Advertisement

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

08:42 PM Dec 24, 2024 | Team Udayavani |

ಲಕ್ನೋ: ದೇಶದ ವಿವಿಧ ಭಾಗಗಳಲ್ಲಿ ಮಂದಿರ-ಮಸೀದಿ ವಿವಾದಗಳ ಕಿಚ್ಚು ಹೊತ್ತಿಸುತ್ತಿರುವ ಘಟನೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ವಿರುದ್ಧ ಈಗ ಅಖಿಲ ಭಾರತೀಯ ಸಂತ ಸಮಿತಿ(ಎಕೆಎಸ್‌ಎಸ್‌) ತಿರುಗಿಬಿದ್ದಿದೆ.

Advertisement

“ಆರೆಸ್ಸೆಸ್‌ ಒಂದು ಸಾಂಸ್ಕೃತಿಕ ಸಂಘಟನೆ ಅಷ್ಟೆ. ಇಂತಹ ಧಾರ್ಮಿಕ ವಿಚಾರಗಳನ್ನು ನಿರ್ಧರಿಸಬೇಕಾದವರು ಧರ್ಮಾಚಾರ್ಯರೇ ಹೊರತು ಆರೆಸ್ಸೆಸ್‌ ಅಲ್ಲ. ಧರ್ಮಕ್ಕೆ ಸಂಬಂಧಿಸಿದ ಯಾವುದೇ ವಿಚಾರ ಎದ್ದಾಗ, ಅದನ್ನು ನಿರ್ಧರಿಸುವ ಅಧಿಕಾರ ಇರುವುದು ಧಾರ್ಮಿಕ ಗುರುಗಳಿಗೆ. ಅವರೇನು ನಿರ್ಧರಿಸುತ್ತಾರೋ ಅದನ್ನು ಸಂಘ ಮತ್ತು ವಿಎಚ್‌ಪಿ ಒಪ್ಪುತ್ತದೆ’ ಎಂದು ಎಕೆಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಹೇಳಿದ್ದಾರೆ.

56 ಹೊಸ ಪ್ರದೇಶಗಳಲ್ಲಿ ಧಾರ್ಮಿಕ ಕಟ್ಟಡಗಳ ಕುರುಹು ಪತ್ತೆಯಾಗಿದೆ. ಹೀಗಾಗಿ ಧಾರ್ಮಿಕ ಸಂಘಟನೆಗಳು ರಾಜಕೀಯ ಅಜೆಂಡಾಗಳ ಬದಲಾಗಿ ಸಾರ್ವಜನಿಕರ ಭಾವನೆಗಳಿಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತದೆ ಎಂದೂ ಹೇಳಿದ್ದಾರೆ. ಈ ಮೂಲಕ ಭಾಗವತ್‌ ಹೇಳಿಕೆಗೆ ಕೇಸರಿ ಪಾಳಯದಲ್ಲೇ ಅಪಸ್ವರ ಎದ್ದಿರುವುದು ಸ್ಪಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next