Advertisement

ಕ್ಷಿಪ್ರ ಕಾಂತಿ!

01:08 PM Dec 13, 2017 | |

ರೋಸ್‌ ವಾಟರ್‌ ಹಚ್ಚುವುದರಿಂದ ಮುಖದ ಚರ್ಮ ತಾಜಾತನ ಪಡೆದುಕೊಳ್ಳುತ್ತದೆ. ಹತ್ತಿಯನ್ನು ರೋಸ್‌ವಾಟರ್‌ನಲ್ಲಿ ಅದ್ದಿ, ಮುಖಕ್ಕೆ ಲೇಪಿಸಿ. ಅದರ ಸುವಾಸನೆ ಮನಸ್ಸಿಗೂ ಖುಷಿ ಕೊಡುತ್ತದೆ.

Advertisement

– ವಿಟಮಿನ್‌ ಬಿ ಮತ್ತು ಸಿ ಅಂಶ ಹೇರಳವಾಗಿರುವ ಜೇನುತುಪ್ಪ ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಮುಖಕ್ಕೆ ಜೇನು ಹಚ್ಚಿ 5 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಜೇನಿನ ಜೊತೆಗೆ ಮೊಸರು ಸೇರಿಸಿಯೂ ಹಚ್ಚಬಹುದು. 

– ಸಿಟ್ರಸ್‌ ಅಂಶವಿರುವ (ಲಿಂಬೆ ಹಣ್ಣಿನ) ಫೇಸ್‌ವಾಶ್‌ನಿಂದ ಮುಖ ತೊಳೆದರೆ, ಚರ್ಮದಲ್ಲಿನ ಕಲ್ಮಶವೆಲ್ಲವೂ ದೂರಾಗುತ್ತದೆ. ಚರ್ಮವನ್ನು ಮೃದುಗೊಳಿಸುವ ಗುಣವೂ ಲಿಂಬೆರಸಕ್ಕಿದೆ.

– ಚರ್ಮ ಕಾಂತಿಹೀನವಾಗಿ, ಸುಕ್ಕುಸುಕ್ಕಾಗಿದ್ದರೆ ಪೆಟ್ರೋಲಿಯಂ ಜೆಲ್ಲಿ ಬಳಸಬಹುದು. ಕಣೆÅಪ್ಪೆಯ ಮೇಲೆ, ಕೆನ್ನೆಯ ಚರ್ಮಕ್ಕೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿದರೆ ತಕ್ಷಣದಲ್ಲಿ ಪ್ರಯೋಜನ ಸಿಗುತ್ತದೆ.

– ಮುಖಕ್ಕೆ ಮಸಾಜ್‌ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಬೇರೆಲ್ಲ ಪದಾರ್ಥಗಳಿಗಿಂತ, ಆಲಿವ್‌ ಎಣ್ಣೆ ಮಸಾಜ್‌ ಚರ್ಮಕ್ಕೆ ಒಳ್ಳೆಯದು. ಆಲಿವ್‌ ಎಣ್ಣೆ ಒಳ್ಳೆಯ ಮಾಯಿಶ್ಚರೈಸರ್‌ ಅಷ್ಟೇ ಅಲ್ಲದೆ, ಮುಖದಲ್ಲಿ ರಕ್ತ ಪರಿಚಲನೆಯನ್ನೂ ಸರಾಗವಾಗಿಸುತ್ತದೆ. 

Advertisement

– ಇವತ್ಯಾಕೋ ಮುಖ ಡಲ್‌ ಕಾಣಿಸುತ್ತಿದೆ, ಫೇಶಿಯಲ್‌ ಮಾಡೋಕೂ ಟೈಮಿಲ್ಲ ಅಂತ ಬೇಜಾರಾ? ಹಾಗಾದ್ರೆ, ಕಣೆÅಪ್ಪೆಗೆ ತುಸು ಗಾಢವಾಗಿ ಮಸ್ಕಾರ ಹಚ್ಚಿ. ಆಗ ನಿಮ್ಮ ಕಣ್ಣುಗಳು ಅಗಲವಾಗಿ, ಆಕರ್ಷಕವಾಗಿ ಕಾಣಿಸುತ್ತವೆ. ಮಸ್ಕಾರ ಚಮತ್ಕಾರದಿಂದ ಮುಖ ಬ್ಯೂಟಿಫ‌ುಲ್‌ ಆಗಿ ಕಾಣುತ್ತದೆ.

