Advertisement
ಶನಿವಾರ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ನೂತನ ಜವಳಿ ನೀತಿಯಡಿ 2ದಿನಗಳ ಕಾಲ ಮಹಿಳಾ ಉದ್ಯಮಿಗಳಿಗಾಗಿ ಏರ್ಪಡಿಸಿದ್ದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಜವಳಿ ಉದ್ಯಮದಬೆಳವಣಿಗೆಗೆ ವಿಫುಲ ಅವಕಾಶಗಳಿದ್ದು, ಆಸಕ್ತರು ಈ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸುಸಂದರ್ಭ ಇದಾಗಿದೆ. ಈ ಜವಳಿ ಉದ್ಯಮ ಅನೇಕ ಸವಾಲುಗಳ ನಡುವೆಯು ಲಾಭದಾಯಕವಾಗಿ ಮುನ್ನಡೆದಿದೆ.
Related Articles
ರೂ.25 ಲಕ್ಷದಿಂದ 5.00 ಕೋಟಿ ರೂ. ಗಳವರೆಗೆ ಬಂಡವಾಳ ತೊಡಗಿಸುವ ಉದ್ಯಮಿಗಳಿಗೆ ಶೇ.90ರಷ್ಟು ಸಹಾಯಧನ ನೀಡಲಾಗುವುದು ಎಂದರು.
Advertisement
ತರಬೇತಿಯಲ್ಲಿ ಜವಳಿ ಉದ್ಯಮ ಕ್ಷೇತ್ರದಲ್ಲಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳು, ತರಬೇತಿ, ಯೋಜನೆಗಳ ಮಾಹಿತಿ ನೀಡಲಾಗುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಅಸಂಖ್ಯಾತ ಮಹಿಳೆಯರು ಇದ್ದರು. ಇಲಾಖೆಯ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಯೋಜನೆಗಳ ಮಾಹಿತಿ ನೀಡಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ವ್ಯವಸ್ಥಾಪಕ ಸೋಲೋಮನ್ ಮೆನೇಜಸ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಶಿವಪ್ರಸಾದ್, ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎಂ.ಎ. ರಮೇಶ್ ಹೆಗ್ಡೆ, ರಾಜ್ಯ ಹಣಕಾಸು ಸಂಸ್ಥೆಯ ಅಧಿಕಾರಿ ಲಿಂಗಪ್ಪ, ಎಸ್. ವಿಶ್ವೇಶ್ವರಯ್ಯ, ಕಾಸಿಯಾ ಜವುಳಿ ಫ್ಯಾನಲ್ ಚೇರನ್ ಜಯೇಶ್ ಭಟಾವಿಯ, ಗ್ರಾಮೀಣ ಜಂಟಿ ಕಾರ್ಯದರ್ಶಿಎಸ್. ವಿಶ್ವೇಶ್ವರಯ್ಯ ಮತ್ತಿತರರು ಇದ್ದರು.