Advertisement

ಆಟಿ ವಿಶೇಷ ಗಂಜಿ, ಖಾದ್ಯ ಪ್ರದರ್ಶನ 

11:02 AM Aug 10, 2018 | |

ಬದಿಯಡ್ಕ : ಕರ್ಕಾಟಕ ಮಾಸದಲ್ಲಿಪ್ರಕೃತಿಯು ಔಷಧೀಯ ಗುಣಗಳಿಂದ ಕೂಡಿರುತ್ತದೆ. ಆದುದರಿಂದಲೇ ಆ ಸತ್ವವನ್ನು ಸ್ವೀಕರಿಸಿ ಶಾರೀರಿಕ ಮಾನಸಿಕ ಆರೋಗ್ಯವನ್ನು ಸುದೃಢಗೊಳಿಸುವ ನಿಟ್ಟಿನಲ್ಲಿ ಪ್ರಾಕೃತಿಕವಾಗಿ ದೊರೆಯುವ ವಸ್ತುಗಳನ್ನು ಉಪಯೋಗಿಸಿ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಿ ಸೇವಿಸುವುದು ರೂಢಿ ಎಂದು ಬದಿಯಡ್ಕ ಪಂಚಾಯತ್‌ ಅಧ್ಯಕ್ಷ ಕೆ.ಎನ್‌.ಕೃಷ್ಣ ಭಟ್‌ ಹೇಳಿದರು.

Advertisement

ಅವರು ಬದಿಯಡ್ಕ ಗ್ರಾಮ ಪಂಚಾಯತ್‌ ಕುಟುಂಬಶ್ರೀ ಸಿಡಿಎಸ್‌ ಸಂಯುಕ್ತ ಆಶ್ರಯದಲ್ಲಿ ಬದಿಯಡ್ಕ ಪಂಚಾಯತ್‌ ಸಮೀಪ ಜರ ಗಿದ ಆಟಿ ವಿಶೇಷ ಗಂಜಿ ಹಾಗೂ ಖಾದ್ಯಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ವೈವಿಧ್ಯಮಯವಾದ, ಶುಚಿ ರುಚಿಯ ಹತ್ತಾರು ಆಹಾರಗಳನ್ನು ಸಿಹಿ, ಖಾರ, ಹುಳಿ ರುಚಿಯಲ್ಲಿ ಬಾಯಲ್ಲಿ ನೀರೂರಿಸುವಂತೆ ಜೋಡಿಸಿಡಲಾಗಿತ್ತು. ಆರೋಗ್ಯಕ್ಕೆ ಸ್ಫೂರ್ತಿದಾಯಕವಾದ ಆಹಾರ ಪದಾರ್ಥಗಳ ಸೇವನೆಯಿಂದ ಆರೋಗ್ಯ ಭಾಗ್ಯವನ್ನು ವರ್ಧಿಸ ಬಹುದಾಗಿದೆ. ಆಧುನಿಕತೆ ನಮ್ಮ ಬದುಕು ಮತ್ತು ಆಹಾರ ಪದ್ಧತಿಯನ್ನು ನಿಯಂತ್ರಿಸುತ್ತಿರುವ ಈ ಕಾಲಘಟ್ಟದಲ್ಲಿ ಆಟಿ ತಿಂಗಳ ಮಹತ್ವವನ್ನು ಅರಿತು ನಡೆಯಬೇಕಾದ ಅಗತ್ಯವಿದೆ ಎಂದರು.

ಪಂ. ಉಪಾಧ್ಯಕ್ಷೆ ಸೈಬುನ್ನಿಸ ಅಧ್ಯಕ್ಷತೆ ವಹಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಶಾಮ್‌ ಪ್ರಸಾದ್‌ ಮಾನ್ಯ, ಪಂ. ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಎಲ್‌.ಎನ್‌.ಪೈ, ಜಯಂತಿ, ಡಿ.ಶಂಕರ, ವಿಶ್ವನಾಥ ಪ್ರಭು, ಅನಿತಾ ಕ್ರಾಸ್ತಾ, ಪ್ರೇಮಾ, ರಾಜೇಶ್ವರಿ, ಸಿ.ಡಿ.ಎಸ್‌. ಅಧ್ಯಕ್ಷೆ ಸುಧಾ ಜಯರಾಮ್‌, ಲೀಲಾವತಿ, ಗ್ರೇಸಿ, ಉಷಾ ಪಳ್ಳತ್ತಡ್ಕ, ಮಮತಾ ಮುಂತಾದವರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next