ಮುಂಬಯಿ: ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರಿಗೆ ಪಾಠ ಕಲಿಸಲು 2019 ರಲ್ಲಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಬೆಂಬಲವನ್ನು ಪಡೆಯುವುದು ಅಗತ್ಯವಾಗಿತ್ತು ಎಂದು ಮಹಾರಾಷ್ಟ್ರ ಸಚಿವ ಸುಧೀರ್ ಮುಂಗಂತಿವಾರ್ ಹೇಳಿಕೆ ನೀಡಿದ್ದಾರೆ.
2019 ರಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಪವಾರ್ ರಚಿಸಿದ್ದ ಮೈತ್ರಿಯ ಸ್ಪಷ್ಟ ಉಲ್ಲೇಖ ಮಾಡಿ ಮಾತನಾಡಿದ ಮುಂಗಂತಿವಾರ್ “ಆ ಸಮಯದಲ್ಲಿ ಉದ್ಧವ್ ಠಾಕ್ರೆ ತಂದ ಹೊಸ ರಾಜಕೀಯ ವ್ಯವಸ್ಥೆ ವಿರುದ್ಧ ಅವರಿಗೆ ಪಾಠ ಕಲಿಸಲು ಎನ್‌ಸಿಪಿಯ ಅಜಿತ್ ಪವಾರ್ ಅವರ ಬೆಂಬಲವನ್ನು ಪಡೆಯುವುದು ಅಗತ್ಯವಾಗಿತ್ತು” ಎಂದು ಶನಿವಾರ ಲೋಕಸತ್ತಾ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.
ಬಿಜೆಪಿ ನಾಯಕ ಮುಂಗಂತಿವಾರ್ ಕಾಮೆಂಟ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಫಡ್ನವೀಸ್, “ಮುಂಗಂತಿವಾರ್ ಹೇಳಿದ್ದನ್ನು ನಾನು ವೈಯಕ್ತಿಕವಾಗಿ ಕೇಳಿಲ್ಲ. ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ಮುಂಗಂತಿವಾರ್ ಅವರ ಕಾಮೆಂಟ್‌ಗಳ ಬಗ್ಗೆ ವರದಿಗಾರರು ಸಂಜಯ್ ರಾವುತ್ ಅವರನ್ನು ಪ್ರಶ್ನಿಸಿದಾಗ, “ ಮುಂಗಂತಿವಾರ್ ಅವರಿಗೆ ಅವರ ಪಕ್ಷದಲ್ಲಿ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಅವರ ಕಾಮೆಂಟ್‌ಗಳ ಬಗ್ಗೆ ನಮ್ಮನ್ನು ಕೇಳುವುದರ ಅರ್ಥವೇನು? ಇತ್ತೀಚೆಗೆ ಅಜಿತ್ ಪವಾರ್ ಬಿಜೆಪಿ ಪಾಳಯಕ್ಕೆ ಸೇರಬಹುದು ಎಂಬ ಊಹಾಪೋಹವಿತ್ತು, ಆದರೆ ಅವರು ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅಂತಹ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ದೇವೇಂದ್ರ ಫಡ್ನವಿಸ್-ಅಜಿತ್ ಪವಾರ್ ಸರಕಾರವು ಮೂರು ದಿನಗಳ ಕಾಲ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ನವೆಂಬರ್ 2019 ರಲ್ಲಿ ಸರಳ ಸಮಾರಂಭದಲ್ಲಿ ರಚನೆಯಾಗಿತ್ತು. ನಂತರ, ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷ, ಎನ್‌ಸಿಪಿ ಮತ್ತು ಕಾಂಗ್ರೆಸ್ ಅನ್ನು ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಮುಖ್ಯಮಂತ್ರಿಯಾಗಿ ಮಿತ್ರ ಪಕ್ಷ ಬಿಜೆಪಿಗೆ ಶಾಕ್ ನೀಡಿದ್ದರು.