Advertisement
ಜತೆಗೆ, ಅವರು ಹಿಂಸೆಗೆ ಪ್ರಚೋದಿಸುವಂಥ ಅಂಶಗಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದೂ ಆರೋಪಿಸಿದೆ. ಈ ರೀತಿ ನಿಯಮ ಉಲ್ಲಂಘಿಸುತ್ತಿರುವವರನ್ನು ಪತ್ತೆಹಚ್ಚುವ ಪ್ರಕ್ರಿಯೆ ನಡೆಯುತ್ತಿದೆ ಎಂದೂ ಹೇಳಿದೆ. ತಮಗೆ ಹೇರಲಾದ ನಿರ್ಬಂಧ ಕುರಿತು ಪ್ರತಿಕ್ರಿಯಿಸಿರುವ ರಾಜಾ ಸಿಂಗ್, ನಾನು ಏಪ್ರಿಲ್ ತಿಂಗಳಿಂದಲೂ ಫೇಸ್‌ಬುಕ್ ಬಳಸುತ್ತಿಲ್ಲ ಎಂದಿದ್ದಾರೆ.
ನಮ್ಮ ಸಂಸ್ಥೆಯು ನಿಷ್ಪಕ್ಷವಾಗಿದ್ದು, ಜನರು ಸ್ವತಂತ್ರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂಥ ಅವಕಾಶ ನೀಡುತ್ತಿದ್ದೇವೆ. ನಾವು ದ್ವೇಷ ಹಾಗೂ ಧರ್ಮಾಂಧತೆಯನ್ನು ಒಪ್ಪುವುದಿಲ್ಲ ಎಂದು ಫೇಸ್‌ಬುಕ್ ಸಂಸ್ಥೆ ಗುರುವಾರ ಹೇಳಿದೆ. ತಾರತಮ್ಯಕ್ಕೆ ಸಂಬಂಧಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬರೆದ ಪತ್ರಕ್ಕೆ ಈ ರೀತಿ ಪ್ರತಿಕ್ರಿಯಿಸಿರುವ ಸಂಸ್ಥೆಯು, ನಮ್ಮ ನಿಯಮದ ಪ್ರಕಾರ ಯಾರೇ ಆಗಲೀ, ದ್ವೇಷಪೂರಿತ ಹಾಗೂ ಹಿಂಸೆಗೆ ಪ್ರಚೋದಿಸುವ ಅಂಶಗಳನ್ನು ಅಪ್‌ಲೋಡ್ ಮಾಡಿದರೆ, ಅಂಥವರ ಖಾತೆಗೆ ನಿರ್ಬಂಧ ಹೇರಿದ್ದೇವೆ ಮತ್ತು ಮುಂದೆಯೂ ಹೇರುತ್ತೇವೆ ಎಂದಿದೆ.