ಹೊಸದಿಲ್ಲಿ: ಕಳೆದ (2019-20) ವಿತ್ತೀಯ ವರ್ಷದ ಆದಾಯ ತೆರಿಗೆ ಉಳಿಸಲು ಮಾಡಬಹುದಾದ ಹೂಡಿಕೆಗಳ ಗಡುವನ್ನು ಜು.31ರ ವರೆಗೆ ವಿಸ್ತರಿಸಲಾಗಿದೆ.
ಕೇಂದ್ರ ಆದಾಯ ತೆರಿಗೆ ಇಲಾಖೆ ಈ ಮುನ್ನ ಜೂ.30ರ ವರೆಗೆ ಈ ಗಡುವನ್ನು ನಿಗದಿಪಡಿಸಿತ್ತು.
ಸದ್ಯ ಕೋವಿಡ್ 19 ಕಾರಣಕ್ಕೆ ಹೂಡಿಕೆ ಮಾಡಲು ಆಗದಿರುವ ಪರಿಸ್ಥಿತಿಯಿಂದ ಗಡುವನ್ನು ಮತ್ತೆ ಪರಿಷ್ಕರಿಸಲಾಗಿದೆ. ಪರಿಣಾಮವಾಗಿ ಹೂಡಿಕೆದಾರರಿಗೆ ಇನ್ನೂ ಒಂದು ತಿಂಗಳು ತೆರಿಗೆ ಉಳಿಸಲು ಅವಕಾಶ ಸಿಗುತ್ತದೆ.
ಜು.31ರೊಳಗೆ ಭವಿಷ್ಯ ನಿಧಿ, ಪಿಪಿಎಫ್, ಎನ್‌ಎಸ್‌ಸಿಗಳಲ್ಲಿ ಹೂಡಿಕೆ ಮಾಡಿದ್ದರೆ, ದೇಣಿಗೆ ನೀಡಿದ್ದರೆ 2020-21ರ ವಿತ್ತೀಯ ವರ್ಷದಲ್ಲೂ ತೆರಿಗೆ ಕಡಿತಕ್ಕೆ ಮನವಿ ಸಲ್ಲಿಸಲು ಅವಕಾಶವಿದೆ.
ಸಣ್ಣ ಉಳಿತಾಯ ಯೋಜನೆ ಅಥವಾ ಅಂಚೆ ಕಚೇರಿ ಯಲ್ಲಿ ಮಾಡಿದ ಹೂಡಿಕೆಗಳ ಮೇಲಿನ ಬಡ್ಡಿ ದರ ಜುಲೈ-ಸೆಪ್ಟಂಬರ್ ತ್ತೈಮಾಸಿಕದಲ್ಲಿ ಎಂದಿ ನಂತೆಯೇ ಇರಲಿದೆ. ಅದರಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಕೇಂದ್ರ ಅಂಚೆ ಇಲಾಖೆ ತಿಳಿಸಿದೆ.