Advertisement

ಜನಾಂಗೀಯ ತಾರತಮ್ಯಕ್ಕೆ ತುತ್ತಾಗಿದ್ದೇನೆ: ಬ್ರಿಟನ್‌ PM ಸುನಕ್‌

10:44 PM Feb 04, 2024 | Team Udayavani |

ಲಂಡನ್‌: ತಾನೂ ಬಾಲ್ಯದಲ್ಲಿದ್ದಾಗ ಇಂಗ್ಲೆಂಡ್‌ನ‌ಲ್ಲಿ ಜನಾಂಗೀಯ ತಾರತಮ್ಯಕ್ಕೆ ತುತ್ತಾಗಿದ್ದೇನೆ ಎಂದು ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್‌ ಹೇಳಿದ್ದಾರೆ. ಟೀವಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ನಾವು ಚಿಕ್ಕವರಿದ್ದಾಗ ಉಚ್ಚಾರಣೆ ದೋಷವಾಗದಂತೆ ಮಾಡಲು ನಮ್ಮಮ್ಮ ಬಹಳ ಕಾಳಜಿವಹಿಸಿದ್ದರು.

Advertisement

ಅದಕ್ಕಾಗಿ ಹೆಚ್ಚುವರಿ ನಾಟಕ ಪಾಠಗಳಿಗೆ ಕಳುಹಿಸುತ್ತಿದ್ದರು. ನಾವು ಹೊಂದಿಕೊಳ್ಳುವಂತೆ ಮಾಡಲು, ಪ್ರತ್ಯೇಕವೆಂಬಂತೆ ಕಾಣಲು ತಾಯಿ ಪರಿಶ್ರಮವಹಿಸುತ್ತಿದ್ದರು. ತಮ್ಮ ಕಿರಿಯ ಸಹೋದರರತ್ತಲೂ ಚುಚ್ಚುಮಾತುಗಳು ಕೇಳಿ ಬರುತ್ತಿದ್ದವು. ಜನಾಂಗೀಯ ತಾರತಮ್ಯ ನೋವುಂಟು ಮಾಡುತ್ತದೆ, ಇತರೆ ಸಂಗತಿಗಳು ಮಾಡದಷ್ಟು ನೋವನ್ನು ಮಾಡುತ್ತವೆ ಎಂದು ಸುನಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next