Advertisement

ಆರೋಗ್ಯ ವಿಮೆ ಇಲ್ಲದ ವರ್ಗಕ್ಕೆ “ಆಯುಷ್ಮಾನ್‌’ವಿಸ್ತರಣೆ?

07:57 PM Jan 18, 2023 | Team Udayavani |

ನವದೆಹಲಿ:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಫೆ.1ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ಸಾಧ್ಯತೆಗಳು ಇವೆ. ಅದಕ್ಕೆ ಪೂರಕವೆಂಬಂತೆ, 2018ರ ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ ಜಾರಿಯಾಗಿರುವ ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿಪಿಎಂ-ಜೆಎವೈ)ಯನ್ನು ಬಡವರಲ್ಲದ ವ್ಯಾಪ್ತಿಯ ವರ್ಗದವರಿಗೆ ಕೂಡ ವಿಸ್ತರಿಸುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಗಳು ಇವೆ.

Advertisement

ಸದ್ಯ ಈ ಯೋಜನೆ ದೇಶದ ಶೇ.60ರಷ್ಟು ಮಂದಿ ಅರ್ಹ ಫ‌ಲಾನುಭವಿಗಳನ್ನು ಹೊಂದಿದೆ. ಒಟ್ಟು ಜನಸಂಖ್ಯೆಯ ಪೈಕಿ 40 ಕೋಟಿ ಅಥವಾ ಶೇ.30 ಮಂದಿಗೆ ಯಾವುದೇ ರೀತಿಯ ಆರೋಗ್ಯಕ್ಕೆ ಸಂಬಂಧಿಸಿದ ವಿಮೆಗಳನ್ನು ಹೊಂದಿಲ್ಲ.

ನೀತಿ ಆಯೋಗ ಈ ವರ್ಗವನ್ನು “ಅನುಕೂಲ ವಂಚಿತ’ ಎಂದು ಹೆಸರಿಸಿದೆ. ಈ ವರ್ಗಕ್ಕೂ ಆಯುಷ್ಮಾನ್‌ ಯೋಜನೆಯನ್ನು ವಿಸ್ತರಿಸುವ ಮತ್ತು ಪ್ರಸ್ತಾವಿತ ಯೋಜನೆಯಲ್ಲಿ ವ್ಯಕ್ತಿ ಕೇಂದ್ರಿತ ಆರೋಗ್ಯ ವಿಮೆ ಜಾರಿ ಮಾಡುವ ಚಿಂತನೆಯಿದೆ ಎಂದು “ಲೈವ್‌ ಮಿಂಟ್‌’ ವರದಿ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next