ದೇವನಹಳ್ಳಿ: ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಸಂಘಗಳಿಂದ ಸೌಲಭ್ಯ ಸಿಗುತ್ತಿದ್ದು, ಸ್ಥಳೀಯ ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಶಾಸಕ ನಿಸರ್ಗ ಎಲ್.ಎನ್.ನಾರಾಯಣಸ್ವಾಮಿ ಅವರು ಸಲಹೆ ನೀಡಿದರು. ತಾಲೂಕಿನ ಬಿದಲೂರು ವ್ಯವಸಾಯ ಸಹಕಾರ ಸಂಘ ಆವರಣದ ಬಳಿ ಸಂಘದ ಸ್ವಂತ ಬಂಡವಾಳದಲ್ಲಿ ನಿರ್ಮಿಸಿರುವ ರಸ ಗೊಬ್ಬರ ಗೋದಾಮು, ಮಳಿಗೆ ಉದ್ಘಾಟಿಸಿ ಮಾತನಾಡಿದರು.
ಸಂಘದಿಂದ ಉತ್ತಮ ಕಾರ್ಯ: ರಸ ಗೊಬ್ಬರ, ಕ್ರಿಮಿನಾಶಕ ಔಷಧಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಸ್ವಂತ ಬಂಡವಾಳದಲ್ಲಿ ಬಿದಲೂರು ವ್ಯವ ಸಾಯ ಸೇವಾ ಸಹಕಾರ ಸಂಘ ಉತ್ತಮ ಕಾರ್ಯ ಮಾಡಿದೆ. ರೈತರು ಇದರ ಸದುಪ ಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಜಮೀನು ಕೊಟ್ಟ ರೈತರಿಗೆ ಸೂರು: ವ್ಯಾಪ್ತಿಯ ರೈತರಿಗೆ ಸಹಕಾರಿಯಾಗಿದೆ. ಸಹಕಾರ ಸಂಘಗಳು ರೈತರ ಆರ್ಥಿಕ ಅಭಿ ವೃದ್ಧಿಗೆ ಅನುಕೂಲ ಮಾಡುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಸಂಘಗಳು ಉತ್ತಮ ಸೇವೆ ನೀಡುತ್ತಿವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಮೀನು ಕೊಟ್ಟವರು ನಿರ್ಗತಿ ಕರಾಗಿದ್ದಾರೆ. ಅವರಿಗೆ ಸೂರು ನೀಡುವಂತಾ ಗಬೇಕು. ತಾಲೂಕಿನಲ್ಲಿ ಗೋಮಾಳ ಇತರೆ ಜಾಗಗಳಿಗೆ ಸಂಬಂಧಿಸಿದಂತೆ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡುತ್ತೇನೆ. ಬಿದಲೂರು ವಿಎಸ್‌ಎಸ್‌ಎನ್ ಮಾದರಿ ಸಂಘವಾಗಲಿ ಎಂದು ಹೇಳಿದರು.
ರೈತರಿಗೆ ಅನುಕೂಲ: ಬಿದಲೂರು ವ್ಯವ ಸಾಯ ಸಹಕಾರ ಸಂಘದ ಅಧ್ಯಕ್ಷ ಆನಂದ್ ಮಾತನಾಡಿ, ಸಂಘದ ಸ್ವಂತ ಬಂಡವಾಳದಲ್ಲಿ 15.50 ಲಕ್ಷ ರೂ.ವೆಚ್ಚದಲ್ಲಿ ರಸಗೊಬ್ಬರ ಗೋದಾಮು, ಮಳಿಗೆ ನಿರ್ಮಾಣ ಮಾಡ ಲಾಗಿದೆ. ರೈತರಿಗೆ ಸಹಕಾರ ಸಂಘದಿಂದ ಉತ್ತಮ ಕಾರ್ಯಕ್ರಮ ರೂಪಿಸಲಾಗುತ್ತಿದೆ.
ಸುತ್ತಮುತ್ತಲಿನ ರೈತರಿಗೆ ಇದರಿಂದ ಅನುಕೂಲವಾಗಿದೆ. ಎಲ್ಲರ ಸಹಕಾರ ಪಡೆದು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಜಿಪಂ ಸದಸ್ಯೆ ರಾಧಮ್ಮ, ಗ್ರಾಪಂ ಅಧ್ಯಕ್ಷ ನಾಗೇಗೌಡ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ,
ವಿಎಸ್‌ಎಸ್‌ಎನ್ ಮುಖ್ಯ ಕಾರ್ಯನಿರ್ವಣಾಧಿಕಾರಿ ವೆಂಕಟೇಶ್, ವಿಎಸ್‌ಎಸ್‌ಎನ್ ಉಪಾಧ್ಯಕ್ಷ ತಿಮ್ಮಯ್ಯ, ಸದಸ್ಯರಾದ ಚಿಕ್ಕನಾರಾಯಣಸ್ವಾಮಿ, ಮಹೇಶ್, ನಾಗರಾಜ್, ಯಂಬ್ರಹಳ್ಳಿ ರವಿ, ದಾಕ್ಷಾ ಯಣಮ್ಮ, ನೇತ್ರಾವತಿ, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಎ.ಸಿ.ನಾಗರಾಜ್, ಗ್ರಾಪಂ ಸದಸ್ಯ ಮುನಿರಾಜು, ಮಾಜಿ ಅಧ್ಯಕ್ಷ ಮುನಿ ಶಾಮಪ್ಪ ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಸಸ್ಥರು ಮತ್ತಿತರರು ಹಾಜರಿದ್ದರು.