Advertisement

ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ತಡೆಯದ ಮೇಘಾಲಯಕ್ಕೆ 100 ಕೋಟಿ ದಂಡ

12:00 PM Jan 05, 2019 | udayavani editorial |

ಹೊಸದಿಲ್ಲಿ : ರಾಜ್ಯದಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯನ್ನು ತಡೆಯಲು ವಿಫ‌ಲವಾಗಿರುವ ಮೇಘಾಲಯ ಸರಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) 100 ಕೋಟಿ ರೂ. ಗಳ ಭಾರೀ ದಂಡವನ್ನು ವಿಧಿಸಿದೆ.

Advertisement

ಮೇಘಾಲದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಕುರಿತ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಜನವರಿ 2ರಂದು ಎನ್‌ಜಿಟಿ ಅಧ್ಯಕ್ಷ ಎ ಕೆ ಗೋಯಲ್‌ ನೇತೃತ್ವದ ಪೀಠದ ಮುಂದೆ ಸಲ್ಲಿಸಲಾಗಿತ್ತು ಎಂದು ಎನ್‌ಜಿಟಿ ಕಾನೂನು ಮಾರ್ಗದರ್ಶಕರಾಗಿರುವ ಹಿರಿಯ ನ್ಯಾಯವಾದಿ ತಿಳಿಸಿದರು. 

ಈಶಾನ್ಯ ರಾಜ್ಯ ಮೇಘಾಲದಲ್ಲಿ ನಡೆಯುತ್ತಿರುವ ಹೆಚ್ಚಿನ ಕಲ್ಲಿದ್ದಲು ಗಣಿಗಾರಿಕೆ ಯಾವುದೇ ಪರವಾನಿಗೆ, ಅನುಮತಿ ಇಲ್ಲದೆ ನಿರಾತಂಕವಾಗಿ ರಾಜಾರೋಷದಿಂದ ನಡೆಯುತ್ತಿದೆ ಎಂದು ವರದಿಯು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next