Advertisement

ದೇಶದಅಭಿವೃದ್ಧಿಯಲ್ಲಿಎಂಜಿನಿಯರ್‌ಗಳಪಾತ್ರ ಮಹತ್ವದ್ದು:ವಿಜಯವಿಷ್ಣುಮಲ್ಯ

12:14 PM May 11, 2018 | Team Udayavani |

ಮಹಾನಗರ: ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಂಶೋಧನ್‌- 18 ಅಂತಿಮ ವರ್ಷ ಬಿ.ಇ. ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳ ಪ್ರದರ್ಶನ ಕಾರ್ಯಕ್ರಮ ಇತ್ತೀಚೆಗೆ ನಗರದಲ್ಲಿ ನಡೆಯಿತು.

Advertisement

ಸಂಸ್ಥೆಯ ವಿವಿಧ ವಿಭಾಗಗಳಾದ ಸಿವಿಲ್‌, ಕಂಪ್ಯೂಟರ್‌ ಸೈನ್ಸ್‌, ಮೆಕ್ಯಾನಿಕಲ್‌, ಎರೋನಾಟಿಕಲ್‌, ಇನ್ಪರ್‌ಮೇಶನ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌, ಎಂ.ಸಿ.ಎ. ಮತ್ತು ಎಂ.ಟೆಕ್‌ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ಮಾದರಿಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಸಿವಿಲ್‌ ಎಂಜಿನಿಯರ್‌ಗಳ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ವಿಜಯ ವಿಷ್ಣು ಮಲ್ಯ ಮಾತನಾಡಿ, ಎಂಜಿನಿಯರ್‌ಗಳು ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ತಮ್ಮ ಸಂಶೋಧನೆಗಳಿಂದ ಅದ್ವಿತೀಯ ಬದಲಾವಣೆ ತಂದು ಸಮಾಜದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಕಾರಣೀಕೃತರಾಗುತ್ತಾರೆ ಎಂದರು.

ಸವಾಲು ಎದುರಿಸಿ
ಕಠಿನ ಪರಿಶ್ರಮಕ್ಕೆ ಪರ್ಯಾಯ ಮಾರ್ಗವಿಲ್ಲ. ಪ್ರತಿಯೊಬ್ಬನೂ ತಮ್ಮ ಬದುಕಿನಲ್ಲಿ ಸವಾಲುಗಳನ್ನು ಎದುರಿಸಿ ಅದನ್ನು ಮೆಟ್ಟಿ ನಿಂತು ಸಾಧಿಸುವ ಛಲ ಬೆಳೆಸಬೇಕು. ಒಳ್ಳೆ ವ್ಯಕ್ತಿಗಳು ಸಮಾಜದಲ್ಲಿ ಉತ್ತಮ ಬದಲಾವಣೆ ತಂದು ಸಮಾಜದ ಜೀವನಮಟ್ಟ ಉದ್ಧರಿಸುವತ್ತ ಪ್ರಯತ್ನ ಪಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳ ಸಹವಾಸವು ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿ ಉತ್ತಮ ಅಲೋ
ಚನೆಗಳೊಂದಿಗೆ ಸುಖಮಯ ಜೀವನ ನಿಮ್ಮೆಲ್ಲರದಾಗಲಿ ಎಂದು ಹರಸಿದರು.

ಶ್ರೀದೇವಿ ತಾಂತ್ರಿಕ ಮಹಾ ವಿದ್ಯಾಲಯದ ನಿರ್ದೇಶಕ ಡಾ| ಕೆ.ಇ. ಪ್ರಕಾಶ್‌ ಅವರು ಕಾರ್ಯಕ್ರಮದ ಪಕ್ಷಿನೋಟ ನೀಡಿದರು. ಸಂಸ್ಥೆಯ ಪ್ರಾಚಾರ್ಯ ಡಾ| ದಿಲೀಪ್‌ಕುಮಾರ್‌ ಕೆ. ಸ್ವಾಗತಿಸಿ, ಸಂಯೋಜಕ ಪ್ರೊ| ಆನಂದ ಉಪ್ಪಾರ್‌ ವಂದಿಸಿ, ನಯನಾ ಯಾದವ್‌ ನಿರೂಪಿಸಿದರು.

Advertisement

ಸಂಶೋಧನೆ ನಡೆಸಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಂಸ್ಥೆಯಿಂದ ಆದಷ್ಟು ಉಪಯೋಗಗಳನ್ನು ಪಡೆದುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ತಾವು ಕಲಿತಂತಹ ವಿಷಯಗಳನ್ನು ಪ್ರಯೋಗಕ್ಕೊಳಪಡಿಸಿ ಹೊಸ ಸಂಶೋಧನೆಗಳನ್ನು ನಡೆಸಿ ತಾವು ಕಲಿತ ಸಂಸ್ಥೆಗೆ ತಂದೆ, ತಾಯಿಗಳಿಗೆ ಉತ್ತಮ ಹೆಸರು ತಂದು ಕೊಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next