Advertisement

ಗೋಕುಲ ಕೈಗಾರಿಕಾ ಪ್ರದೇಶಕ್ಕೆ ಸೌಲಭ್ಯಗಳ ಹರ್ಷ

12:00 PM Mar 30, 2021 | Team Udayavani |

ಹುಬ್ಬಳ್ಳಿ: ಕಳೆದ ಮೂರ್‍ನಾಲ್ಕು ದಶಕಗಳಿಂದ ರಸ್ತೆ ಸೇರಿದಂತೆ ಹಲವು ಮೂಲ ಸೌಲಭ್ಯಗಳ ಕೊರತೆ ಅನುಭವಿಸುತ್ತಿದ್ದ ಗೋಕುಲ ಕೈಗಾರಿಕೆ ಪ್ರದೇಶಕ್ಕೆ ಸ್ಮಾರ್ಟ್‌ ಟಚ್‌ ದೊರೆತಿದೆ. ಹು-ಧಾ ಸ್ಮಾರ್ಟ್‌ಸಿಟಿ ಕಂಪನಿ ಎರಡು ಪ್ಯಾಕೇಜ್‌ಗಳಲ್ಲಿ ಉತ್ತಮವಾದ ಸ್ಮಾರ್ಟ್‌ ರಸ್ತೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಿದೆ.

Advertisement

ಹಲವು ಕಾರಣಗಳಿಂದ ಗೋಕುಲ ಕೈಗಾರಿಕೆ ಪ್ರದೇಶ ಮೂಲಸೌಲಭ್ಯಗಳ ಕೊರತೆಯಿಂದನಲುಗುತ್ತಿತ್ತು. ಈ ಕುರಿತು ಅಧಿಕಾರಿಗಳು,ಜನಪ್ರತಿನಿಧಿ ಗಳಿಗೆ ಹಲವು ಮನವಿ ಪತ್ರಗಳನ್ನುನೀಡಿದ್ದರೂ ಕೇವಲ ಭರವಸೆಗಳಿಂದಉದ್ಯಮಿಗಳು ಬೇಸತ್ತಿದ್ದರು. ಆದರೆ ಕಳೆದಐದಾರು ವರ್ಷದಲ್ಲಿ ಒಂದಿಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕಳೆದ ಎರಡುವರ್ಷಗಳ ಹಿಂದೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ 4.5 ಕಿಮೀ ವಿವಿಧ ರಸ್ತೆಗಳನ್ನು ಸ್ಮಾರ್ಟ್‌ ಕಾಂಕ್ರೀಟ್‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಅಗಲ ಹಾಗೂ ಸುಂದರ ರಸ್ತೆಯಿಂದ ಗೋಕುಲ ಕೈಗಾರಿಕಾ ಪ್ರದೇಶದ ಚಿತ್ರಣವೇ ಬದಲಾಗಿದೆ.

ಸ್ಮಾರ್ಟ್‌ ರಸ್ತೆ ವೈಶಿಷ್ಟ್ಯ: 4.5 ಕಿಮೀ ವಿಶಾಲವಾದ ಕಾಂಕ್ರೀಟ್‌ ರಸ್ತೆ, ಎರಡು ಬದಿಯಲ್ಲಿ ಪೇವರ್,ವಿವಿಧ ಕೇಬಲ್‌ಗ‌ಳು, ನೀರು, ವಿದ್ಯುತ್‌ ಲೈನ್‌ಎಳೆಯಲು ಪ್ರತ್ಯೇಕ ಡಕ್ಟ್, ರಸ್ತೆಯುದ್ದಕ್ಕೂಎಲ್‌ಇಡಿ ಬೀದಿ ದೀಪ, ವ್ಯವಸ್ಥಿತ ಗಟಾರ,ಗ್ಯಾಸ್‌ ಪೈಪ್‌ಲೈನ್‌ ಎಳೆಯಲು ಮಾರ್ಗಗುರುತಿಸಿ ಪೇವರ್ ಹಾಕಲಾಗಿದೆ.ಒಳ ಚರಂಡಿ ವ್ಯವಸ್ಥೆ, ಅಲ್ಲಲ್ಲಿ ಪಾರ್ಕಿಂಗ್‌ವ್ಯವಸ್ಥೆ ಕಲ್ಪಿಸಲಾಗಿದೆ. ಅಗಲವಾದ ಪಾದಚಾರಿಮಾರ್ಗ, ರಸ್ತೆಗಳಿಗೆ ಮಾರ್ಕಿಂಗ್‌, ಜಂಕ್ಷನ್‌ಗಳ ಅಭಿವೃದ್ಧಿ, ಟೆಂಡರ್‌ ಶ್ಯೂರ್‌ ರಸ್ತೆಯಲ್ಲಿನೀಡಿರುವ ಎಲ್ಲಾ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂಕಾಂಕ್ರೀಟ್‌ ರಸ್ತೆ ಅಗೆಯುವ ಅಗತ್ಯವಿಲ್ಲ. ಒಂದುವೇಳೆ ಕಾಂಕ್ರೀಟ್‌ ರಸ್ತೆ ಅಗೆದರೆ ಸ್ಮಾರ್ಟ್‌ಸಿಟಿಕಂಪನಿ ವತಿಯಿಂದ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಅ ಧಿಕಾರಿಗಳು ನೀಡಿದ್ದಾರೆ.

