Advertisement
“ಕರಾಲಿ’ ಎಂದರೇನು ಎಂದು ಗೊತ್ತಿಲ್ಲದವರು ಕೇಳುವಂತವರಾಗಿ. “ಕರಾಲಿ’ ಎಂದರೆ ಕಾಳಿ ಮಾತೆಯ ಉಗ್ರ ರೂಪವಂತೆ. ಕಾಳಿ ಮಾತೆಯೇ ಉಗ್ರ ರೂಪದಲ್ಲಿರುವಾಗ, ಕಾಳಿ ಮಾತೆಯ ಉಗ್ರ ರೂಪ ಎಂದರೆ ಹೇಗಿರಬಹುದು ಎಂದು ಯೋಚಿಸಿ. ಹೇಗಿರಬಹುದು ಎಂದು ಹೇಳುವುದಿಲ್ಲ ದಕ್ಷಿಣಾ ಮೂರ್ತಿ. “ನಮ್ಮ ಚಿತ್ರದಲ್ಲಿ ಯಾರು ಕರಾಲಿಯಾಗುತ್ತಾರೆ ಎಂದು ಸಿನಿಮಾದಲ್ಲಿ ನೋಡಿರಿ.ಇಲ್ಲಿ ಗೊಂಬೆ ಮುಖ್ಯ ಪಾತ್ರ ವಹಿಸುತ್ತದೆ. ಹಾಗಂತ ಇದು ದೆವ್ವದ ಸಿನಿಮಾ ಅಲ್ಲ. ದೆವ್ವದ ತರಹದ ಸಿನಿಮಾ. ಒಂದು ಸಸ್ಪೆನ್ಸ್ ಥ್ರಿಲ್ಲರ್ ಎನ್ನಬಹುದು. ಆತ್ಮ ಮತ್ತು ಪರಮಾತ್ಮದ ನಡುವಿನ ವ್ಯತ್ಯಾಸವನ್ನು ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇವೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಬೆಂಗಳೂರು, ಸಾವನದುರ್ಗ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಸದ್ಯದಲ್ಲೇ
ಸೆನ್ಸಾರ್ ಮಾಡಿಸಿ, ಏಪ್ರಿಲ್ ಹೊತ್ತಿಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ಅವರು.
ದ್ವೇಷದ ಕಥೆಯಿಲ್ಲ. ಗೊಂಬೆ ಸೇಡು ತೀರಿಸಿಕೊಳ್ಳುವುದಿಲ್ಲ. ನಿಜ ಹೇಳಬೇಕೆಂದರೆ, ಗೊಂಬೆ ಪ್ರೀತಿಯನ್ನು ಕಾಯುತ್ತದೆ. ಇಡೀ ಚಿತ್ರದಲ್ಲಿ ಗೊಂಬೆ ಏನೋ ಮಾಡುತ್ತಿದೆ ಅನಿಸಬಹುದು. ಕೊನೆಯಲ್ಲಿ ಇನ್ನಾರೋ ಮಾಡಿದ್ದು ಗೊತ್ತಾಗುತ್ತದೆ. ಸಾಮಾನ್ಯವಾಗಿ
ಆತ್ಮವನ್ನು ಕೆಟ್ಟದಾಗಿ ತೋರಿಸಲಾಗುತ್ತದೆ. ಇಲ್ಲಿ ಬೇರೆ ರೀತಿ ಇದೆ. ಇದು ಒಳ್ಳೆಯ ಆತ್ಮ ಮತ್ತು ಕೆಟ್ಟ ಮನುಷ್ಯನ ಕಥೆ’ ಎನ್ನುತ್ತಾರೆ ದಕ್ಷಿಣಾಮೂರ್ತಿ. ಈ ಚಿತ್ರವನ್ನು ಅವರ ಸ್ನೇಹಿತರೆಲ್ಲಾ ಸೇರಿ, ವೇದಾಂತ್ ಪ್ರೊಡಕ್ಷನ್ಸ್‌ನಡಿ ನಿರ್ಮಿಸುತ್ತಿದ್ದಾರೆ. ಇದೊಂಥರಾ
ಕ್ರೌಡ್ ಫಂಡಿಂಗ್ ಸಿನಿಮಾ ಎಂದರೆ ತಪ್ಪಿಲ್ಲ. ಆದರೆ, ಸಂಖ್ಯೆ ಕಡಿಮೆ ಇರುತ್ತದೆ. ನ್ನು ಚಿತ್ರದಲ್ಲಿ ಸಾಹಿಲ್ ರೇ ಮತ್ತು ವಿಕಾಸ್ ದೇಶಮುಖ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಪವನ್ ಕರ್ಕೇರಾ ಅವರ ಛಾಯಾಗ್ರಹಣ ಮಾಡಿದರೆ, ಆರ್ಯಮಾನ್
ಎನ್ನುವವರು ಸಂಗೀತ ಸಂಯೋಜಿಸಿದ್ದಾರೆ.