Advertisement

ಕೋವಿಡ್ ಸೋಂಕಿತ‌ ಮಕ್ಕಳಿಗೆ ಫಾ ಡು ಪ್ಲೆಸಿಸ್‌ ನೆರವು

12:28 PM Jul 19, 2020 | sudhir |

ಜೊಹಾನ್ಸ್‌ಬರ್ಗ್: ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆ ಹಾಗೂ ಆರ್ಥಿಕ ನೆರವಿಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಫಾ ಡು ಪ್ಲೆಸಿಸ್‌ ಮುಂದಾಗಿದ್ದಾರೆ. ನಿಧಿ ಸಂಗ್ರಹಕ್ಕಾಗಿ ತಮ್ಮ ಬ್ಯಾಟ್‌ ಮತ್ತು ಪಿಂಕ್‌ ಜೆರ್ಸಿಯನ್ನು ಹರಾಜಿಗೆ ಇರಿಸಿದ್ದಾರೆ.

Advertisement

ಇದು ನೂತನ ಐಎಕ್ಸ್‌ಯು ಕಂಪೆನಿಯ ಬ್ಯಾಟ್‌ ಆಗಿದ್ದು, ಪಿಂಕ್‌ ಜೆರ್ಸಿಯಲ್ಲಿ ಅವರ ಹೆಸರು ಮತ್ತು ಸಂಖ್ಯೆ (18) ಇದೆ. ಇದರ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

“ನಮ್ಮ ದೇಶದಲ್ಲಿ ಕೋವಿಡ್ ನಿಂದ ಬಹಳಷ್ಟು ಮಂದಿ ಮಕ್ಕಳು ಸಂಕಟಕ್ಕೆ ಸಿಲುಕಿದ್ದಾರೆ. ಇವರ ನೆರವಿಗೆ ನಿಲ್ಲುವುದು ನನ್ನ ಯೋಜನೆ. ಇದಕ್ಕಾಗಿ ಹಿಲ್‌ಸಾಂಗ್‌ ಆಫ್ರಿಕಾ ಹೆಸರಿನ ಫೌಂಡೇಶನ್‌ ಒಂದನ್ನು ಸ್ಥಾಪಿಸಿ 500,000 ರ್‍ಯಾಂಡ್ಸ್‌ ಮೊತ್ತವನ್ನು ಒಟ್ಟುಗೂಡಿಸಲು ನಿರ್ಧರಿಸಿದ್ದೇನೆ’ ಎಂಬುದಾಗಿ ಡು ಪ್ಲೆಸಿಸ್‌ ಹೇಳಿದ್ದಾರೆ.

ಇದಕ್ಕೂ ಮೊದಲು ಡು ಪ್ಲೆಸಿಸ್‌ ಮತ್ತು ಪತ್ನಿ ಇಮಾರಿ ವಿಸ್ಸೆರ್‌ ಸೇರಿಕೊಂಡು ನಿಧಿಯೊಂದನ್ನು ಸಂಗ್ರಹಿಸಿ ಕೋವಿಡ್‌-19 ಸಂತ್ರಸ್ತ ಮಕ್ಕಳಿಗೆ ನೆರವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next