– ಕಾಫಿ ಹೊಟ್ಟೆಗೆ ಒಳ್ಳೆಯದಲ್ಲ. ಆದರೆ, ಅದು ಚರ್ಮದ ಕಾಂತಿ ಹೆಚ್ಚಿಸುತ್ತದೆ ಎಂಬುದನ್ನು ಒಪ್ಪಲೇಬೇಕು. ಕಾಫಿಪುಡಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಅಂಶ ಚರ್ಮದ ಕಾಂತಿಗೆ ಹಾಗೂ ರಕ್ತ ಪರಿಚಲನೆಗೆ ಸಹಕಾರಿ. ಕಾಫಿ ಸðಬ್‌ನಿಂದ ಮುಖವನ್ನುಜ್ಜಿದರೆ ಸತ್ತ ಚರ್ಮ ಉದುರಿ, ಮುಖ ಫ್ರೆಶ್‌ ಆಗುತ್ತದೆ. 

– ಐಸ್‌ಕ್ಯೂಬ್‌ನಿಂದ ಮುಖ ತೊಳೆದರೆ ಚರ್ಮಕ್ಕೆ ನಿಮಿಷಾರ್ಧದಲ್ಲಿ ಹೊಸ ಲುಕ್‌ ಸಿಗುತ್ತದೆ. ಚರ್ಮದ ರಂಧ್ರಗಳು ಬಿಗಿಯಾಗಿ, ಮುಖಕ್ಕೆ ಹೊಸ ಕಳೆ ಬರುತ್ತದೆ. ಕಾಟನ್‌ ಬಟ್ಟೆಯಲ್ಲಿ ಐಸ್‌ ಕ್ಯೂಬ್‌ ಇಟ್ಟು ಮಸಾಜ್‌ ಮಾಡಿ. 

– ಚರ್ಮಕ್ಕೆ ಸರಿಯಾದ ವ್ಯಾಯಾಮ ನೀಡಿದರೆ, ರಕ್ತ ಪರಿಚಲನೆ ಸರಿಯಾಗಿ ಮುಖದ ಕಾಂತಿ ಹೆಚ್ಚುತ್ತದೆ. ಹಾಂ, ಸೆಲ್ಫಿà ತೆಗೆಯುವಾಗ ಫ‌ನ್ನಿ ಫೇಸ್‌, ಪೌಟ್‌ ಮಾಡ್ತೀರಲ್ಲ ಅದರಿಂದ ಕೂಡ ಚರ್ಮಕ್ಕೆ ವ್ಯಾಯಾಮ ಸಿಗುತ್ತದೆ. ನಗುವುದೂ ಒಂದು ವ್ಯಾಯಾಮ ಅಂತ ಗೊತ್ತಲ್ವ?

– ಚರ್ಮ ಡಲ್‌ ಆಗಿ ಕಾಣಿಸುತ್ತಿದ್ದರೆ, ಆವತ್ತು ಕೂದಲನ್ನು ಕಟ್ಟಬೇಡಿ. ಫ್ರೀ ಹೇರ್‌ ಅಥವಾ ಸಣ್ಣ ಕ್ಲಿಪ್‌ನಿಂದ ಹೇರ್‌ಸ್ಟೈಲ್‌ ಮಾಡಿ. ಆಗ ಗಮನ ಕೂದಲಿನ ಮೇಲಿರುತ್ತದೇ ಹೊರತು, ಯಾರೂ ನಿಮ್ಮ ಕಳಹೀನ ಚರ್ಮವನ್ನು ಗುರುತಿಸುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next