ಬೆಂಗಳೂರು ಸಂಚಾರ ನಿರ್ವಹಣೆಗಾಗಿ ಬಜೆಟ್‌ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಇವುಗಳ ಪೈಕಿ ಬಹುತೇಕ ಯೋಜನೆಗಳು ಅವೈ ಜ್ಞಾನಿಕವಾಗಿದೆ. ಒಟ್ಟಾರೆ ಬಜೆಟ್‌ನಲ್ಲಿ ಬೆಂಗ ಳೂರಿಗೆ ನೀಡಿರುವ ಕೊಡುಗೆಯು ಶೇ. 50ರಷ್ಟು ಮಾತ್ರ ಉತ್ತಮವಾಗಿದೆ ಎಂದು ಬೆಂಗಳೂರಿನ ಅಸೋಸಿಯೇಷನ್ ಆಫ್ ಕನ್ಸ ಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌ನ ಮಾಜಿ ಅಧ್ಯಕ್ಷ ಶ್ರೀಕಾಂತ್.ಎಸ್.ಚನ್ನಾಲ ವಿಶ್ಲೇಷಿಸಿದ್ದಾರೆ.
ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿಗೆ ನೀಡಿ ರುವ ಸೌಲಭ್ಯಗಳ ಕುರಿತು “ಉದಯವಾಣಿ’ ಜೊತೆಗೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ಬಜೆಟ್‌ನಲ್ಲಿ ಮುಖ್ಯವಾಗಿ ಬೆಂಗ ಳೂರು ಸಂಚಾರ ದಟ್ಟಣೆ ನಿರ್ವಹಣೆಗೆ ಸುರಂ ಗ ಮಾರ್ಗ, ಪಿಆರ್‌ಆರ್ ಸೇರಿ ಕೆಲವೊಂದು ಯೋಜನೆಗಳ ಮೂಲಕ ಪರಿಹಾರ ಕಂಡು ಕೊಳ್ಳಲು ಮುಂದಾಗಿದ್ದಾರೆ. ಬೆಂಗಳೂರು ಅಭಿವೃದ್ಧಿಗಾಗಿ ಮಾಡಲು ಹೊರಟಿರುವ ಬಹುತೇಕ ಯೋಜನೆಗಳು ಅವೈಜ್ಞಾನಿಕವಾ ಗಿವೆ. ಯೋಜನೆ ಅನುಷ್ಠಾನ ಮಾಡಿದ ರೀತಿ ಯು ಸೂಕ್ತವಾಗಿಲ್ಲ. ವೃತ್ತಿಪರರನ್ನು ಮುಂದಿಟ್ಟುಕೊಂಡು ಯೋಜನೆ ರೂಪಿಸಬೇಕಾಗಿತ್ತು. ವಾಹನಗಳ ಓಡಾಟಕ್ಕಾಗಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ, ಇಂದು ರಸ್ತೆಗಳ ಅಕ್ಕ-ಪಕ್ಕದ ಜಾಗಗಳು ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆಗಳಲ್ಲಿದೇ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ. ಬೀದಿ ಬದಿ ವ್ಯಾಪಾರ ಸೇರಿ ಇತರ ಕಾರ್ಯಗಳಿಗೆ ಫುಟ್‌ಪಾತ್‌ಗಳು ಒತ್ತುವರಿಯಾಗಿವೆ. ಯಾವ ಉದ್ದೇಶಕ್ಕೆ ರಸ್ತೆಯನ್ನು ನಿರ್ಮಿಸಿದ್ದೇವೋ ಆ ಉದ್ದೇಶಕ್ಕೆ ಶೇ.50ರಷ್ಟು ರಸ್ತೆಗಳು ಬಳಕೆ ಆಗುತ್ತಿಲ್ಲ ಎಂಬುದು ನಾವು ನಡೆಸಿರುವ ಸಮೀಕ್ಷೆಯಿಂದ ಗೊತ್ತಾಗಿದೆ ಎಂದು ತಿಳಿಸಿದರು.
ಇರುವ ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕಿತ್ತು: ರಸ್ತೆಗಳು, ಫುಟ್‌ಪಾತ್‌ಗಳನ್ನು ಸರಿಪಡಿಸುವುದು, ರಸ್ತೆ ವಿಭಜಕ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುವುದು ಸೇರಿದಂತೆ ಇರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಒತ್ತು ನೀಡಿದ್ದರೆ ಬಹಳಷ್ಟು ಒಳ್ಳೆಯದಾಗುತ್ತಿತ್ತು. ಇದರಿಂದ ಹೊಸ ಸುರಂಗ ಮಾರ್ಗ, ಹೊಸ ಮಾರ್ಗ ನಿರ್ಮಾಣದ ಅಗತ್ಯವೇ ಬೀಳುತ್ತಿರಲಿಲ್ಲ. ಇದರಿಂದ ಯೋಜನೆಗಳು ಸೂಕ್ತ ರೀತಿಯಲ್ಲಿ ಕಾರ್ಯರೂಪಕ್ಕೆ ಬರಲು ಸಹಕಾರಿಯಾಗುತ್ತದೆ ಎಂದು ವಿಶ್ಲೇಷಿಸಿದರು.
ನಿರೀಕ್ಷಿಸಿದಷ್ಟು ಬೆಂಗಳೂರಿಗೆ ಕೊಡುಗೆ ಇಲ್ಲ: ವಿವಿಧ ಮೆಟ್ರೋ ಯೋಜನೆಗಳು ಹಾಗೂ ಉಪನಗರ ರೈಲು ಯೋಜನೆಯಿಂದ ಜನ ಸಾಮಾನ್ಯರಿಗೆ ಬಹಳಷ್ಟು ಅನುಕೂಲವಾಗುತ್ತವೆ. ಕಾವೇರಿ 5ನೇ ಹಂತದ ಯೋಜನೆ ಜಾರಿಯಿಂದ 110 ಹಳ್ಳಿಗಳಿಗೆ ಕಾವೇರಿ ನೀರಿನ ಸೌಲಭ್ಯ ಒದಗಿಬರಲಿದೆ. ಒಟ್ಟಾರೆಯಾಗಿ ಈ ಬಾರಿಯ ಬಜೆಟ್‌ನಲ್ಲಿ ಬೆಂಗಳೂರಿಗೆ ನಿರೀಕ್ಷೆಗೆ ತಕ್ಕುದಾದಷ್ಟು ಕೊಡುಗೆಗಳು ಸಿಕ್ಕಿಲ್ಲ ಎಂದು ಶ್ರೀಕಾಂತ್.ಎಸ್ .ಚನ್ನಾಲ ತಿಳಿಸಿದ್ದಾರೆ.
ಶ್ರೀಕಾಂತ್.ಎಸ್. ಚನ್ನಾಲ, ಮಾಜಿ ಅಧ್ಯಕ್ಷ, ಬೆಂಗಳೂರಿನ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್