Advertisement

ಕೆಲಸದ ಅವಧಿ ಹೆಚ್ಚಳ: ಮಸೂದೆಗೆ ವಿರೋಧ

10:29 PM Feb 24, 2023 | Team Udayavani |

ಬೆಂಗಳೂರು: ಕಾರ್ಖಾನೆಗಳಲ್ಲಿ ಕೆಲಸ ಅವಧಿಯನ್ನು ಹೆಚ್ಚಿಸುತ್ತಿರುವುದು ಅತ್ಯಂತ ಅಮಾನವೀಯ, ಅಮಾನುಷವಾಗಿದ್ದು, ಯಾವುದೇ ನಾಗರಿಕ ಸರಕಾರದಲ್ಲಿ ಒಪ್ಪುವಂತಹದ್ದಲ್ಲ. ಆಡಳಿತ ಪಕ್ಷದ ಸದಸ್ಯನಾಗಿ ಇದನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆಂದು ಹೇಳಿ ಬಿಜೆಪಿಯ ಆಯನೂರು ಮಂಜುನಾಥ್‌ ಸಭಾತ್ಯಾಗ ಮಾಡಿದ್ದು ಆಡಳಿತ ಪಕ್ಷಕ್ಕೆ ಮುಜುಗರ ತಂದಿತು.

Advertisement

ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸುವ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ಮಾಡಿಕೊಡುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ-2023ನ್ನು ವಿರೋಧಿಸಿ ಮಾತನಾಡಿದ ಆವರು, ಬಿಜೆಪಿ ಯಾವತ್ತೂ ಬಡವರ, ಕಾರ್ಮಿಕರ ಪರ. ಮಧ್ಯಮ ವರ್ಗದ ಶ್ರಮಜೀವಿ ಮೋದಿ ಪ್ರಧಾನಿ ಆಗಿ ಭಾರತ ಇಂದು ವಿಶ್ವಭಾರತ ಎನಿಸಿಕೊಂಡಿದೆ. ಹೀಗಿದ್ದಾಗ ಇಂತಹ ಕಾಯ್ದೆಗಳಿಂದ ಬಡವರ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳು ಅವರ ಕಾಲದಲ್ಲಿ ಬರಬಾರದು ಎಂದೂ ಎಚ್ಚರಿಕೆಯ ಮಾತುಗಳನ್ನು ಆಡಿದರು.

ಬಿಜೆಪಿಯ ತೇಜಸ್ವಿನಿ ಗೌಡ, ಶಶೀಲ್‌ ನಮೋಶಿ, ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪ, ಪಿ.ಆರ್‌. ರಮೇಶ್‌, ಮೋಹನ್‌ ಕೊಂಡಜ್ಜಿ, ಜೆಡಿಎಸ್‌ನ ಮರಿತಿಬ್ಬೇಗೌಡ, ಕೆ.ಎ ತಿಪ್ಪೇಸ್ವಾಮಿ, ಟಿ.ಎ. ಶರವಣ ಮಸೂದೆಯನ್ನು ವಿರೋಧಿಸಿದರು. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ತಿದ್ದುಪಡಿ ಮಸೂದೆಯನ್ನು ಅಷ್ಟೇ ಬಲವಾಗಿ ಸಮರ್ಥಿಸಿಕೊಂಡರು.

ಅಂಗೀಕಾರ
ಮೇಲ್ಮನೆಯಲ್ಲಿ ಆಡಳಿತ, ವಿಪಕ್ಷಗಳ ತೀವ್ರ ವಿರೋಧ ಮತ್ತು ಸಭಾತ್ಯಾಗ ಹಾಗೂ ಆಡಳಿತ ಪಕ್ಷದ ಸದಸ್ಯ ಆಯ ನೂರು ಮಂಜುನಾಥ ಅವರ ಸದನದ ಬಹಿಷ್ಕಾರದ ಮಧ್ಯೆ ಮಸೂದೆಗೆ ಧ್ವನಿಮತದ ಅಂಗೀಕಾರ ದೊರಕಿತು.

Advertisement

Udayavani is now on Telegram. Click here to join our channel and stay updated with the latest news.

Next