ. ಬಂಧಿತ ಯೂನಸ್‌ ಐಎಸ್‌ಐ ಮತ್ತು ಡಿ-ಕಂಪೆನಿಯೊಂದಿಗೆ ಬಲವಾದ ನಂಟು ಹೊಂದಿದ್ದಾನೆ ಎಂದು ತಿಳಿದು ಬಂದಿದೆ.

ಅನ್ಸಾರಿ ಜೊತೆ ಪಾಕಿಸ್ಥಾನ ಪ್ರಜೆಗಳಾದ ಮೊಹಮದ್‌ ಅಖ್‌ತರ್‌, ನಾಡಿಯಾ ಅನ್ವರ್‌ , ನಾಸಿರುದ್ದೀನ್‌ ಎನ್ನುವ ಆರೋಪಿಗಳನ್ನೂ 7 ಕೋಟಿ ರೂಪಾಯಿ ಮೌಲ್ಯದ ನೋಟುಗಳೊಂದಿಗೆ ಬಂಧಿಸಲಾಗಿದೆ.

ಬಾಂಗ್ಲಾ ಗಡಿಯ ಮೂಲಕ ಭಾರತಕ್ಕೆ ನಕಲಿ ನೋಟುಗಳನ್ನು ಸರಬರಾಜು ಮಾಡಿ ಭಾರತದ ಆರ್ಥಿಕ ಸ್ಥಿತಿ ಕುಸಿತಕ್ಕೆ ಕಾರಣವಾಗಲು ಹುನ್ನಾರ ನಡೆಸಿರುವುದು ತಿಳಿದು ಬಂದಿದೆ.

Advertisement

ಈಗಾಗಲೆ ಕಳೆದು ಜನವರಿಯಲ್ಲಿ ಪಶ್ಚಿಮ ಬಂಗಾಳದ ಆನಂದ್‌ ವಿಹಾರ್‌ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ್ನು 10 ಲಕ್ಷ ಮೌಲ್ಯದ ನಕಲಿ ನೋಟುಗಳೊಂದಿಗೆ ವಶಕ್ಕೆ ಪಡೆಯಲಾಗಿತ್ತು. ಆತನ ವಿಚಾರಣೆ ವೇಳೆ ನೋಟುಗಳು ಬಾಂಗ್ಲಾದೇಶದಲ್ಲಿ ಮುದ್ರಣಗೊಂಡಿರುವುದು ತಿಳಿದು ಬಂದಿದೆ.

ಗುಜರಾತ್‌ನ ಜುನಾಗಡದಲ್ಲಿಯೂ ಎಟಿಎಸ್‌ ಪೊಲೀಸರು ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದರು.

ಗುರಗ್ರಾಮದಲ್ಲಿ ಇತ್ತೀಚೆಗೆ ನಕಲಿ ನೋಟುಗಳೊಂದಿಗೆ ಇಬ್ಬರನ್ನು ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next