Advertisement

2030ರಲ್ಲಿ ಚಂದ್ರನಿಂದ ವಿದ್ಯುತ್‌! ಯೋಜನೆಗೆ ಮುಂದಾಗಿದೆ ಇಸ್ರೋ

03:45 AM Feb 20, 2017 | Team Udayavani |

ನವದೆಹಲಿ: 104 ರಾಕೆಟುಗಳನ್ನು ಏಕಕಾಲಕ್ಕೆ ನಭಕ್ಕೆ ಚಿಮ್ಮಿಸಿದ ಇಸ್ರೋ ಈಗ ಕರೆಂಟಿಗೆ ಕೈಹಾಕಿದೆ! ಪವರ್‌ ಕಟ್‌ ಸಮಸ್ಯೆ, ನಿರಂತರ ವಿದ್ಯುತ್‌ ಅಭಾವದ ದಿನಗಳಲ್ಲಿ ಇಸ್ರೋ ಸಿಹಿಸುದ್ದಿ ಕೊಟ್ಟಿದೆ. 2030ರ ವೇಳೆಗೆ ಚಂದ್ರನಿಂದಲೇ ಇಂಧನವನ್ನು ಪೂರೈಸಿ, ಇಡೀ ಭಾರತವನ್ನು ಇಸ್ರೋ ಬೆಳಗಿಸಲಿದೆ!

Advertisement

ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದು ಭಾರತೀಯ ಬಾಹ್ಯಾಕಾಶ ವಿಜ್ಞಾನಿ, ಪ್ರೊ. ಶಿವತನು ಪಿಳ್ಳೆ„. “ಚಂದ್ರನ ಮೇಲ್ಮೆ„ನಲ್ಲಿರುವ ಧೂಳಿನಲ್ಲಿ ಹೀಲಿಯಂ-3 ಅಪಾರ ಪ್ರಮಾಣದಲ್ಲಿದೆ. ಇದರ ಸದ್ಬಳಕೆಯಿಂದ ವಿದ್ಯುತ್‌ ಸೇರಿದಂತೆ ಭಾರತದ ಎಲ್ಲ ರೀತಿಯ ಇಂಧನ ಕೊರತೆಗಳನ್ನೂ ನೀಗಿಸಿಕೊಳ್ಳಬಹುದು. ಹೀಲಿಯಂ-3 ಅನ್ನು ಜನಬಳಕೆಯ ಇಂಧನವಾಗಿಸುವ ಯೋಜನೆಯಲ್ಲಿ ಇಸ್ರೋ ಈಗಾಗಲೇ ಕಾರ್ಯಪ್ರವೃತ್ತವಾಗಿದೆ’ ಎಂದು ಹೇಳಿದ್ದಾರೆ. ಅಬ್ಸಧಿರ್ವರ್‌ ರೀಸರ್ಚ್‌ ಫೌಂಡೇಶನ್‌ ಏರ್ಪಡಿಸಿದ್ದ ಸಮಾರಂಭದಲ್ಲಿ ಪಿಳ್ಳೆ„ಇದನ್ನು ಬಹಿರಂಗಪಡಿಸಿದ್ದಾರೆ.

“ಹೀಲಿಯಂ- 3 ಯನ್ನು ಯೋಗ್ಯ ಕೆಲಸಗಳಿಗೆ ಪರಿವರ್ತಿಸುವ ಕೆಲಸಕ್ಕೆ ಜಗತ್ತಿನ ಇತರೆ ದೇಶಗಳೂ ಮುಂದಾಗಿವೆ. ಚಂದ್ರನಲ್ಲಿ ಲಭ್ಯವಿರುವ ಹೀಲಿಯಂ- 3ಗೆ ಇಡೀ ವಿಶ್ವಕ್ಕೆ ಇಂಧನ ಪೂರೈಸಬಲ್ಲುದು. ಅತಿ ಕಡಿಮೆ ಬೆಲೆಯಲ್ಲಿ ಇಂಧನ ಉತ್ಪಾದಿಸಿ, ವಾಹನಗಳಿಗೂ ಮರುಬಳಕೆ ಆಗುವಂತೆ ಇದನ್ನು ಪರಿವರ್ತಿಸಬಹುದು’ ಎಂದಿದ್ದಾರೆ.

ಏನಿದು ಹೀಲಿಯಂ 3?
ವಿಕಿರಣ ರಹಿತ ಹೀಲಿಯಂ ಕಣದೊಂದಿಗೆ ಪ್ರೊಟಾನ್‌ನ 2 ಕಣ, ನ್ಯೂಟ್ರಾನ್‌ನ 1 ಕಣ ಸೇರಿ ಹೀಲಿಯಂ 3 ಆಗಿದೆ. ಚಂದ್ರನ ಶಿಲೆಗಳಲ್ಲಿ, ಮಣ್ಣಿನಲ್ಲಿ ಹೀಲಿಯಂ 3 ಇದ್ದು, ಸೌರಗಾಳಿಯಿಂದ ಉತ್ಪಾದನೆ ಆಗುತ್ತದೆ. ಗಣಿಗಾರಿಕೆ ಮೂಲಕ ಇದನ್ನು ಹೊರತೆಗೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next