ಗಂಗಾವತಿ: ಬೆಂಬಲ ಬೆಲೆಗೆ ಖರೀದಿಸಿದ ಭತ್ತವನ್ನು ಮಿಲ್ಲಿಂಗ್ ಮಾಡುವ ವಿಷಯದಲ್ಲಿ ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಹಲವಾರು ಕಂಡಿಷನ್ ಹಾಕುವ ಮೂಲಕ ರೈಸಮಿಲ್ ಮಾಲೀಕರನ್ನು ಶೋಷಣೆ ಮಾಡುತ್ತಿದ್ದು ಕೂಡಲೇ ನಿಲ್ಲಿಸುವಂತೆ ಶಾಸಕ ಹಾಗೂ ರೈಸ್ ಮಿಲ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಪರಣ್ಣ ಮುನವಳ್ಳಿ ಅವರು ಆಹಾರ ಸಚಿವ ಗೋಪಾಲಯ್ಯ ಅವರಿಗೆ ಮನವಿ ಮಾಡಿದ್ದಾರೆ.
ರೈಸ್ ಮಿಲ್ ಮಾಲೀಕರ ಸಂಘದ ಪದಾಧಿಕಾರಿಗಳು ಮಂಗಳವಾರ ಶಾಸಕ ಪರಣ್ಣ ಅವರನ್ನು ಭೇಟಿ ಮಾಡಿ ಸಮಸ್ಯೆ ಮನವರಿಕೆ ಮಾಡಿದ ಸಂದರ್ಭದಲ್ಲಿ ಅವರು ಸಚಿವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಮಾತನಾಡಿದರು.
ರಾಜ್ಯದಲ್ಲಿ ಬೆಳೆದ ಭತ್ತದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಇಂತಹ ಸಂದರ್ಭಗಳಲ್ಲಿ ರಾಜ್ಯ ಕೇಂದ್ರ ಸರಕಾರ ರೈತರು ಬೆಳೆದ ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ಸ್ಥಳೀಯ ರೈಸ್ ಮಿಲ್ ಗಳಲ್ಲಿ ಇಲಾಖೆಯ ನಿಯಮ ಶೇ 67 ರಷ್ಟು ಅಕ್ಕಿ ವಿತರಣೆ ಸೇರಿ ಹಲವು ನಿಯಮಗಳಂತೆ ಮಿಲ್ಲಿಂಗ್ ಮಾಡಲು ನೀಡುವ ಜತೆಗೆ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಅಧಿಕಾರಿಗಳು ಪೀಡಿಸುತ್ತಿದ್ದು ಇಲ್ಲದಿದ್ದರೆ ರೈತರಿ ಕಡಿಮೆ ಬೆಲೆಗೆ ಭತ್ತ ಖರೀದಿಸಿದ ಆರೋಪದಡಿ ರೈಸ್ ಮಿಲ್ ಮಾಲೀಕರ ವಿರುದ್ದ ಕೇಸ್ ಹಾಕುವುದಾಗಿ ದೌರ್ಜನ್ಯವೆಸಲಾಗುತ್ತಿದೆ.
ಅವಸಾನದ ಅಂಚಿನಲ್ಲಿರುವ ರೈಸ್ ಮಿಲ್ ಗಳನ್ನುಶೋಷಣೆಯಿಂದ ಉಳಿಸಬೇಕಿದೆ. ಸರಕಾರದ ಖರೀದಿಸಿದ ಭತ್ತದ ಮಿಲ್ಲಿಂಗ್ ಮಾಡಲು ಬಾಂಡ್ ಪೇಪರ್ ಗ್ಯಾರಂಟಿ ಪಡೆಯಬೇಕು. ದೌರ್ಜನ್ಯದ ಹೇಳಿಕೆ ನಿಲ್ಲಿಸುವಂತೆ ಮುನವಳ್ಳಿ ಸಚಿವರಿಗೆ ಮನವಿ ಮಾಡಿದರು.
ಸ್ಪಂದನೆ: ರಾಜ್ಯದ ರೈಸ್ ಮಿಲ್ ಮಾಲೀಕರ ಹಿತಾಸಕ್ತಿ ಕಾಯಲು ರಾಜ್ಯ ಸರಕಾರ ಬದ್ದವಾಗಿದೆ ಮತ್ತೊಮ್ಮೆ ಆಹಾರ ಸಚಿವರ ಜತೆ ಬೆಂಗಳೂರಿಗೆ ತೆರಳಿ ಮನವಿ ಮಾಡುವುದಾಗಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ. ಇಲ್ಲದಿದ್ದರೆ ರೈಸ್ವ ಮಿಲ್ ಗಳಿಗೆ ಉಳಿಗಾಲವಿಲ್ಲ. ಈಗಾಗಲೇ ಬ್ಯಾಂಕ್ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯಲಾಗಿದ್ದು ಮತ್ತೊಮ್ಮೆ ಬ್ಯಾಂಕ್ ಗ್ಯಾರಂಟಿ ಕೊಡುವುದು ಅಸಾಧ್ಯ ಎಂದು ರೈಸ್ ಮಿಲ್ ಮಾಲೀಕರ ಸಂಘದ ಮುಖಂಡ ಮೂಕಯ್ಯ ಸ್ವಾಮಿ ಉದಯವಾಣಿ ತಿಳಿಸಿದ್ದಾರೆ