Advertisement

ಅಸಾಧಾರಣ ಪ್ರತಿಭೆಯ ಚೆಸ್‌ ಪಟು-ಸಮರ್ಥ್ 

12:29 PM Mar 23, 2017 | Team Udayavani |

ಉಡುಪಿ: ಸೆರೆಬ್ರಲ್‌ ಪಾಲ್ಸಿ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದರೂ ಅದನ್ನು ಲೆಕ್ಕಿಸದೆ ಸಾಮಾನ್ಯರಿಗಿಂತ ತಾನೇನೂ ಕಡಿಮೆ ಇಲ್ಲ ಎನ್ನುವಂತೆ ಸಾಮಾನ್ಯ ಚೆಸ್‌ ಕ್ರೀಡಾಳುಗಳ ವಿರುದ್ಧವೇ ಸ್ಪರ್ಧಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡ ಸಾಧಕ ಸಮರ್ಥ್ ಜೆ. ರಾವ್‌. ಹುಟ್ಟೂರು ಕುಂದಾಪುರದ ಬಸ್ರೂರು. ಸದ್ಯ ತಂದೆಯೊಂದಿಗೆ ಹೊನ್ನಾವರ ದಲ್ಲಿ ವಾಸವಾಗಿದ್ದಾರೆ. 

Advertisement

ಹೊನ್ನಾವರದ ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿ ಜಗದೀಶ್‌ ರಾವ್‌-ವಿನುತಾ ದಂಪತಿ ಪುತ್ರನಾಗಿರುವ ಸಮರ್ಥ್ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. 

ಸಾಧನೆಗೆ ಅಡ್ಡಿಯಾಗದ ದೈಹಿಕ ನ್ಯೂನತೆ
ಸಮರ್ಥ್ ಚಿಕ್ಕಂದಿನಿಂದಲೇ ಈ ಕಾಯಿಲೆ ಯಿಂದ ಬಳಲುತ್ತಿದ್ದರೂ ಅಂಗವೈಕಲ್ಯ ಇರು ವುದು ದೇಹಕ್ಕೆ ಮಾತ್ರ, ನನ್ನ ಮನಸ್ಸಿಗಲ್ಲ ಎನ್ನುವ ಮೂಲಕ ತನ್ನ ಸಾಧನೆಗೆ ದೈಹಿಕ ನ್ಯೂನತೆ ಯಾವುದೇ ರೀತಿಯ ಅಡ್ಡಿಯಾಗಿಲ್ಲ ಅನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಅಂತಾ ರಾಷ್ಟ್ರೀಯ ಟೂರ್ನಿಯಲ್ಲಿ  ಸ್ಪರ್ಧಿಸಿ ಬೆಳ್ಳಿ, ಕಂಚಿನ ಪದಕ ಗೆದ್ದ ಹೆಗ್ಗಳಿಕೆ ಸಮರ್ಥ್ ಅವರದು. 2013ರಿಂದ ಚೆಸ್‌ ಕ್ರೀಡೆ ಅಭ್ಯಸಿಸು ತ್ತಿದ್ದು, 2015ರಿಂದ ಒಂದರ ಮೇಲೊಂದು ಸಾಧನೆಗಳನ್ನು ಮಾಡುತ್ತಿದ್ದಾರೆ. 

ಸರಕಾರದಿಂದ ಸಹಾಯ ಸಿಕ್ಕಿಲ್ಲ
ಅಂಗವೈಕಲ್ಯವಿದ್ದರೂ ಸಾಮಾನ್ಯರಂತೆ ಹೋರಾಡಿ ಇಷ್ಟೆಲ್ಲ ಸಾಧನೆ ಮಾಡಿದರೂ ಸರ ಕಾರ ಮಾತ್ರ ಈವರೆಗೆ ಯಾವುದೇ ಮನ್ನಣೆ, ನೆರವು ನೀಡದಿರುವುದು ಮಾತ್ರ ವಿಪರ್ಯಾಸ. ಎರಡು ವರ್ಷಗಳ ಹಿಂದೆ ಸುಮಾರು 77,742 ರೂ. ಅನುದಾನ ಮಂಜೂರು ಮಾಡಿದರೂ ಅದಿನ್ನೂ ನಮ್ಮ ಕೈಸೇರಿಲ್ಲ. ಕೇಳಿದರೆ ಕ್ರೀಡಾ ಪ್ರಾಧಿಕಾರದಲ್ಲಿ ಹಣ ಇಲ್ಲ. ಬಂದಾಗ ಕೊಡು ತ್ತೇವೆ ಎನ್ನುತ್ತಾರೆ. ಈ ಬಗ್ಗೆ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರಿಗೂ ಮನವಿ ನೀಡಿದ್ದೇವೆ. ಇನ್ನೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಜಗದೀಶ್‌.

ಬೇಕಿದೆ ಆರ್ಥಿಕ ನೆರವು
ಸಮರ್ಥ್ ಅವರ ತಂದೆ ಜಗದೀಶ್‌ ರಾವ್‌ ಅವರು ಹೊನ್ನಾವರದ ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿಯಾಗಿದ್ದು, ಅಂಗವೈಕಲ್ಯವಿದ್ದರೂ ಮಗನನ್ನು ಉತ್ತಮ ಕ್ರೀಡಾಪಟುವಾಗಿ ರೂಪಿಸ ಬೇಕು ಎನ್ನುವ ಹಂಬಲದೊಂದಿಗೆ ಮುಂದಡಿ ಯಿಡುತ್ತಿದ್ದಾರೆ. ದೇಶ, ವಿದೇಶದಲ್ಲಿ ಬೇರೆ ಬೇರೆ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಸಮರ್ಥ್ ಅವರನ್ನು ಕರೆದುಕೊಂಡು ಹೋಗಬೇಕಾಗಿರು ವುದರಿಂದ ತುಂಬಾ ಹಣ ಬೇಕಾಗುತ್ತದೆ. ಅದಕ್ಕಾಗಿ ಯಾರಾದರೂ ನೆರವು ನೀಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಜಗದೀಶ್‌.

