Advertisement

ಕೇರಳದಲ್ಲಿ ಎಡ-ಬಲಗಳ ಮುಖಾಮುಖೀ

08:37 AM Aug 01, 2017 | |

ತಿರುವನಂತಪುರ: ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರಗಳ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಮತ್ತು ರಾಜ್ಯಪಾಲ ನ್ಯಾ| ಪಿ.ಸದಾಶಿವಂಗೆ ವಿವರಣೆ ನೀಡಿದ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರ ಜತೆ ಸಭೆ ನಡೆಸಿದರು. ಆ.6ರಂದು ಹಿಂಸಾತ್ಮಕ ಘಟನೆಗಳ ಬಗ್ಗೆ ಸರ್ವ ಪಕ್ಷಗಳ ಸಭೆ ನಡೆಸುವ  ಕುರಿತು ತೀರ್ಮಾನಿಸಲಾಯಿತು.

Advertisement

ಬಳಿಕ ವಿವರಣೆ ನೀಡಿದ ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕಮ್ಮನಮ್‌ ರಾಜಶೇಖರನ್‌, ರಾಜ್ಯದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಕೊಟ್ಟಾಯಂ, ಕಣ್ಣಾನೂರು ಮತ್ತು ರುವನಂತಪುರ ಗಳಲ್ಲಿಯೂ ಮುಂದಿನ ದಿನಗಳಲ್ಲಿ ಸಭೆ ನಡೆ ಸಲು ತೀರ್ಮಾನಿಸಲಾಗಿದೆ. ಹಿಂಸಾಚಾರ ತ್ಯಜಿಸುವ ಬಗ್ಗೆ ಆಯಾ ಪಕ್ಷಗಳ ನಾಯಕರು ತಮ್ಮ ಕಾರ್ಯಕರ್ತರಿಗೆ ಸೂಚಿಸ ಬೇಕು ಎಂದೂ ಹೇಳಿದ್ದಾರೆ. ಕೇರಳದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿಲ್ಲಿ ಸರಕಾರ ಕೈಗೊಳ್ಳುವ ಕ್ರಮಗಳಿಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಕಮ್ಮನಮ್‌ ಹೇಳಿದ್ದಾರೆ. ಸಭೆಯಲ್ಲಿ ಮಾತನಾಡಿದ್ದ ಸಿಎಂ ಪಿಣರಾಯಿ ವಿಜಯನ್‌, ತಿರುವನಂತಪುರದಲ್ಲಿ ಬಿಜೆಪಿ ಕೇಂದ್ರ ಕಚೇರಿ ಮತ್ತು ಮಾಜಿ ಸಚಿವ ಕೊಡಿಯೆರಿ ಬಾಲಕೃಷ್ಣನ್‌ ನಿವಾಸಗಳ ಮೇಲೆ ದಾಳಿ ನಡೆದದ್ದು ಸರಿಯಾದ ಕ್ರಮ ಅಲ್ಲ ಎಂದರು. 

ಪೆಟ್ರೋಲ್‌ ಬಾಂಬ್‌ ದಾಳಿ: ಸಭೆಗೂ ಮುನ್ನ ಕೋಟ್ಟಯಂ ಜಿಲ್ಲೆಯಲ್ಲಿ ಸಿಪಿಎಂ ಜಿಲ್ಲಾ ಕೇಂದ್ರ ಕಚೇರಿಯತ್ತ ಕಿಡಿಗೇಡಿಗಳು ಕಲ್ಲೆಸೆದ ಘಟನೆ ನಡೆದಿದೆ. ಅದಕ್ಕೆ ಪ್ರತಿಯಾಗಿ ಆರ್‌ಎಸ್‌ಎಸ್‌ ಕಚೇರಿ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆಯಲಾಗಿದೆ.  

