ಹೋರಾಟ ಸಮಿತಿ ನೇತೃತ್ವದಲ್ಲಿ ವಿಟಿಯು ವ್ಯಾಪ್ತಿಯ ಜೆಎಂಐಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಕಾಲೇಜು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
Advertisement
ನೂರಾರು ಸಂಖ್ಯೆಯಲ್ಲಿ ಕಾಲೇಜಿನ ಮುಖ್ಯದ್ವಾರದ ಬಳಿ ಸೇರಿದ ವಿದ್ಯಾರ್ಥಿಗಳು ವಿಟಿಯು ವಿರುದ್ಧ ಧಿಕ್ಕಾರ ಕೂಗಿದರು. ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಒತ್ತಾಯಿಸಿದರಲ್ಲದೆ ಶೋಷಣೆ ತಪ್ಪಿಸುವಂತೆ ಆಗ್ರಹಿಸಿದರು. ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಮಾತನಾಡಿ, ಡಿಸೆಂಬರ್ 2016ರಲ್ಲಿ ನಡೆದ ಇಂಜಿನಿಯರಿಂಗ್ ಪರೀಕ್ಷೆಗಳ ಫಲಿತಾಂಶವನ್ನು ವಿಟಿಯು ಸುಮಾರು 5 ತಿಂಗಳು ವಿಳಂಬವಾಗಿ ಪ್ರಕಟಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹಲವು ತೊಂದರೆ ಎದುರಿಸುತ್ತಿದ್ದಾರೆ. 2015-16ರಿಂದ ವಿಟಿಯು ನೂತನ ಸಿಬಿಸಿಎಸ್ ಪದ್ಧತಿಯನ್ನು ಜಾರಿಗೊಳಿಸಿತು. ಇದರಿಂದಾಗಿ ಏಕಕಾಲಕ್ಕೆ ಎರಡು ಬ್ಯಾಚ್ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿಯುತ್ತಿದ್ದರು. ಸಿಬಿಸಿಎಸ್ ಬ್ಯಾಚ್ ಒಂದೆಡೆಯಾದರೆ, ಮತ್ತೂಂದೆಡೆ ನಾನ್ ಸಿಬಿಸಿಎಸ್ ಬ್ಯಾಚ್, ನಾನ್ ಸಿಬಿಸಿಎಸ್ ಬ್ಯಾಚ್ ವಿದ್ಯಾರ್ಥಿಗಳಿಗೆ ಇಯರ್ ಬ್ಯಾಕ್ ಹಾಗೂ ಕ್ರಿಟಿಕಲ್ ಇಯರ್ ಬ್ಯಾಕ್ ಪದ್ಧತಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿದರು.
ಎಷ್ಟೇ ಅಂಕ ಪಡೆದರೂ ಅನುತ್ತೀರ್ಣವಾದ ವಿಷಯದ ಅಂಕಗಳನ್ನು ಸೊನ್ನೆಯೆಂದು ನಮೂದಿಸುವುದರ ಫಲವಾಗಿ ವಿದ್ಯಾರ್ಥಿಗಳಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕೋ ಬೇಡವೋ ಎಂಬ ಗೊಂದಲ ಉಂಟಾಗುತ್ತಿದೆ ಎಂದು ದೂರಿದರು. ಪ್ರಾಂಶುಪಾಲ ರಾಜಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳಾದ ಶ್ರೀಧರ ಕಾಳೆ, ಸಂತೋಷ್, ಸಂಜನಾ, ಸುಪ್ರಿಯಾ, ರೇಖಾ, ಪ್ರಭು, ಕಿರಣ್, ನಾಗರಾಜ, ಪ್ರಣವ್, ಜ್ಞಾನೇಶ್, ದಿವಾಕರ್, ಎಐಡಿಎಸ್‌ನ ಪ್ರದೀಪ್, ಚೇತನ್, ವಿಜಯ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Related Articles
ರವಿಕುಮಾರ್, ಎಐಡಿವೈಒ ಜಿಲ್ಲಾಧ್ಯಕ್ಷ
Advertisement