ಮೊದಲ ಸ್ಮಾರ್ಟ್‌ ರಸ್ತೆ :

ಹು-ಧಾ ಸ್ಮಾರ್ಟ್‌ಸಿಟಿ ಕಂಪನಿ ನಗರದ 10 ರಸ್ತೆಗಳನ್ನು ಸ್ಮಾರ್ಟ್‌ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದೆ. ಈ ಪೈಕಿ ಗೋಕುಲ ಕೈಗಾರಿಕೆ ಪ್ರದೇಶದಲ್ಲಿ8 ಕೋಟಿ ಹಾಗೂ 21 ಕೋಟಿ ವೆಚ್ಚದಎರಡು ಪ್ಯಾಕೇಜ್‌ಗಳು ಪೂರ್ಣಗೊಳ್ಳುವಮೂಲಕ 10 ಪ್ಯಾಕೇಜ್‌ಗಳಲ್ಲಿ ಮೊದಲುಪೂರ್ಣಗೊಂಡ ಎರಡು ರಸ್ತೆಗಳಾಗಿವೆ.1ನೇ ಪ್ರವೇಶ ದ್ವಾರದಿಂದ ಎಂಟಿ ಸಾಗರಇಂಡಸ್ಟ್ರಿಯಲ್‌ ಪ್ರದೇಶ ಹಾಗೂ 2ನೇ ಪ್ರವೇಶ ದ್ವಾರದಿಂದ ತತ್ವದರ್ಶಆಸ್ಪತ್ರೆವರೆಗಿನ ಪ್ರಮುಖ ಹಾಗೂ ಒಳರಸ್ತೆಗಳು ಈ ಯೋಜನೆಗೆ ಒಳಪಟ್ಟಿವೆ.

Advertisement

ಇನ್ನಷ್ಟು  ರಸ್ತೆ ಕಾರ್ಯ ಬಾಕಿ :

ಸುಮಾರು 123 ಎಕರೆ ಪ್ರದೇಶ ಹೊಂದಿರುವಕೈಗಾರಿಕಾ ಪ್ರದೇಶದಲ್ಲಿ ಸುಮಾರು 11 ಕಿಮೀಸಣ್ಣ ಹಾಗೂ ದೊಡ್ಡ ರಸ್ತೆಗಳಿವೆ. ಇದೀಗ 4.5ಕಿಮೀ ಸಾರ್ಟ್‌ಸಿಟಿ ಕಂಪನಿಯಿಂದ ರಸ್ತೆನಿರ್ಮಾಣವಾಗಿವೆ. ಉಳಿದ ಕಡೆ ಕೆಎಸ್‌ಎಸ್‌ಐಡಿಸಿವತಿಯಿಂದ ರಸ್ತೆ ನಿರ್ಮಾಣವಾಗಿವೆ. ಆದರೆ ಸ್ಮಾರ್ಟ್‌ಸಿಟಿಯಿಂದ ನಿರ್ಮಾಣವಾಗಿರುವ ರಸ್ತೆ ಹಾಗೂಇತರೆ ಸೌಲಭ್ಯಗಳ ಬಗ್ಗೆ ಉದ್ಯಮಿಗಳ ಅಭಿಪ್ರಾಯಉತ್ತಮವಾಗಿದೆ. ಕಾಂಕ್ರೀಟೀಕರಣಗೊಂಡ ರಸ್ತೆಗಳಿಗೆಸ್ಮಾರ್ಟ್‌ಸಿಟಿಯಿಂದ ನೀಡಿರುವ ವ್ಯವಸ್ಥೆಗಳನ್ನುಕಲ್ಪಿಸಿದರೆ ಗೋಕುಲ ಕೈಗಾರಿಕಾ ಪ್ರದೇಶ ಮಾದರಿಯಾಗಲಿದೆ. ಮಳೆಗಾಲದಲ್ಲಿ ಈ ಸ್ಮಾರ್ಟ್‌ ರಸ್ತೆಯ ವೈಜ್ಞಾನಿಕ ಕಾರ್ಯ ಗೊತ್ತಾಗಲಿದೆ.