36 ಗಂಟೆಗಳಲ್ಲಿ ಬಂಧಿಸಿದ್ದಕ್ಕೆ ನಗದು ಬಹುಮಾನ
ಆರೆಸ್ಸೆಸ್‌ ಕಾರ್ಯಕರ್ತನ ಹತ್ಯೆ ನಡೆದ 36 ಗಂಟೆಗಳ ಒಳಗೆ ಎಲ್ಲ ಆರೋಪಿಗಳನ್ನೂ ಬಂಧಿಸಿದ ಪೊಲೀಸರ ತಂಡವನ್ನು ರಾಜ್ಯ ಪೊಲೀಸ್‌ ಮುಖ್ಯಸ್ಥ ಲೋಕನಾಥ್‌ ಬೆಹರಾ ಅವರು ಶ್ಲಾ ಸಿದ್ದು, ತಂಡದಲ್ಲಿದ್ದ ಎಲ್ಲ ಪೊಲೀಸ್‌ ಸಿಬ್ಬಂದಿಗೂ ನಗದು ಬಹುಮಾನ ಮತ್ತು ವಿಶೇಷ ಮೆಚ್ಚುಗೆ ಫ‌ಲಕಗಳನ್ನು ನೀಡಿ ಗೌರವಿಸಿದ್ದಾರೆ. ಹತ್ಯೆ ನಡೆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ತಂಡವು ಎಲ್ಲ ಆರೋಪಿಗಳನ್ನು ಬಂಧಿಸಿದ್ದಲ್ಲದೆ, ಹತ್ಯೆಗೆ ಬಳಸಲಾದ ಶಸ್ತ್ರಾಸ್ತ್ರಗಳು ಮತ್ತು ವಾಹನವನ್ನು ವಶಪಡಿಸಿಕೊಂಡಿತ್ತು.

ಹೊರಗೆ ನಡೆಯಿರಿ: ಮಾಧ್ಯಮಗಳಿಗೆ ಸಿಎಂ ತಾಕೀತು
ಖಾಸಗಿ ಹೋಟೆಲ್‌ ಒಂದರಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆ ನಡೆಯುವ ಹಾಲ್‌ನಲ್ಲಿ ಹಲವು ಟಿವಿ ವಾಹಿನಿಗಳ ವರದಿಗಾ ರರು, ಕೆಮರಾಮನ್‌ಗಳು ಚಿತ್ರೀಕರಣ ನಡೆಸು ತ್ತಿದ್ದರು. ಅದೇ ವೇಳೆಗೆ ಮುಖ್ಯಮಂತ್ರಿ ಆಗಮಿಸಿದರು. ಹಾಲ್‌ನಲ್ಲಿ ಮಾಧ್ಯಮ ದವರು ಕಿಕ್ಕಿರಿದು ತುಂಬಿದ್ದರಿಂದ ಮೊದಲಿಗೆ ಸಿಎಂ ವಿಜಯನ್‌ ಹೊಟೇಲ್‌ ಮ್ಯಾನೇಜರ್‌ ವಿರುದ್ಧ ಸಿಡಿಮಿಡಿ ಗೊಂಡರು. ಬಳಿಕ ಮುಂದೆ ಬಂದ ವಿಜಯನ್‌, ಹಾಲ್‌ನ ಬಾಗಿಲಿನಲ್ಲಿ ನಿಂತು “ಕಡಕ್‌ ಪೊರತ್ತ್’ (ಹೊರಗೆ ನಡೆಯಿರಿ) ಎಂದು ಕೋಪ ಭರಿತರಾಗಿಯೇ ಹೇಳಿದರು. ಅಲ್ಲಿದ್ದ ಪ್ರತಿಯೊಬ್ಬರೂ ಹೊರಕ್ಕೆ ಬಂದ ಬಳಿಕವಷ್ಟೇ ಅವರು ಒಳ ಪ್ರವೇಶಿಸಿದರು. ಬಳಿಕ ಸಿಎಂ ಕಚೇರಿ ಸ್ಪಷ್ಟನೆ ನೀಡಿದ್ದು ಸಭೆಗೆ ಮಾಧ್ಯಮಗಳಿಗೆ ಆಹ್ವಾನವನ್ನೇ ನೀಡಲಾಗಿರಲಿಲ್ಲ. ಮುಖ್ಯ ಮಂತ್ರಿ ಮತ್ತು ಇತರರು ಹೊರಗಿದ್ದು, ಮಾಧ್ಯಮ ದವರು ಹಾಲ್‌ನಲ್ಲಿ ಇದ್ದುದರಿಂದ ಪಿಣರಾಯಿ ಮಾಧ್ಯಮ ದವರನ್ನು ಹೊರಗೆ ಹೋಗಲು ಹೇಳಿದ್ದಾರೆ ಎಂದು ಹೇಳಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next