ಚನ್ನರಾಯಪಟ್ಟಣ:ಸರ್ಕಾರ 3ಕೋಟಿರೂ.ಮಂಜೂರು ಮಾಡಿದ್ದು, ಪೊಲೀಸ್ ವಸತಿ ನಿಲಯ ನಿರ್ಮಾಣಕ್ಕೆಇದನ್ನು ವಿನಿಯೋಗ ಮಾಡಲಾಗುವುದು ಎಂದು ಜಿಲ್ಲಾ ಮಂತ್ರಿಕೆ.ಗೋಪಾಲಯ್ಯಭರವಸೆ ನೀಡಿದರು.
ಪಟ್ಟಣದ ಪೊಲೀಸ್ ವಸತಿ ನಿಲಯ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಈಗಾಗಲೇ 60 ಪೊಲೀಸ್ ಕುಟುಂಬಗಳಿಗೆ ಅಗತ್ಯ ಇರುವಷ್ಟು ವಸತಿ ಸಮುಚ್ಚಯ ನಿರ್ಮಾಣ ಮಾಡಿದ್ದು, ಹಿರೀಸಾವೆ ಹೋಬಳಿ ಕೇಂದ್ರದಲ್ಲಿ 24 ಹಾಗೂ ಪಟ್ಟಣದಲ್ಲಿ 36 ವಸತಿ ಗೃಹವನ್ನು ನಿರ್ಮಾಣ ಮಾಡಲಾಗಿದೆ. ಇವುಗಳಿಗೆ ಅಗತ್ಯ ಇರುವ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಹೇಳಿದರು.
ಹಿರೀಸಾವೆಯಲ್ಲಿ ಮೂರು ಕೋಟಿ ರೂ. ವೆಚ್ಚ ಮಾಡಿದ್ದು, ಪಟ್ಟಣದಲ್ಲಿ ನಾಲ್ಕು ಕೋಟಿ ರೂ. ವೆಚ್ಚ ಮಾಡಿ ಪೊಲೀಸ್ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಮಾಡಲಾಗಿದೆ. ಮೂರು ಕೋಟಿ ರೂ.ನಲ್ಲಿ ಹೆಚ್ಚುವರಿಯಾಗಿ ಸುಸಜ್ಜಿತ ವಸತಿ ಗೃಹ ನಿರ್ಮಾಣಕ್ಕೆ ಸರ್ಕಾರ ಮುಂದಾಗುತ್ತಿದೆ. ಇದರಿಂದ ಪೊಲೀಸ್ ಇಲಾಖೆಯ ವಸತಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಪೊಲೀಸರ ಒತ್ತಡ ಕಡಿಮೆ ಮಾಡಿ: ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಪೊಲೀಸರು ಒತ್ತಡದಲ್ಲಿ ಸೇವೆ ಸಲ್ಲಿಸುವಂತಾಗಿದೆ. ಇದರಿಂದ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರಲಿದೆ, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆದು ಒತ್ತಡ ಕಡಿಮೆ ಮಾಡಿಕೊಳ್ಳಬೇಕಾಗಿದೆ, ಅಪರಾಧ ಕೃತ್ಯಗಳು ಹೆಚ್ಚದಂತೆ ಸೇವೆ ನೀಡುವುದು ನಿಮ್ಮಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಪುರಸಭೆಅಧ್ಯಕ್ಷನವೀನ್,ಉಪಾಧ್ಯಕ್ಷಯೋಗೇಶ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಎಎಸ್‌ಪಿ ನಂದಿನಿ, ಡಿವೈಎಸ್‌ಪಿ ಲಕ್ಷ್ಮಣೇಗೌಡ, ಸಿಪಿಐ ಕುಮಾರ್, ನಗರ ಠಾಣೆ ಪಿಎಸ್‌ಐ ವಿನೋದರಾಜ್, ಅರ್ಚಕ ಸಂಘದ ಅಧ್ಯಕ್ಷ ಶ್ರೀಧರಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.