Advertisement
ಬಹು ವರ್ಷಗಳ ಬೇಡಿಯಾಗಿರುವ ವೈದ್ಯಕೀಯ, ಇಂಜಿನಿಯರಿಂಗ್, ನರ್ಸಿಂಗ್ ಕಾಲೇಜುಗಳನ್ನು ಈ ಭಾಗದಲ್ಲಿ ಸ್ಥಾಪಿಸಲು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ದೊರಕಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಗಡಿ ಜಿಲ್ಲೆ ಜನರಿಗೆ ಈ ಬಜೆಟ್ ಕಹಿಯಾಗಿದೆ. ಸಮ್ಮಿಶ್ರ ಸರ್ಕಾರ ಕೇವಲ ಹಾಸನ, ಮಂಡ್ಯ, ಮೈಸೊರಿಗಾಗಿ ಮಂಡಿಸಿರುವ ಬಜೆಟ್ ಎನ್ನುವಂತಾಗಿದೆ. ಉತ್ತರ ಕರ್ನಾಟಕಕ್ಕೆ ವಿಶೇಷ ಯೋಜನೆ ನೀಡದೆ ತಾರತಮ್ಯ ಮಾಡಲಾಗಿದೆ.
Related Articles
ಅಭಿವೃದ್ಧಿ ನೋಟ ಇದರಲ್ಲಿ ಕಾಣುತ್ತಿಲ್ಲ. ಯಾದಗಿರಿ ಜಿಲ್ಲೆಯಲ್ಲಿ ತೋಟಗಾರಿಕೆ ತೀರಾ ಕಡಿಮೆ ಇದೆ. ಅದಕ್ಕೆ ಯೋಜನೆ ರೂಪಿಸಿದ್ದಾರೆ. ಬಿಜೆಪಿ ಜನಪ್ರತಿನಿಧಿಗಳು ಆರಿಸಿ ಬಂದಿರುವ ಪ್ರದೇಶಗಳನ್ನು ನಿರ್ಲಕ್ಷಿಸಲಾಗಿದೆ.
ವೆಂಕಟರೆಡ್ಡಿ ಮುದ್ನಾಳ, ಶಾಸಕ
Advertisement
ರಾಜ್ಯದಲ್ಲಿ ಶೇ. 70ರಷ್ಟು ರೈತರಿದ್ದಾರೆ. ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸಮ್ಮಿಶ್ರ ಸರ್ಕಾರಮಾಡಿದೆ. ಕೇಂದ್ರ ಸರ್ಕಾರ ಮಾಡಬೇಕಿದ್ದ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ.
ಶರಣಬಸಪ್ಪಗೌಡ, ಶಾಸಕ ಅಭಿವೃದ್ಧಿಯ ಬಜೆಟ್ ಇದು ಅಲ್ಲ. ಜಿಲ್ಲೆಗೆ ಮೊದಲಿ ನಿಂದಲೂ ಅನ್ಯಾಯ ಆಗುತ್ತಿದೆ. ಜಿದ್ದಿನಿಂದ ಎಚ್.ಡಿ. ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಿದ್ದಾರೆ. ಅಭಿವೃದ್ಧಿ ದೃಷ್ಟಿ ಇಲ್ಲಿ ಕಾಣುತ್ತಿಲ್ಲ.
ರಾಜುಗೌಡ, ಶಾಸಕ ಬಜೆಟ್‌ಲ್ಲಿ ರೈತರ 34 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿರುವುದು ಸಂತಸದ ವಿಚಾರ. 150 ಕೋಟಿ ರೂ. ವೆಚ್ಚದ 5 ಸಾವಿರ ಹೆಕ್ಟೇರ್ ಇಸ್ರೇಲ್ ಮಾದರಿ ಕೃಷಿಗಾಗಿ ವಿಶೇಷ ಅನುದಾನದಡಿ ಯಾದಗಿರಿ ಜಿಲ್ಲೆ ಸೇರಿಸಿದ್ದು ಸಂತಸ ತಂದಿದೆ.
ನಾಗನಗೌಡ, ಶಾಸಕ ಸಮ್ಮಿಶ್ರ ಸರ್ಕಾರ ಅವೈಜ್ಞಾನಿಕ ಬಜೆಟ್ ಮಂಡಿಸಿದ್ದು, ಜನ ಸಾಮಾನ್ಯರ ಮೇಲೆ ಹೊರೆ ಹಾಕಿದೆ. ನಿತ್ಯ ಉಪಯೋಗಿ ವಸ್ತುಗಳಾದ ಪೆಟ್ರೋಲ್, ಡಿಸೇಲ್ ಹಾಗೂ ವಿದ್ಯುತ್ ದರ ಹೆಚ್ಚಿಸಿದೆ. ಹೀಗಾದರೆ ಬಡವರು ಹಾಗೂ ಮಧ್ಯಮವರ್ಗದವರು ಜೀವನ ಮಾಡುವುದಾದರು ಹೇಗೆ? ನಾಗರತ್ನಾ ಕುಪ್ಪಿ ರಾಜ್ಯ ಬಿಜೆಪಿ ಉಪಾಧ್ಯಕ್ಷ
ಈ ಬಜೆಟ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಪರಿಪೂರ್ಣವಾಗಿಲ್ಲ. ಒಂದು ಕಣ್ಣಿಗೆ ಸುಣ್ಣ , ಇನ್ನೊಂದು ಕಣ್ಣಿಗೆ
ಬೆಣ್ಣೆ ಸವರುವ ಕೆಲಸವನ್ನು ಸಮ್ಮಿಶ್ರ ಸರ್ಕಾರ ಮಾಡಿದೆ.
ಸಿದ್ಧಲಿಂಗರೆಡ್ಡಿ ಪಾಟೀಲ ಕಂದಕೂರ, ಕರವೇ ಜಿಲ್ಲಾಧ್ಯಕ್ಷ ಸಾಲಮನ್ನಾ ಅವೈಜ್ಞಾನಿಕ ನಿಲುವು, ಆಳುವ ಪಕ್ಷಗಳು ಶ್ರಮ ಜೀವಿ ರೈತರಲ್ಲಿ ಇನ್ನಷ್ಟು ಆಲಸ್ಯತನ ಮೂಡಿಸುವ ಹುನ್ನಾರ ನಡೆಸಿವೆ.
ರಾಜಾ ಮದನಗೋಪಾಲ ನಾಯಕ, ಮಾಜಿ ಸಚಿವ ಹಳೇ ಮೈಸೂರು ಭಾಗಕ್ಕೆ ಒತ್ತು ನೀಡಿದ್ದಾರೆ. ಸಂಪೂರ್ಣ ಸಾಲ ಮನ್ನಾ ಮಾಡದೇ ಮತ್ತೂಮ್ಮೆ ವಚನ ಭ್ರಷ್ಟರಾಗಿದ್ದಾರೆ. ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡದೆ ತೀವ್ರ ನಿರಾಸೆಯಾಗಿದೆ.
ಉಮೇಶ ಮುದ್ನಾಳ, ಕೋಲಿ ಸಮಾಜದ ಜಿಲ್ಲಾಧ್ಯಕ್ಷ