Advertisement

ಮತ್ತೆ ತಂಡಕ್ಕೆ ಮರಳಿದ ಡುಪ್ಲೆಸಿಸ್: ಭಾರತ ವಿರುದ್ಧ ಸರಣಿಗೆ ಆಫ್ರಿಕಾ ತಂಡ ಪ್ರಕಟ

09:49 AM Mar 03, 2020 | keerthan |

ಕೇಪ್ ಟೌನ್: ಭಾರತ ವಿರುದ್ಧದ ಚುಟುಕು ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಿದ್ದು, ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ತಂಡಕ್ಕೆ ಮರಳಿದ್ದಾರೆ.

Advertisement

15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಫಾಫ್ ಡುಪ್ಲೆಸಿಸ್ ಮತ್ತು ರಾಸ್ಸಿ ವ್ಯಾನ್ ಡರ್ ಡ್ಯುಸೆನ್ ಕಮ್ ಬ್ಯಾಕ್ ಮಾಡಿದ್ದಾರೆ. ಉಳಿದಂತೆ ಯುವ ಲೆಗ್ ಸ್ಪಿನ್ನರ್ ಜಾರ್ಜ್ ಲಿಂಡೆಯನ್ನು ತಂಡಕ್ಕೆ ಸೇರಿಸಲಾಗಿದೆ. ಪ್ರಮುಖ ಸ್ಪಿನ್ನರ್ ತಬ್ರಿಜ್ ಶಂಸಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಈ ಸರಣಿಗೆ ಅಲಭ್ಯರಾಗಿದ್ದು, ಅವರ ಬದಲು ಲಿಂಡೆಗೆ ಜಾಗ ಕಲ್ಪಿಸಲಾಗಿದೆ.

ಉಳಿದಂತೆ ಇತ್ತೀಚೆಗೆ ಆಸೀಸ್ ವಿರುದ್ದ ಪದಾರ್ಪಣೆ ಮಾಡಿದ ಜಾನೆಮನ್ ಮಲಾನ್ ಅವರನ್ನು ಕೈಬಿಡಲಾಗಿದೆ. ಮೂರು ಏಕದಿನ ಪಂದ್ಯಗಳ ಸರಣಿ ಮಾರ್ಚ್ 12ರಿಂದ 18ರವರೆಗೆ ನಡೆಯಲಿದೆ. ಧರ್ಮಶಾಲಾ, ಲಕ್ನೋ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿದೆ.

ತಂಡ: ಡಿಕಾಕ್ ( ನಾ), ತೆಂಬ ಬವುಮ, ವ್ಯಾನ್ ಡರ್ ಡ್ಯೂಸೆನ್, ಡುಪ್ಲೆಸಿಸ್, ಕೈಲ್ ವೆರಿನ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಜಾನ್ ಜಾನ್ ಸ್ಮಟ್ಸ್, ಆಂಡಿಲೆ ಫೆಲುಕ್ವಾಯೋ, ಲುಂಗಿ ನಿಗಿಡಿ, ಲುತೋ ಸಿಪಮ್ಲಾ, ಬ್ಯೂರೆನ್ ಹೆಂಡ್ರಿಕ್ಸ್, ಆನ್ರಿಚ್ ನೋರ್ಜೆ, ಜಾರ್ಜ್ ಲಿಂಡೆ, ಕೇಶವ್ ಮಹರಾಜ.

Advertisement

Udayavani is now on Telegram. Click here to join our channel and stay updated with the latest news.

Next