21ಕ್ಕೆ ಮುಕ್ತಾಯವಾಗಿತ್ತು. ಈಗ ಕೇಂದ್ರ ಸರ್ಕಾರ ಆಗಸ್ಟ್ 16ರ ವರೆಗೆ ಅವಧಿ ವಿಸ್ತರಿಸಿದೆ.
Advertisement
ವಾರ್ಷಿಕ 75 ಲಕ್ಷ ರೂ. ಮಿತಿಯೊಳಗೆ ವ್ಯವಹಾರ ನಡೆಸುವವರು ರಾಜಿ ತೆರಿಗೆ ವ್ಯಾಪ್ತಿಗೆ ಒಳಪಡುತ್ತಾರೆ. ಈ ಪೈಕಿ ವರ್ತಕರು ಶೇ.1, ಉತ್ಪಾದಕರು ಶೇ.2 ಹಾಗೂ ಹೋಟೆಲ್ ಉದ್ಯಮದವರು ಶೇ.5 ತೆರಿಗೆಯನ್ನು ಮೂರು ತಿಂಗಳಿಗೊಮ್ಮೆ ಪಾವತಿಸಬೇಕು. ಈ ತೆರಿಗೆಯನ್ನು ಗ್ರಾಹಕರಿಂದ ಸಂಗ್ರಹಿಸದೆ ವರ್ತಕರು, ಉತ್ಪಾದಕರು, ಹೋಟೆಲ್ ಉದ್ಯಮದವರೇ ಭರಿಸಬೇಕೆಂಬ ನಿಯಮವಿದೆ. ರಾಜಿ ತೆರಿಗೆ ವ್ಯಾಪ್ತಿಯಲ್ಲಿ ಇರುವವರು ಜಿಎಸ್‌ಟಿಯಡಿ ನೋಂದಣಿ ಮಾಡಿಕೊಳ್ಳಲು ಜು.21 ಕಡೆಯ ದಿನವಾಗಿತ್ತು. ಎಲ್ಲರೂ ಜಿಎಸ್‌ಟಿಯಡಿ ನೋಂದಾಯಿಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಅವಧಿ ವಿಸ್ತರಿಸಿದೆ. ಅದರಂತೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯೂ ಅಧಿಸೂಚನೆ ಹೊರಡಿಸಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಬಿ.ವಿ.ಮುರಳಿಕೃಷ್ಣ ತಿಳಿಸಿದ್ದಾರೆ.