Advertisement

ಶೋಷಣೆಗೆ ದೇಶ, ಭಾಷೆಯ ಗಡಿಯಿಲ್ಲ: ಡಿಸಿ

12:50 AM Jan 27, 2019 | Team Udayavani |

ಉಡುಪಿ: ಶೋಷಣೆಗೆ ದೇಶ, ಭಾಷೆಯ ಗಡಿ ಇಲ್ಲ. ಎಲ್ಲ ದೇಶಗಳಲ್ಲಿಯೂ ಒಂದಿಲ್ಲೊಂದು ರೀತಿಯ ಶೋಷಣೆ ಇದೆ. ಶೋಷಣೆಗೊಳಗಾದವರು ಒಗ್ಗಟ್ಟಿನಿಂದ ದನಿ ಎತ್ತಿದರೆ ಮಾತ್ರ ಶೋಷಣೆಯಿಂದ ಮುಕ್ತರಾಗಿ ಉತ್ತಮ ಬದುಕು ರೂಪಿಸುವ ಅವಕಾಶ ಸೃಷ್ಟಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅಭಿಪ್ರಾಯಪಟ್ಟರು.

Advertisement

ಜ. 26ರಂದು ಸಂವಿಧಾನ ಜಾರಿ ಯಾದ ದಿನ ಆಚರಣೆ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಭೀಮಘರ್ಜನೆ) ರಾಜ್ಯ ಸಮಿತಿ ವತಿಯಿಂದ ಉಡುಪಿ ಬೋರ್ಡ್‌ ಹೈಸ್ಕೂಲ್‌ ಮೈದಾನದಲ್ಲಿ “ಸಮಬಾಳು ಸಮಪಾಲಿಗಾಗಿ ನಮ್ಮ ಹೋರಾಟ’ ಎಂಬ ಧ್ಯೇಯವಾಕ್ಯದಲ್ಲಿ ಜರಗಿದ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಲಿತರು ಅಥವಾ ಶೋಷಣೆ ಗೊಳಗಾದವರ ಪರವಾಗಿ ಕಾನೂನಿನ ಬೆಂಬಲ ಇದ್ದರೂ ಕೂಡ ಕೆಲವೊಮ್ಮೆ ನಾನಾ ಕಾರಣಗಳಿಂದಾಗಿ ಅನುಷ್ಠಾನದ ಸಂದರ್ಭದಲ್ಲಿ ನ್ಯಾಯ ಸಿಗದೆ ಹೋಗುವ ಸಾಧ್ಯತೆಗಳೂ ಇರುತ್ತವೆ. ಕಾನೂನು ಅನುಷ್ಠಾನಗೊಳಿಸುವವರು ಅಸಹಾಯಕರಾಗಿ ನೋಡಬೇಕಾದ ಸ್ಥಿತಿಯೂ ನಿರ್ಮಾಣವಾಗುತ್ತದೆ. ಇಂತಹ ಸ್ಥಿತಿ ಉಂಟಾಗದೆ ನ್ಯಾಯ ದೊರೆಯಬೇಕಾದರೆ ಶೋಷಣೆ ಗೊಳಗಾದವರು ಒಂದಾಗಿ ಹೋರಾಟ ನಡೆಸಬೇಕು. ದಲಿತರು ಅಧಿಕಾರಿಗಳೊಂದಿಗೆ ಸದಾ ಸಂಪರ್ಕ ವನ್ನಿಟ್ಟು ಕೊಂಡು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಮಾವೇಶಕ್ಕೂ ಬದಲು ಅಜ್ಜರಕಾಡು ಪುರಭವನದಿಂದ ಹೊರಟ ನೀಲಿ ಸೈನ್ಯ ಪಥ ಸಂಚಲನಕ್ಕೆ ಎಸ್‌ಪಿ ಲಕ್ಷ್ಮಣ ಬ.ನಿಂಬರಗಿ ಅವರು ಚಾಲನೆ ನೀಡಿದರು. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿಯವರು ಮಾಲಾರ್ಪಣೆಗೈದರು. ಅನಂತರ ಭೀಮಘರ್ಜನೆಯ ಕ್ಯಾಲೆಂಡರ್‌ ಬಿಡುಗಡೆಗೊಳಿಸಿದರು.

ನಾಗಣ್ಣ ಕಲ್ಲದೇವನಹಳ್ಳಿ ಯಾದಗಿರಿ, ಉಡುಪಿಯ ದಲಿತ ಚಿಂತಕ ನಾರಾಯಣ ಮಣೂರು, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ವೇಲಾಯುದನ್‌, ಸಮಾಜ ಸೇವಕ ಮಾಣಿ ರಮೇಶ ತಲ್ಲೂರು ಅವರಿಗೆ “ಭೀಮರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ತಲ್ಲೂರು ಗ್ರಾ.ಪಂ. ಸದಸ್ಯೆ ದೇವಿ ಶಂಕರ ಅವರನ್ನು ಸಮ್ಮಾನಿಸಲಾಯಿತು. 

Advertisement

ಭೀಮಘರ್ಜನೆ ಹಾಗೂ ನೀಲಿ ಸೇನೆ ರಾಜ್ಯಾಧ್ಯಕ್ಷ ಉದಯ ಕುಮಾರ್‌ ತಲ್ಲೂರು ಅಧ್ಯಕ್ಷತೆ ವಹಿಸಿದ್ದರು. ತಲ್ಲೂರು ಗ್ರಾ.ಪಂ. ಅಧ್ಯಕ್ಷ ಆನಂದ ಬಿಲ್ಲವ, ದಲಿತ ಚಿಂತಕ ಗ್ಯಾನಪ್ಪ ಬಡಗೇರ, ರಾಜ್ಯ ಸಂಘಟನಾ ಸಂಚಾಲಕ ನಾರಾಯಣ ಸ್ವಾಮಿ, ದಸಂಸ (ಅಂಬೇಡ್ಕರ್‌ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ್‌ ಮಾಸ್ತರ್‌, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಮಂಜುಳಮ್ಮ, ದಲಿತ ಕಲಾ ಮಂಡಳಿಯ ರಾಜ್ಯ ಸಂಚಾಲಕ ಡಿಂಗ್ರಿ ನರಸಪ್ಪ, ರಾಜ್ಯ ಖಜಾಂಚಿ ಕೃಷ್ಣಪ್ಪ ಕೋಲಾರ, ರಾಜ್ಯ ಸಂಘಟನಾ ಸಂಚಾಲಕ ಕೆ.ವಿ. ಮುನಿರಾಜು, ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಆರ್‌. ಮೂರ್ತಿ, ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್‌, ಶ್ರೀಶೈಲಾ ಹೊಸಮನಿ, ಕೆ. ಸಂಜೀವಪ್ಪ ಹೊಸಕೋಟೆ, ಸದ್ದಾಂ ಹುಸೇನ್‌ ಯಾದಗಿರಿ, ನರಸಿಂಹ ನೆಲಹಾಳ, ಸುನಿಲ್‌ ಖಾರ್ವ, ಶ್ಯಾಮರಾಜ್‌ ಬಿರ್ತಿ ಉಪಸ್ಥಿತರಿದ್ದರು.ಸುಮಲತಾ ಕಾರ್ಯಕ್ರಮ ನಿರ್ವಹಿಸಿ ದರು. ರಾಜ್ಯ ಸಂಘಟನಾ ಸಂಚಾಲಕ ಎಂ. ಈರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next