Advertisement

Kerala: ಸ್ಫೋಟ- ಬಂಧಿತನಿಂದ ಮಾಹಿತಿ ಸಂಗ್ರಹ

01:36 AM Nov 01, 2023 | Team Udayavani |

ಕಾಸರಗೋಡು: ಕಳಮಶ್ಶೇರಿಯಲ್ಲಿ ಯಹೋವನ ವಲಯ ಸಮಾವೇಶದಲ್ಲಿ ಪ್ರಾರ್ಥನಾ ಸಭೆ ನಡೆಯುತ್ತಿದ್ದಾಗ ಸಂಭವಿಸಿದ ತ್ರಿವಳಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ಚೆಲವನ್ನೂರು ವೇಲಿಕಗತ್ತ್ ವೀಟಿಲ್‌ನ ಮಾರ್ಟಿನ್‌ ಡೊಮಿನಿಕ್‌ (52) ನನ್ನು ಬಾಂಬ್‌ ಸ್ಫೋಟ ನಡೆದ ಸ್ಥಳ, ಆತನ ಮನೆ, ಅತ್ತಾಣಿಯಲ್ಲಿರುವ ಆತನ ಇನ್ನೊಂದು ಮನೆ, ಬಾಂಬ್‌ ನಿರ್ಮಿಸಿದ ಕೇಂದ್ರ, ಬಾಂಬ್‌ ತಯಾರಿಗೆ ಸಾಮಗ್ರಿಗಳನ್ನು ಖರೀದಿಸಿದ ಸಂಸ್ಥೆಗಳಿಗೂ ಪೊಲೀಸರು ಒಯ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Advertisement

ಮಾತ್ರವಲ್ಲ ಆತನ ಮೊಬೈಲ್‌ ಫೋನ್‌ಗಳನ್ನು ಫೋರೆನ್ಸಿಕ್‌ ಲ್ಯಾಬ್‌ನ ಸಹಾಯದಿಂದ ಪರಿಶೀಲಿಸಿ ಅದರಿಂದ ಅಗತ್ಯದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಮೊಬೈಲ್‌ ಫೋನ್‌ನ ಎಲ್ಲ ಕರೆಗಳನ್ನು ಪೊಲೀಸರು ಸೈಬರ್‌ ಸೆಲ್‌ ಸಹಾಯದಿಂದ ಪರಿಶೀಲಿಸುತ್ತಿದ್ದಾರೆ.

ಈ ಬಾಂಬ್‌ ಸ್ಫೋಟದಲ್ಲಿ ಬಾಲಕಿ ಸಹಿತ ಮೂವರು ಸಾವಿಗೀಡಾಗಿದ್ದು, 18 ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಒಟ್ಟು 52 ಮಂದಿ ಗಾಯಗೊಂಡಿದ್ದರು. ಬಾಂಬ್‌ ಸ್ಫೋಟದ ಜವಾಬ್ದಾರಿಯನ್ನು ಮಾರ್ಟಿನ್‌ ಡೊಮಿನಿಕ್‌ ಸ್ವಯಂ ಒಪ್ಪಿಕೊಂಡಿದ್ದರೂ, ಈ ದುಷ್ಕೃತ್ಯದಲ್ಲಿ ಆತ ಒಬ್ಬನೆ ಅಲ್ಲವೆಂದೂ, ಇನ್ನೂ ಕೆಲವರು ಇರಬಹುದೆಂದು ಶಂಕಿಸಲಾಗಿದೆ. 15 ವರ್ಷಗಳಿಂದ ದುಬೈಯಲ್ಲಿ ನೆಲೆಸಿದ್ದ ಆರೋಪಿ ಮಾರ್ಟಿನ್‌ ಅಲ್ಲಿ ಇಲೆಕ್ಟ್ರೀಶಿಯನ್‌ ಆಗಿ ದುಡಿಯುತ್ತಿದ್ದ. ಅಲ್ಲಿಂದ 2 ತಿಂಗಳ ಹಿಂದೆ ಊರಿಗೆ ಬಂದಿದ್ದ. ಆದ್ದರಿಂದ ಆತನ ದುಬಾೖ ನಂಟು ಬಗ್ಗೆಯೂ ಎನ್‌ಐಎ ತನಿಖೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next