ಸ್ವಚ್ಛತೆಗೆ ಬೇಕು ಗಮನ :

ಈಗಾಗಲೇ ನಿರ್ಮಾಣವಾಗಿರುವ ಸ್ಮಾರ್ಟ್‌ಸಿಟಿ ರಸ್ತೆಯ ಅಂದವನ್ನು ಸ್ವಚ್ಛತೆ ಕೊರತೆನುಂಗಿಹಾಕುತ್ತಿದೆ. ನಿತ್ಯವೂ ಕಸ ಗುಡಿಸುವುದು,ಕಸ ಸಂಗ್ರಹಣೆ ನಡೆದರೆ ಮಾತ್ರ ಸ್ಮಾರ್ಟ್‌ರಸ್ತೆಗಳು ಸ್ಮಾರ್ಟ್‌ ಆಗಿ ಕಾಣಲು ಸಾಧ್ಯ.ಮಹಾನಗರ ಪಾಲಿಕೆ ಹಾಗೂ ಕೆಎಸ್‌ಎಸ್‌ಐಡಿಸಿ ಅಧಿ ಕಾರಿಗಳು ಇತ್ತ ಗಮನ ಹರಿಸಬೇಕು ಎಂಬುದು ಉದ್ಯಮಿಗಳ ಒತ್ತಾಯವಾಗಿದೆ.

ಸ್ಮಾರ್ಟ್‌ಸಿಟಿಯಿಂದ ರಸ್ತೆಗಳನ್ನು ಉತ್ತಮವಾಗಿ ನಿರ್ಮಿಸಿದ್ದಾರೆ. ರಸ್ತೆಗೆ ತಕ್ಕಂತೆ ವಿವಿಧಸೌಲಭ್ಯ ನೀಡಿದ್ದಾರೆ. ಸುದೀರ್ಘ‌ ಕಾಲ ಇವುಗಳನ್ನು ಕಾಪಾಡಿಕೊಂಡು ಹೋಗುವ ಕೆಲಸ ಉದ್ಯಮಗಳಿಂದ ಆಗಬೇಕು. ಸಣ್ಣಪುಟ್ಟ ದುರಸ್ತಿಗಳು ಇದ್ದಾಗ ಕೂಡಲೇ ಪೂರ್ಣಗೊಳಿಸುವ ಕೆಲಸ ಆಗಬೇಕು. ಹಲವು ವರ್ಷಗಳ ನಂತರ ಗೋಕುಲ ಕೈಗಾರಿಕೆ ಪ್ರದೇಶಕ್ಕೆ ಒಳ್ಳೆಯ ಕಳೆ ಬಂದಿದೆ. – ಗಣಪತಿ ಸ್ವಾದಿ, ಉದ್ಯಮಿ

ಸ್ಮಾರ್ಟ್‌ಸಿಟಿ ಕಂಪನಿತೆಗೆದುಕೊಂಡಿರುವ 10ರಸ್ತೆಗಳ ಪೈಕಿ ಎರಡು ರಸ್ತೆಗಳುಮೊದಲಿಗೆ ಸ್ಮಾರ್ಟ್‌ ಆಗಿವೆ. ಕೈಗಾರಿಕೋದ್ಯಮಿಗಳಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಬಹುತೇಕ ಎಲ್ಲ ಕಾರ್ಯಗಳು ಪೂರ್ಣಗೊಂಡಿವೆ. ಟೆಂಡರ್‌ ಶ್ಯೂರ್‌ ರಸ್ತೆ ಹೊರತುಪಡಿಸಿಇವು ಮಹಾನಗರದ ಮಾದರಿ ರಸ್ತೆಯಾಗಿವೆ.ಯಾವುದೇ ಕಾರಣಕ್ಕೂ ರಸ್ತೆ ಅಗೆಯದಂತೆ ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. – ಶಕೀಲ್‌ ಅಹ್ಮದ್‌, ವ್ಯವಸ್ಥಾಪಕ ನಿರ್ದೇಶಕ, ಹು-ಧಾ ಸ್ಮಾಟ್‌ಸಿಟಿ ಕಂಪನಿ

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next