Advertisement
ಶಿಲ್ಪಾ (19) ಶವವಾಗಿ ಪತ್ತೆಯಾದ ಯುವತಿ. ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹೊಳೆಹೊನ್ನೂರು ಹೋಬಳಿಯ ಹೊಸಕೊಪ್ಪ ಗ್ರಾಮದ ವಾಸವಿದ್ದ ಈಕೆ ಕಳೆದ ಡಿಸೆಂಬರ್ ನಲ್ಲಿ ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಕಳೆದ ಮಂಗಳವಾರ (22 ಜೂನ್) ರಾತ್ರಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಯುವತಿಯ ದೇಹ ಮನೆಯಲ್ಲಿ ಪತ್ತೆಯಾಗಿದ್ದು, ಆಕೆಯ ಪಾಲಕರು ಇದನ್ನು ಕೊಲೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
Related Articles
Advertisement
ಆದರೆ ಮಂಗಳವಾರ ರಾತ್ರಿ ತಮ್ಮ ಮಗಳ ಕೊಲೆ ನಡೆದಿದೆ ಎಂದು ಯುವತಿಯ ಪಾಲಕ ಸಂತೋಷ್ ಪೀಟರ್ ಸನ್ ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಯು. ನಾಗರಾಜ, ಡಿಎಸ್ ಪಿ ರುದ್ರೇಶ್ ಉಜ್ಜನಕೊಪ್ಪ, ಗ್ರಾಮೀಣ ಪಿಎಸ್ ಐ ಜೆ. ದೊಡ್ಡಪ್ಪ ಭೇಟಿ ನೀಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.