Advertisement
ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರುವ ಚಿತ್ರದ ವಿಡಿಯೋ ಗ್ಲಿಮ್ಸ್ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಚಿತ್ರದ ಒಂದು ಸಣ್ಣ ಬಿಟ್ ಇಡೀ ಸಿನಿಮಾದ ಗುಣಮಟ್ಟವನ್ನು ಸಾರಿ ಹೇಳುತ್ತಿದೆ. ನಿರ್ದೇಶಕ ಅನೂಪ್ ಭಂಡಾರಿ ಇಡೀ ಸಿನಿಮಾವನ್ನು ಹೊಸದಾಗಿ ಕಟ್ಟಿಕೊಟ್ಟಿರೋದು ಎದ್ದು ಕಾಣುತ್ತಿದೆ.ಕಿಚ್ಚ ಸುದೀಪ್ ಅವರ ಸ್ಟೈಲಿಶ್ ಲುಕ್ ಸಿನಿಮಾದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
Related Articles
Advertisement
“ವಿಕ್ರಾಂತ್ ರೋಣ’ ಪ್ಯಾನ್ ಇಂಡಿಯಾ ಆ್ಯಕ್ಷನ್ ಅಡ್ವೆಂಚÃ ಶೈಲಿಯ ಚಿತ್ರವಾಗಿದ್ದು, 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3ಡಿ ಬಿಡುಗಡೆಯನ್ನುಕಾಣಲಿದೆ. ಅನೂಪ್ ಭಂಡಾರಿಯವರ ನಿರ್ದೇಶನ, ಜಾಕ್ ಮಂಜುನಾಥ್ ಹಾಗೂ ಶಾಲಿನಿ ಮಂಜುನಾಥ್ ರವರ ನಿರ್ಮಾಣ, ಅಲಂಕಾರ್ ಪಾಂಡಿಯನ್ ಅವರ ಸಹ-ನಿರ್ಮಾಣ ಈ ಚಿತ್ರಕ್ಕಿದೆ. ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಚಿತ್ರಕ್ಕಿದೆ.
ಚಿತ್ರದಲ್ಲಿಕಿಚ್ಚ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿದ್ದಾರೆ. ಜಾಕ್ವೆಲಿನ್ ಕೇವಲ ಹಾಡಿನಲ್ಲಷ್ಟೇ ಕಾಣಿಸಿಕೊಂಡಿಲ್ಲ. ಚಿತ್ರದ ಕೆಲವು ಪ್ರಮುಖ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಜಾಕ್ವೆಲಿನ್ “ವಿಕ್ರಾಂತ್ ರೋಣ’ದಲ್ಲಿ ಒಂದು ಪಾತ್ರವಾಗಿದ್ದಾರೆ ಎನ್ನಬಹುದು. ಜಾಕ್ವೆಲಿನ್ ಕಾಣಿಸಿಕೊಂಡಿರುವ ಹಾಡಿಗಾಗಿ ಸಖತ್ ಕಲರ್‌ಫುಲ್ ಸೆಟ್ ಹಾಕಿದ್ದು, ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಒಂದು ಹಾಡಿಗಾಗಿಯೇ 4 ಕೋಟಿಗೂ ಅಧಿಕ ವೆಚ್ಚ ಮಾಡಿದೆ ಚಿತ್ರತಂಡ. ಇನ್ನು, ಬಿಗ್ ಬಜೆಟ್‌ನ ಚಿತ್ರಗಳ ಸಾಲಿನಲ್ಲಿ “ವಿಕ್ರಾಂತ್ ರೋಣ’ಕೂಡಾ ನಿಲ್ಲುತ್ತದೆ. ಚಿತ್ರಕ್ಕಾಗಿ 10ಕ್ಕೂ ಹೆಚ್ಚು ಸೆಟ್‌ಗಳನ್ನು ಹಾಕಲಾಗಿದ್ದು, 70 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರ 3ಡಿಯಲ್ಲೂ ತಯಾರಾಗುತ್ತಿರುವುದರಿಂದ ಚಿತ್ರದ ಬಜೆಟ್‌ನಲ್ಲೂ ಏರಿಕೆಯಾಗಿದೆ.
ರಿಲೀಸ್ ಕಾತರ
“ವಿಕ್ರಾಂತ್ ರೋಣ’ ಚಿತ್ರವನ್ನು ಯಾವಾಗ ತೆರೆ ಮೇಲೆ ಕಣ್ತುಂಬಿಕೊಳ್ಳುತ್ತೇವೋ ಎಂಬ ನಿರೀಕ್ಷೆಯಿಂದ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಚಿತ್ರದ ಬಹುತೇಕಕೆಲಸಗಳು ಪೂರ್ಣಗೊಂಡಿದ್ದು, ಚಿತ್ರಮಂದಿರಗಳಿಗೆ ಪೂರ್ಣ ಪ್ರವೇಶ ಸಿಕ್ಕಿದ ಬಳಕ ಚಿತ್ರ ಬಿಡುಗಡೆಯಾಗಲಿದೆ. ಮೊದಲು ಈ ಚಿತ್ರವನ್ನು ಆಗಸ್ಟ್ 19ರಂದು ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಘೋಷಿಸಿಕೊಂಡಿತ್ತು. ಆದರೆ, ಕೋವಿಡ್‌ನಿಂದ ಅದು ಸಾಧ್ಯವಾಗಿಲ್ಲ.
ರವಿಪ್ರಕಾಶ್ ರೈ