Advertisement
ಈಗಾಗಲೇ ಬಿಡುಗಡೆಯಾದ ಕರಡು ಮೀಸಲಾತಿಗೆ ಸುಮಾರು 100ಕ್ಕೂ ಅಧಿಕ ಆಕ್ಷೇಪಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಗಿದೆ. ಇದನ್ನು ಪರಾಮರ್ಶಿಸಿ ನಗರಾಭಿವೃದ್ಧಿ ಇಲಾಖೆಯು ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಿದ್ದು, ಇದರಂತೆ ಈಗಾಗಲೇ ಮೀಸಲಾದ 5ರಿಂದ 6 ಸ್ಥಾನಗಳಲ್ಲಿ ಬದಲಾವಣೆಯಾಗುವ ಸಂಭವವಿದೆ.
ಈಗ ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಕಾಂಗ್ರೆಸ್ 35 ಸ್ಥಾನಗಳನ್ನು ಪಡೆದು ಕೊಂಡಿದ್ದು, ಈ ಪೈಕಿ ಶೇ. 60ರಷ್ಟು ಹಾಲಿ ಸದಸ್ಯರಿಗೆ ಹೊಸ ಕರಡು ಮೀಸಲಾತಿಯನ್ವಯ ಸ್ಪರ್ಧೆಯ ಅವಕಾಶ ಸಿಗಲಿದೆ. ಉಳಿದ ಶೇ.30ರಷ್ಟು ಸದಸ್ಯರ ಕ್ಷೇತ್ರವು ಹೊಸ ಮೀಸಲಾತಿಯಡಿ ಅದಲು ಬದಲಾಗಿದೆ. ಆದರೆ, ಬಿಜೆಪಿಯ ಹಾಲಿ 20 ಸದಸ್ಯರ ಪೈಕಿ ಹೊಸ ಮೀಸಲಾತಿಯನ್ವಯ ಕೇವಲ ಆರರಿಂದ ಏಳು ಸದಸ್ಯರಿಗೆ ಮಾತ್ರ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ದೊರೆಯಲಿದೆ. ಈ ಮೂಲಕ ಬಿಜೆಪಿಯ ಹಾಲಿ ಸುಮಾರು 14ರಷ್ಟು ಸದಸ್ಯರು (ಉಳಿದ ಕ್ಷೇತ್ರ ಹೊರತುಪಡಿಸಿ)ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೇ ಕಳೆದುಕೊಂಡಿದ್ದಾರೆ. 2013 ಮಾ. 7ರಂದು ಪಾಲಿಕೆ ಚುನಾವಣೆ ನಡೆದಿದ್ದು, ಮುಂದಿನ ಚುನಾವಣೆ 2019ರ ಮಾರ್ಚ್ ವೇಳೆಗೆ ನಡೆಯುವ ಸಾಧ್ಯತೆ ಇದೆ.
Related Articles
ಮನಪಾದಲ್ಲಿ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿದೆ. ಯಾರಿಗೆ ಸ್ಪರ್ಧಿಸುವ ಅವಕಾಶ ಇದೆ ಹಾಗೂ ಇಲ್ಲ ಎಂಬುದರ ಬಗ್ಗೆ ಮೊದಲ ಚರ್ಚೆ ಈಗ ಶುರುವಾಗಿದೆ. ಕೆಲವು ಕಾರ್ಪೊರೇಟರ್ ಗಳಂತು, ದೊಡ್ಡ ಹುದ್ದೆಯ ಮೇಲೆ ಕಣ್ಣಿಟ್ಟು ಪಾಲಿಕೆ ಸ್ಥಾನ ಬೇಡ ಎಂದು ಕೂಡ ಯೋಚನೆ ಮಾಡಲು ಆರಂಭಿಸಿದ್ದಾರೆ. ಜತೆಗೆ, ತಮ್ಮ ವಾರ್ಡ್‌ಗಳಲ್ಲಿ ಈ ಬಾರಿಯ ಮೀಸಲಾತಿಯಂತೆ ಯಾರು ಸ್ಪರ್ಧೆ ನಡೆಸಬಹುದು ಎಂಬ ಬಗ್ಗೆಯೂ ಮಾತುಕತೆ ಆರಂಭವಾಗಿದೆ. ವಿಶೇಷವೆಂದರೆ, ಈ ಬಾರಿ ಶೇ. 50ರಷ್ಟು ಮಹಿಳಾ ಮೀಸಲಾತಿ ಘೋಷಣೆಯಾದ ಕಾರಣದಿಂದ ಎಲ್ಲ ವಾರ್ಡ್‌ಗಳಲ್ಲೂ ಸ್ಪರ್ಧೆಯ ಉತ್ಸಾಹ ಮೂಡುವಂತಾಗಿದೆ.
Advertisement
ಒಟ್ಟು 60 ಸ್ಥಾನ ಪ್ರಸ್ತುತ ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಕಾಂಗ್ರೆಸ್ 35 ಸ್ಥಾನಗಳನ್ನು ಪಡೆದು ಬಹುಮತ ಪಡೆದುಕೊಂಡಿದೆ. ಉಳಿದಂತೆ ಬಿಜೆಪಿ 20, ಜೆಡಿಎಸ್ 2, ಸಿಪಿಎಂ 1, ಪಕ್ಷೇತರ 1, ಎಸ್‌ಡಿಪಿಐ 1 ಸದಸ್ಯರನ್ನು ಹೊಂದಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 38 ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 22 ಪಾಲಿಕೆಯ ವಾರ್ಡ್‌ಗಳಿವೆ.