Advertisement

ಹೆಸರು ನೋಂದಣಿ ಅವಧಿ ವಿಸ್ತರಿಸಿ

05:32 PM Jan 23, 2018 | |

ನಾರಾಯಣಪುರ: ಕೊಡೇಕಲ್‌ ಪಟ್ಟಣದಲ್ಲಿ ತೆರೆಯಲಾಗಿರುವ ತೊಗರಿ ಖರೀದಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ
ಗ್ರಾಮಗಳ ತೊಗರಿ ಬೆಳೆದ ರೈತರು ತಮ್ಮ ಹೆಸರು ನೋಂದಾಯಿಸಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಆ ಎಲ್ಲಾ ರೈತರಿಗೆ ಹೆಸರು ನೋಂದಾಯಿಸುವ ಅವಧಿ ವಿಸ್ತರಿಸುವಂತೆ ಕನ್ನಡಪರ ಸಂಘಟನೆ ಪದಾಧಿಕಾರಿಗಳು ಹಾಗೂ ವಿವಿಧ ರೈತ ಪರ ಸಂಘಟನೆ ಸದಸ್ಯರು ಸೋಮವಾರ ಕೊಡೇಕಲ್‌ನ ನಾಡ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಅವರಿಗೆ ಬರೆದ ಮನವಿಯನ್ನು ಉಪ ತಹಶೀಲ್ದಾರ್‌ ಮಹಾದೇವಪ್ಪಗೌಡ ಬಿರಾದಾರ ಅವರಿಗೆ ಸಲ್ಲಿಸಿದರು. 

Advertisement

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ವಲಯಾಧ್ಯಕ್ಷ ರಮೇಶ ಬಿರಾದಾರ ಮಾತನಾಡಿ, ಈ ಭಾಗದ ರೈತರ ಹಾಗೂ ಸಂಘಟನೆಗಳ ಬೇಡಿಕೆಯಂತೆ ತೊಗರಿ ಖರೀದಿ ಕೇಂದ್ರ ಸ್ಥಾಪನೆಗೆ ಸಹಕರಿಸಿದ ಜಿಲ್ಲಾಧಿಕಾರಿಗಳಿಗೆ ಸಂಘಟನೆ ಸೇರಿದಂತೆ ಈ ಭಾಗದ ರೈತರ ಪರವಾಗಿ ಅಭಿನಂದಿಸುವುದಾಗಿ ಹೇಳಿದ ಅವರು, ತಾಲೂಕಿನ 5 ಹೋಬಳಿ ವ್ಯಾಪ್ತಿಯಲ್ಲಿ ಕೊಡೇಕಲ್‌ ಭಾಗದಲ್ಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತೊಗರಿ ಬೆಳೆ ಬೆಳೆದಿದ್ದಾರೆ.
 
ಕಾರಣಾಂತರಗಳಿಂದ ಈ ಭಾಗದಲ್ಲಿ ಹಲವು ತೊಗರಿ ಬೆಳೆದ ರೈತರು ಹೆಸರು ನೋಂದಾಯಿಸಲು ಸಾಧ್ಯವಾಗದ
ಹಿನ್ನೆಲೆಯಲ್ಲಿ ಬಾಕಿ ಉಳಿದಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಹೆಸರು ನೋಂದಾಯಿಸದೆ ಇರುವ ರೈತರಿಗೆ ಹೆಸರು ನೋಂದಾಯಿಸುವ ಅವಕಾಶ ಕಲ್ಪಿಸಲು ಅವಧಿ ವಿಸ್ತರಿಸಿ, ರೈತರ ಸಹಾಯಕ್ಕೆ ಮುಂದಾಗಬೇಕ್ಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
 
ಈಗಾಗಲೇ ಈ ಭಾಗದ 1300 ಜನ ರೈತರು ತೊಗರಿ ಖರೀದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 743
ಅರ್ಜಿಗಳನ್ನು ಸ್ಕ್ಯಾನ್‌ ಮಾಡಲಾಗಿದೆ. ಇನ್ನುಳಿದಂತೆ 500ರಿಂದ 600 ಅರ್ಜಿಗಳನ್ನು ಸ್ಕ್ಯಾನ ಆಗಬೇಕಾಗಿದೆ ಎಂದು ಸೊಸೈಟಿ ಕಾರ್ಯದರ್ಶಿ ತಿಳಿಸಿದ್ದಾರೆ ಎಂದು ಹೇಳಿದರು.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರಾದ ಗುಂಡು ರಾಜವಾಳ, ದೇವರಾಜ ಪಾಟೀಲ್‌ ತೀರ್ಥ, ಬಸವರಾಜ
ದೊಡಮನಿ, ರಮೇಶ ಪೂಜಾರಿ, ತಿಮ್ಮಣ್ಣ ಕರಬಸಪ್ಪನವರ, ಗೌಡಪ್ಪಗೌಡ ಪಾಟೀಲ್‌, ಶಂಕ್ರಪ್ಪ ಜಂಗಳಿ, ಬಸವರಾಜ ಸಜ್ಜನ್‌, ಅಂಬ್ರಪ್ಪ ಕಟ್ಟಿಮನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.