Advertisement

ಕಳೆದೆರಡು ವರ್ಷ ಸಿಂಡಿಕೇಟ್‌ ಬ್ಯಾಂಕಿ ನಿಂದ ತಲಾ ಒಂದು ಲಕ್ಷ ರೂ. ಲಯನ್ಸ್‌  ನೆರವಿ ನಿಂದ ಟ್ಯಾಪ್ಮಿಯವರು ಒಂದು ಲಕ್ಷ ರೂ. ನೀಡಿರುತ್ತಾರೆ. ಮುಂದಿನ ಮೇ ತಿಂಗಳಲ್ಲಿ ಸ್ಲೋವಾಕಿಯಾದಲ್ಲಿ ಅಂತಾರಾಷ್ಟ್ರೀಯ ಟೂರ್ನಿ ಹಾಗೂ ಜೂನ್‌ನಲ್ಲಿ ಫ್ಲೋರಿಡಾದಲ್ಲಿ ನಡೆಯುವ ಟೂರ್ನಿಯಲ್ಲಿ ಭಾಗವಹಿಸಲು ಸುಮಾರು 5ರಿಂದ 6 ಲ. ರೂ. ಖರ್ಚಾಗುತ್ತದೆ. ಈ ಬಾರಿ ಅದಾನಿ ಗ್ರೂಪಿನ ಕಿಶೋರ್‌ ಆಳ್ವ ಅವರ ಬಳಿ ಮಾತನಾಡಿದ್ದು, ನೆರವು ನೀಡುವ ಭರವಸೆ ಇದೆ ಎಂದು ಜಗದೀಶ್‌ ಹೇಳಿದರು.

ಸಮರ್ಥ್ ಸಾಧನೆಗಳು
– 2015ರಲ್ಲಿ  ಸ್ಲೋವಾಕಿಯಾದಲ್ಲಿ ನಡೆದ ವಿಶ್ವಮಟ್ಟದ ದೈಹಿಕ ಅಸಮ ರ್ಥರ ಟೂರ್ನಿಯಲ್ಲಿ ಕಂಚಿನ ಪದಕ.
– 2015ರಲ್ಲಿ ಚಿತ್ರದುರ್ಗದಲ್ಲಿ ನಡೆದ ಸಾಮಾನ್ಯರೊಂದಿಗಿನ ರಾಜ್ಯ ಮಟ್ಟದ ರ್ಯಾಪಿಡ್‌ ಚೆಸ್‌ನಲ್ಲಿ ಚಾಂಪಿಯನ್‌.
– 2016ರಲ್ಲಿ ಸರ್ಬಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಅಸಮರ್ಥರ ಚೆಸ್‌ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗ ದಲ್ಲಿ ಕಂಚಿನ ಪದಕ.
– ಇದುವರೆಗೂ ಒಟ್ಟು 50ಕ್ಕೂ ಅಧಿಕ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಅದ ರಲ್ಲಿ ಕೇವಲ 3 ಮಾತ್ರ ದೈಹಿಕ ನ್ಯೂನತೆ ಇರುವ ಸ್ಪರ್ಧಿಗಳ ಜತೆ ನಡೆದ ಟೂರ್ನಿಯಾದರೆ ಮಿಕ್ಕುಳಿದ ಎಲ್ಲವೂ ಸಾಮಾನ್ಯ ಸ್ಪರ್ಧಾಳುಗಳ ಜತೆಯೇ ಕಾದಾಟ ನಡೆಸಿರುವ ಹೆಗ್ಗಳಿಕೆ.
– ಸಮರ್ಥ್ ಅವರು ಅಂತಾ ರಾಷ್ಟ್ರೀಯ ಚೆಸ್‌ ಪಾಯಿಂಟ್‌ನಲ್ಲಿ ಆರಂಭದಲ್ಲಿ 1,146 ಇದ್ದರೆ ಈಗ 1,406 ಅಂಕ ಹೊಂದಿದ್ದಾರೆ (ವಿಶ್ವ ನಾಥ್‌ ಆನಂದ್‌ ಅವರ ಚೆಸ್‌ ಪಾಯಿಂಟ್‌ ಸದ್ಯ 2,800)

ಮಗನ ಸಾಧನೆ ಬಗ್ಗೆ ಹೆಮ್ಮೆ 
ಎಲ್ಲ ಕಡೆಯೂ ನನ್ನನ್ನು  ಸಮರ್ಥ್ ತಂದೆ ಎಂದು ಗುರುತಿಸುತ್ತಿದ್ದಾರೆ. ಆ ಬಗ್ಗೆ ಹೆಮ್ಮೆಯಾಗುತ್ತಿದೆ. ಅವನಿಂದ ಎಷ್ಟೋ ದೊಡ್ಡ ದೊಡ್ಡ ವ್ಯಕ್ತಿಗಳ ಸಂಪರ್ಕ ಸಾಧ್ಯವಾಗಿದೆ. ಅದಲ್ಲದೆ ವಿದೇಶಗಳಿಗೂ ಹೋಗುವ ಅವಕಾಶ ಅವನಿಂದ ಲಭಿಸಿದೆ. ಅವನನ್ನು ಮಗನಾಗಿ ಪಡೆದದ್ದು ನಿಜಕ್ಕೂ ಅದೃಷ್ಟ. 
– ಜಗದೀಶ್‌ ರಾವ್‌, ತಂದೆ

– ಪ್ರಶಾಂತ್ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next