Advertisement
ಸರ್ವರ್ ಮೇಲಿನ ಒತ್ತಡದಿಂದ ಆಗಬಹುದಾದ ನಿಧಾನಗತಿಯಿಂದ ಹಿಡಿದು ಹತ್ತುಹಲವು ತಾಂತ್ರಿಕ ತೊಂದರೆಗಳು ಎಚ್‌ಎಸ್‌ಆರ್‌ಪಿ ಬುಕಿಂಗ್ ವೇಳೆ ಕಂಡು ಬರುತ್ತಿದೆ. ಹಾಗಾಗಿ, ಫೆ. 17ರ ಒಳಗೆ ಬುಕಿಂಗ್ ಮತ್ತು ಅಳವಡಿಕೆ ಕಷ್ಟ ಸಾಧ್ಯ. ಹಾಗೆ ನೋಡಿದರೆ, ಬಹುತೇಕರು ತಮ್ಮದಲ್ಲದ ತಪ್ಪಿಗೆ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪರಿ ಣಾಮ ಹೊಸ ವ್ಯವಸ್ಥೆಯಿಂದ ಹೊರಗುಳಿಯಲಿದ್ದಾರೆ. ಆದ್ದರಿಂದ ಕನಿಷ್ಠ ಇನ್ನೂ ಒಂದು ತಿಂಗಳಾ ದರೂ ಗಡುವು ವಿಸ್ತರಣೆ ಮಾಡಬೇಕು ಎಂದು ವಾಹನಗಳ ಮಾಲೀಕರು ಒತ್ತಾಯಿಸಿದ್ದಾರೆ.
Related Articles
Advertisement
“ಎಚ್‌ಎಸ್‌ಆರ್‌ಪಿ ಬಗ್ಗೆ ಜಾಗೃತಿ ಮೂಡಿಸ ಲಾಗುತ್ತದೆ. ಆದರೆ, ಇದಕ್ಕೆ ವಾಹನ ಸವಾರರ ಸಹಕಾರ ಮುಖ್ಯ ವಾಗಿದೆ. ಒಇಎಂ (ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನ್ಯುಫ್ಯಾಕ್ಚರರ್)ಗಳಿಂದ ಅನುಮೋ ದಿಸಲ್ಪಟ್ಟ ಮಾರಾಟಗಾರರು ಮತ್ತು ವಿತರಕರು (ಡೀಲರ್) ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡುತ್ತಾರೆ. ಅದೂ ಆನ್‌ಲೈನ್ ಮೂಲಕವೇ ಕೋರಿಕೆ ಸಲ್ಲಿಸುವುದು ಅಗತ್ಯ ಮತ್ತು ಅನಿ ವಾ ರ್ಯ. ಮನೆ ಬಾಗಿಲಿಗೇ ಬಂದುಅಳವಡಿ ಸಲಾಗುತ್ತಿದೆ. ಬುಕಿಂಗ್ ಮಾಡುವುದು ಹೇಗೆ?
ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ : https://transport.karnataka.gov.in ಗೆ ಭೇಟಿ ನೀಡಿ, ಅಲ್ಲಿ ಎಚ್‌ಎಸ್‌ಆರ್‌ಪಿಗೆ ಕೋರಿಕೆ ಸಲ್ಲಿಸಬೇಕು. ನಂತರ ನೋಂದಣಿ ಪತ್ರ ಒಳಗೊಂಡಂತೆ ಅಗತ್ಯ ದಾಖಲೆಗಳನ್ನು ದಾಖಲಿಸಬೇಕು. ಅದು ಸಂಬಂಧಪಟ್ಟ ಒಇಎಂಗೆ ಹೋಗುತ್ತದೆ. ಅಲ್ಲಿ ಹತ್ತಿರದ ಡೀಲರ್ ಅಥವಾ ಮಾರಾಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು. ತದನಂತರ ದಿನಾಂಕ ಮತ್ತು ಸಮಯ ನಿಗದಿ ಯಾಗುತ್ತದೆ. ಜತೆಗೆ ಆಯಾ ಸಮೀಪದ ಡೀಲರ್‌ಗೂ ಸಂದೇಶ ತಲುಪುತ್ತದೆ. ನಿಗದಿಪಡಿಸಿದ ಅವಧಿಯಲ್ಲಿ ಖುದ್ದು ಮನೆಗೆ ಬಂದು, ನಂಬರ್ ಪ್ಲೇಟ್ ಅಳವಡಿಸಲಾಗುತ್ತದೆ. ಕಳೆದ 3 ವಾರಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಜನ ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇದುವರೆಗೆ ಅಂದಾಜು 15 ಲಕ್ಷಕ್ಕಿಂತ ಹೆಚ್ಚು ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿವೆ. ಮುಂದೊಂದು ವಾರದಲ್ಲೂ ಇನ್ನೂ ಉತ್ತಮ ಸ್ಪಂದನೆ ದೊರೆಯುವ ವಿಶ್ವಾಸ ಇದೆ. ವಿಸ್ತರಣೆ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.
-ಸಿ.ಮಲ್ಲಿಕಾರ್ಜುನ, ಹೆಚ್ಚುವರಿ ಆಯುಕ್ತರು,ಸಾರಿಗೆ ಇಲಾಖೆ